ಗಾಂಧಿ ಕುಟೀರದಲ್ಲಿ 4ನೇ ದಿನದ ಸಂಕಲ್ಪ ಉತ್ಸವ

ಲೋಕದರ್ಶನ ವರದಿ

ಯಲ್ಲಾಪುರ, 5: ಸಂಕಲ್ಪ ಸಂಸ್ಥೆ ಹೊಸ ಕಲಾವಿದರನ್ನು ಹಾಗೂ ಕಲಾ ಪ್ರಕಾರಗಳನ್ನು ಗುರುತಿಸಿ ಸಂಕಲ್ಪ ಉತ್ಸವದಲ್ಲಿ  ವೇದಿಕೆ ಕಲ್ಪಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ತಾಪಂ ಆವಾರದ ಗಾಂಧಿ ಕುಟೀರದಲ್ಲಿ 4 ನೇ ದಿನದ ಸಂಕಲ್ಪ ಉತ್ಸವದಲ್ಲಿ ಕನರ್ಾಟಕ ಯಕ್ಷಗಾನ ಬೆಂಗಳೂರು,ಯಕ್ಷಗಾನ ಸಂಶೋಧನ ಕೇಂದ್ರ ಕುಮಟಾ, ಸಂಕಲ್ಪ ಸೇವಾ ಸಂಸ್ಥೆ   ಸಹಯೋಗದಲ್ಲಿ ಶೇಣಿ ಭಾರತ ದರ್ಶನ ವಿಚಾರ ಸಂಕಿರಣ ಮತ್ತು ತಾಳಮದ್ದಳೆ ಹಾಗೂ 2ನೇ ಮುದ್ರಣಗೊಂಡ  ಜಿ.ಎಲ್ ಹೆಗಡೆ ರಚಿಸಿದ ಶೇಣಿ ಭಾರತದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಂ.ಎ ಹೆಗಡೆಯವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.ಈಕ್ಷೇತ್ರದ ಬೆಳವಣಿಗೆಗೆ ಅವರಿಂದ ಹೆಚ್ಚಿನ ನಿರೀಕ್ಷೆಯಿದೆ.ಸರಕಾರ ಇಂತಹ ಸಾಂಸ್ಕೃತಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದೆ.ಯಕ್ಷಗಾನ ಉಳಿವಿಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದರು. 

ನಿವೃತ್ತ ಭಾಷಾ ಶಾಸ್ತ್ರಜ್ಞ ಡಾ.ಕೆಪಿ ಭಟ್ಟ್ ಮಾತನಾಡಿ ಯಕ್ಷರಂಗದಲ್ಲಿ ಶೇಣಿಯವರ ಅದ್ಯಯನಪೂರ್ಣ ವಿಮಶರ್ಾತ್ಮಕ ಅರ್ಥದಾರಿಕೆ ಇಂದಿನ ಕಲಾವಿದರಿಗೆ ದಾರಿದೀಪವಾಗಿದೆ.ಯಕ್ಷರಂಗದಲ್ಲಿ ಪಾತ್ರಧಾರಿಗೆ ತನ್ನ ಅಲೋಚನೆಗೆ ಶಕ್ತಿ ತುಂಬುವ ಸಾಮಥ್ರ್ಯವಿರುತ್ತದೆ.ಈ ಕಲಾಪ್ರಕಾರದಲ್ಲಿ ಸಂಪೂರ್ಣ ರಸಾನುಭವ ಅಭಿವ್ಯಕ್ತಿಗೆ ಅವಕಾಶವಿದೆ.ಪಾತ್ರವನ್ನು ವಿಭಿನ್ನ ದೃಷ್ಟಿಯಿಂದ ಸರ್ವಕಾಲಕ್ಕೂ ಅನ್ವಯವಾಗುವಂತೆ  ಪಾತ್ರದ ಪರ ನಿಲ್ಲುವ ಸಂವಹನದ ವೈಶಿಷ್ಟ್ಯತೆ ಶೇಣಿಯವರದಾಗಿತ್ತು ಎಂದರು.

ಶೇಣಿ ಭಾರತದ ಪಾತ್ರ ಚಿತ್ರಣದ ಕುರಿತು ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ ಪುರಾಣ ಕಥೆಯ ಪಾತ್ರಪೋಷಣ ಮಾಡುವ ಮೂಲಕ ಅರ್ಥಗಾರಿಕೆಯಲ್ಲಿ ವಿಶೇಷತೆ ಮೂಡಿಸಿದ ್ದಾರೆ.ಅವರು  ತಾಳಮದ್ದಳೆಯಲ್ಲಿ ನಿತ್ಯನೂತನವನ್ನು ತೋರಿಸಿಕೊಟ್ಟಿದ್ದಾರೆ.  ಅವರ 17 ಪಾತ್ರಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ .ಇಂದಿನ ರಾಜಕೀಯ ವಿದ್ಯಮಾನಕ್ಕೂ  ಶೇಣಿ ಭಾರತ ಪ್ರಸ್ತುತವೆನಿಸುತ್ತದೆ ಎಂದರು.

ಒಳಸುಳಿವುಗಳು ಕುರಿತು ಕುಮಟಾದ ನಿವೃತ್ತ ಪ್ರಾಚಾರ್ಯ ಮಹೇಶ ಅಡಕೊಳ್ಳಿ ಮಾತನಾಡಿ ಶೇಣಿವರು ಶಬ್ದಬ್ರಹ್ಮನಾಗಿ ಅನೇಕ ಹೊಸ ಹರಿವು ನೀಡಿದ ಚೇತನರಾಗಿದ್ದರು. ಶೇಣಿ ಭಾರತದಲ್ಲಿ ಒಳಹೊರವನ್ನು ಖಂಡಗ್ರಹಣವನ್ನು ತೋರಿಸುತ್ತದೆ.ಹಾಸ್ಯ ಪ್ರಜ್ಞೆ ಮೆಲಕುಹಾಕುವಂತಿದೆ.ತರ್ಕಬದ್ದ ಅಧ್ಯಯನಕ್ಕೆ ಯೋಗ್ಯವಾದ ಗ್ರಂಥವಾಗಿದೆ ಎಂದರು.ಅದ್ಯಕ್ಷತೆವಹಿಸಿ

ಖ್ಯಾತ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ  ಶೇಣಿಯವರು ಮಾತಿನ ಅಚ್ಚುಕಟ್ಟುತನಕ್ಕೆ ತಿಮಿಂಗಲದಂತಿದ್ದರು. ಅವರಿಗೆ ಮಹಾಭಾರದಂತಹ ಸಮುದ್ರವೇ ಅವರಿಗೆ ಬೇಕಾಗಿತ್ತು. ತಲ್ಲಣಗೊಳ್ಳದೇ ಮಹಾಭಾರತವನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ.ಅವರು ಕಲೆಯ ಎಲ್ಲ ರಹಸ್ಯಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ ಹೆಗಡೆ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮತನಾಡಿದರು. ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಮುಕ್ತಾಶಂಕರ ಪ್ರಾಥರ್ಿಸಿದರು.ಡಾ. ಡಿ.ಕೆ ಗಾಂವ್ಕರ್ ನಿರ್ವಹಿಸಿದರು.