ಸಂಸ್ಥಾನ ಶ್ರೀಗವಿಮಠದ ಮ ನಿ ಪ್ರ ಜ ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯರಾಧನೆ
The 23rd Punyaradhana of the Mani Praja Shivashantaveera Mahashivayogi of the Sansthan Srigavi Math
ಕೊಪ್ಪಳ 12: ಸಂಸ್ಥಾನ ಶ್ರೀ ಗವಿಮಠದ ಮ ನಿ ಪ್ರ ಜ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯಾರಾಧನೆ ನಿಮಿತ್ಯ ದಿನಾಂಕ 12.03.2026ರಂದು ಬೆಳಿಗ್ಗೆ 6:00 ಗಂಟೆಗೆ ಪರಮ ಪೂಜ್ಯ ಶ್ರೀ. ಮ. ನಿ. ಪ್ರ. ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಿ ಅಶೋಕ್ ಸರ್ಕಲ್ ಹಾಗೂ ಗಡಿಯಾರ ಕಂಬದ ಮುಖಾಂತರ ಶ್ರೀ ಗವಿಮಠಕ್ಕೆ 9:00ಗಂಟೆಗೆ ತಲುಪಿತು. ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಹೂವಿನಹಡಗಲಿಯ ಶ್ರೀ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಕಡಲಬಾಳಿನ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು, ಬಿಸರಳ್ಳಿಯ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು, ಚಿಕ್ಕಮ್ಯಾಗೇರಿ ಮೇಲುಗದ್ದುಗೆ ಹಿರೇಮಠ ಶ್ರೀ ಗುರುಶಾಂತವೀರ ಸ್ವಾಮಿಗಳು ಹಾಗೂ ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು, ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಯ ನಂತರ ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆ ಹಾಗೂ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಧನ್ಯರಾದರು. ಶ್ರೀಮಠದ ದಾಸೋಹದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಕ್ತಾಧಿಗಳು ಪ್ರಸಾದವನ್ನು ಸ್ವೀಕರಿಸಿದರು ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 