5ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕುರ್ತಕೋಟಿ ಗ್ರಾಮದಲ್ಲಿ ಶುಕ್ರವಾರ ದಂದು ಸಂತೆ ಮಾರುಕಟ್ಟೆ ಪ್ರಾಂಗಣ

The 5th Kannada Literary Conference was held in Kurthakoti village on Friday at the Santhe Market Gr

ಗದಗ:16:ಕನ್ನಡ ಸಾಹಿತ್ಯ ಪರಿಷತ್ತು, ಹೋಬಳಿ ಘಟಕ, ಮುಳಗುಂದ ಮತ್ತು ಸೊರಟೂರು ಕನ್ನಡ ಸಾಹಿತ್ಯ ಪರಿಷತ್ತು, ಗ್ರಾಮ ಘಟಕ, ಕುರ್ತಕೋಟಿ,ಗದಗ ತಾಲೂಕ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕುರ್ತಕೋಟಿ ಗ್ರಾಮದಲ್ಲಿ 18ನೇ ಏಪ್ರೀಲ್ 2025 ರ ಶುಕ್ರವಾರ ದಂದು ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗುವುದು.

ಈ ಸಮ್ಮೇಳನವು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಪರಿಣಮಿಸುವಂತೆ ನಮ್ಮ ಪ್ರಯತ್ನ ನಡೆದಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಗದಗ ತಾಲೂಕ ಘಟಕದ ಅಧ್ಯಕ್ಷೆ ಡಾ.ರಶ್ಮಿ ಅಂಗಡಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಏಪ್ರಿಲ್‌-18 ರಂದು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜ,ಪರಿಷತ್ತಿನ ಧ್ವಜ,ಕನ್ನಡ ಧ್ವಜಾರೋಹಣ ನೆರವೇರುವುದು.ಬೆಳಿಗ್ಗೆ 8-30ಕ್ಕೆ ಕನ್ನಡ ಭುವನೇಶ್ವರಿ ಭಾವಚಿತ್ರ ಹಾಗೂ  ಸಮ್ಮೇಳನದ ಅಧ್ಯಕ್ಷರಾದ ಜೆ ಕೆ ಜಮಾದಾರ ರವರ ಮೇರವಣಿಗೆ,ಬೆಳಿಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟನಾ ಸಮಾರಂಭ  ಜರುಗಲಿದ್ದು, ಸಾನಿಧ್ಯ  ಶ್ರೀ ಮ.ನಿ.ಪ್ರ. ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಸಂಸ್ಥಾನಮಠ, ಹೊಸಳ್ಳಿ, ಘನ ಉಪಸ್ಥಿತಿ   ಬಸವರಾಜ ಹೊರಟ್ಟಿ, ಸಭಾಧ್ಯಕ್ಷರು ಕರ್ನಾಟಕ ವಿಧಾನ ಪರಿಷತ್ತು, ಬೆಂಗಳೂರು, ಸರ್ವಾಧ್ಯಕ್ಷತೆ  ಜಗನ್ನಾಥಸಿಂಗ್ ಕಿಶನ್ಸಿಂಗ್ ಜಮಾದಾರ ಖ್ಯಾತ ಸಾಹಿತಿಗಳು ಬೆಟಗೇರಿ-ಗದಗ, ನಿಕಟಪೂರ್ವ ಅಧ್ಯಕ್ಷರು  ಪರಮಪೂಜ್ಯ  ಶಿವಶರಣೆ ಡಾ. ನೀಲಮ್ಮ ತಾಯಿಯವರು ಅಸುಂಡಿ, ಉದ್ಘಾಟನೆ  ಡಾ. ಎಚ್‌. ಕೆ. ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರ, ಕಾನೂನು ರಚನೆ, ಪ್ರವಾಸೋದ್ಯಮ ಇಲಾಖೆ, ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯ ಅತಿಥಿಗಳು   ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳು ಮತ್ತು ಲೋಕಸಭಾ ಸದಸ್ಯರು, ಹಾವೇರಿ-ಗದಗ ಮತಕ್ಷೇತ್ರ, ಸ್ಮರಣ ಸಂಚಿಕೆ ಬಿಡುಗಡೆ ಜಿ. ಎಸ್‌. ಪಾಟೀಲ ಅಧ್ಯಕ್ಷರು, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಶಾಸಕರು ರೋಣ ಮತಕ್ಷೇತ್ರ, ಕೃತಿ ಬಿಡುಗಡೆ  ಎಸ್‌. ವಿ. ಸಂಕನೂರ ಶಾಸಕರು, ಕರ್ನಾಟಕ ವಿಧಾನ ಪರಿಷತ್,  ಕೃತಿಗಳು  “ಕಡಲ ತೀರದ ಚೆಲುವೆ” ಶ ಎಂ. ಆರ್‌. ನಲವಡಿ, “ಚೈತನ್ಯ ಪ್ರಭೆ”  ಪಿ. ವಿ. ಶಿರಹಟ್ಟಿ, “ವಿಶ್ವಕರ್ಮ ಸ್ತುತಿ ಮಾಲೆ”  ಗೋಪಾಲ ಬಡಿಗೇರ,“ಕುರ್ತಕೋಟಿ ನೆಲೆ-ಹಿನ್ನಲೆ”  ಕರಿಯಪ್ಪ ಕೊಡವಳ್ಳಿ “ಭಾವ ಬೆಳಕು”  ಬೂದಪ್ಪ ಚ. ಜಕ್ಕಲಿ, ಚಿತ್ರ ಸಂತೆ ಉದ್ಘಾಟನೆ  ಸಿ. ಸಿ. ಪಾಟೀಲ ಶಾಸಕರು, ನರಗುಂದ ಮತಕ್ಷೇತ್ರ,

ಪ್ರದರ್ಶನ : ವಿದ್ಯಾದಾನ ಸಮಿತಿಯ ಜೆ. ಎನ್‌. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಗೂ ಕುರ್ತಕೋಟಿ ಗ್ರಾಮದ ಕಲಾವಿದರಿಂದ, ಚಿಣ್ಣರ ಚಿತ್ರಕಲಾ ಪ್ರದರ್ಶನ ಉದ್ಘಾಟನೆ  ಚಂದ್ರು ಲಮಾಣಿ ಶಾಸಕರು, ಶಿರಹಟ್ಟಿ ಮತಕ್ಷೇತ್ರ, ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ   ಡಿ.ಆರ್‌. ಪಾಟೀಲ ಮಾಜಿ ಶಾಸಕರು ಭಾಗವಹಿಸುವುದಾಗಿ ತಿಳಿಸಿದರು.

ಪತ್ರಿಕಾ ಗೋಷ್ಠಿ ವೇಳೆ ನಿವೃತ್ತ ಉಪನ್ಯಾಸಕರಾದ ಕೆ ಎಚ್ ಬೇಲೂರ, ಜಿ ಎನ್ ಪಾಟೀಲ, ಬಿ ಸಿ ಲಕ್ಕುಂಡಿ, ರಾಘವೇಂದ್ರ ಹೊಸಮನಿ,ಕರಿಯಪ್ಪ ಕೊಡವಳ್ಳಿ, ಮಂಜುನಾಥ ಜಕ್ಕಲಿ ಸೇರಿದಂತೆ ಇತರರಿದ್ದರು.