ಲೋಕದರ್ಶನವರದಿ
ರಾಣೇಬೆನ್ನೂರು: ಮೇ.14: ಕೇಂದ್ರ ಸಕರ್ಾರವೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದರ ಕುರಿತು ರಾಜ್ಯ ಸಕರ್ಾರಕ್ಕೆ ಸೂಚಿಸಿದ್ದು, ಈ ಕಾಯ್ದೆ ಜಾರಿಗೆ ಬಂದರೆ, ಸಾರ್ವಜನಿಕರಿಗೆ, ರೈತರಿಗೆ ಮತ್ತು ವರ್ತಕರಿಗೆ ಮತ್ತು ಹಮಾಲರಿಗೆ ಮಾರಕವಾಗಲಿದೆ. ಎಪಿಎಂಸಿ ವ್ಯವಸ್ಥಗೆ ಸಂಪೂರ್ಣ ಕುತ್ತು ಬರಲಿದೆ ಎಂದು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಉಪಾಧ್ಯಕ್ಷ ಗದಗಿನ ಡಿ.ಆರ್.ಪಾಟೀಲ ಹೇಳಿದರು.
ಸ್ಥಳೀಯ ಎಪಿಎಂಸಿ ಅಧ್ಯಕ್ಷರ ಕಛೇರಿಯಲ್ಲಿ ಗುರುವಾರ ಸಂಜೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಈ ಕಾಯ್ದೆ ವಿರೋಧಿಸಿ ಜಿಲ್ಲೆಯ ಹಾಗೂ ರಾಜ್ಯದ ಎಪಿಎಂಸಿ ಅಧ್ಯಕ್ಷರುಗಳು ಈಗಾಗಲೇ ರಾಜಕೀಯ ಪಕ್ಷ ಬೇಧ ಮರೆತು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ಜಾರಿಗೆ ಬಂದರೆ, ಹೊರ ದೇಶದ ಕಂಪನಿಗಳು ಎಪಿಎಂಸಿ ಸಂಪರ್ಕವಿಲ್ಲದೇ, ಹೊರಗಿನಿಂದಲೇ ರೈತರ ಉತ್ಪನ್ನಗಳನ್ನು ಖರೀದಿಸಿದರೆ, ಎಪಿಎಂಸಿಗೆ ಶುಲ್ಕ ಬರುವುದಿಲ್ಲ.
ಶೇ.5ರಷ್ಟು ಜಿಎಸ್ಟಿ ಕಡಿತಗೊಂಡು ಸಕರ್ಾರಕ್ಕೂ ಸಹ ನಷ್ಟ ಉಂಟಾಗುತ್ತದೆ. ಇದರಿಂದ ವರ್ತಕರು, ದಲಾಲರು, ಹಮಾಲರು, ಎಪಿಎಂಸಿಗೆ ಸಂಪೂರ್ಣ ಮಾರಕವಾಗುತ್ತಿದ್ದು ಸಕರ್ಾರ ಕೂಡಲೇ ಸುಗ್ರೀವಾಜ್ಞೆಯನ್ನು ಜಾರಿಗೆ ತರುವುದನ್ನು ತಡೆಹಿಡಿಯದಿದ್ದಲ್ಲಿ ಮುಂದೆ ಎಲ್ಲರೂ ಒಂದಾಗಿ ಅನಿಧರ್ಿಷ್ಟಾವಧಿಯವರೆಗೂ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲಾಗುವುದ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಚಂದ್ರಶೇಖರಪ್ಪ ಕಳಸದ, ಉಪಾಧ್ಯಕ್ಷೆ ಕಮಲಮ್ಮ ಪಾರ್ವತೇರ, ಶಿಗ್ಗಾವಿ ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಬ್ಯಾಡಗಿಯ ಅಧ್ಯಕ್ಷ ಕೆ.ಎಸ್.ನಾಯ್ಕರ್, ಅಧ್ಯಕ್ಷ ಹಿರೇಕೆರೂರು ಅಧ್ಯಕ್ಷ ಸಿದ್ದನಗೌಡ ಕರೇಗೌಡ್ರ, ಸ್ಥಳೀಯ ಮಾಜಿ ಅಧ್ಯಕ್ಷರಾದ ಏಕನಾಥ ಬಾನುವಳ್ಳಿ, ಮಂಜನಗೌಡ ಪಾಟೀಲ, ರಾಜೇಂದ್ರ ಅಂಬಿಗೇರ, ಬಸವರಾಜ ಸವಣೂರ, ಜಿ.ಜಿ.ಹೊಟ್ಟಿಗೌಡ್ರ, ಜೆಟ್ಟಪ್ಪ ಕರೇಗೌಡ್ರ, ಅಶೋಕ ಹೊಟ್ಟಿಗೌಡ್ರ, ವಾಣಿಜ್ಯೋಧ್ಯಮ ಸಂಸ್ಥೆಯ ಉಪಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರ, ವರ್ತಕರ ಸಂಘದ ಅಧ್ಯಕ್ಷ ಸದಾಶಿವಪ್ಪ ಉಪ್ಪಿನ, ಸದಸ್ಯರಾದ ಶರತ್ಚಂದ್ರ ದೊಡ್ಡಮನಿ, ನಗರಸಭಾ ಸದಸ್ಯ ಪಿ.ಜೆ.ಮರಿಯಮ್ಮನವರ, ಬಸನಗೌಡ ಮರದ, ಕೃಷ್ಣಪ್ಪ ಕಂಬಳಿ ಸೇರಿದಂತೆ ಮತ್ತಿತರರ ಗಣ್ಯರು, ವರ್ತಕರು , ಎಪಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.