ಸಂಸ್ಥಾನ ಶ್ರೀಗವಿಮಠದ ಮ ನಿ ಪ್ರ ಜ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ

ಸಂಸ್ಥಾನ ಶ್ರೀಗವಿಮಠದ  ಮ ನಿ ಪ್ರ ಜ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ The 23rd Punyaradhana of the Mani Praja Shivashantaveera Mahashivayogi of the Sansthan Srigavi Math


            ಕೊಪ್ಪಳ  12: ಸಂಸ್ಥಾನ ಶ್ರೀ ಗವಿಮಠದ  ಮ ನಿ ಪ್ರ ಜ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯಾರಾಧನೆ ನಿಮಿತ್ಯ ದಿನಾಂಕ 12.03.2026ರಂದು ಬೆಳಿಗ್ಗೆ 6:00 ಗಂಟೆಗೆ ಪರಮ ಪೂಜ್ಯ ಶ್ರೀ. ಮ. ನಿ. ಪ್ರ. ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಿ ಅಶೋಕ್ ಸರ್ಕಲ್ ಹಾಗೂ ಗಡಿಯಾರ ಕಂಬದ ಮುಖಾಂತರ ಶ್ರೀ ಗವಿಮಠಕ್ಕೆ 9:00ಗಂಟೆಗೆ ತಲುಪಿತು. ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಹೂವಿನಹಡಗಲಿಯ ಶ್ರೀ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಕಡಲಬಾಳಿನ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು, ಬಿಸರಳ್ಳಿಯ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು, ಚಿಕ್ಕಮ್ಯಾಗೇರಿ ಮೇಲುಗದ್ದುಗೆ ಹಿರೇಮಠ ಶ್ರೀ ಗುರುಶಾಂತವೀರ ಸ್ವಾಮಿಗಳು ಹಾಗೂ ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು, ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಯ ನಂತರ ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆ ಹಾಗೂ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಧನ್ಯರಾದರು. ಶ್ರೀಮಠದ ದಾಸೋಹದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಕ್ತಾಧಿಗಳು ಪ್ರಸಾದವನ್ನು ಸ್ವೀಕರಿಸಿದರು ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.