ಲಾಡ್ಸರ್್ 09: ಕ್ರಿಕೆಟ್ ಕಾಶಿ ಲಾಡ್ರ್ಸ ಮೈದಾನದಲ್ಲಿ ಇಂದಿನಿಂದ ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ಭಾರತ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ಆರಂಭಗೊಳ್ಳಬೇಕಿದ್ದು, ಇದಕ್ಕೆ ವರುಣನ ಕಾಟ ಬೇರೆ ಶುರುವಾಗಿದೆ. ಹೀಗಾಗಿ ಮೊದಲ ಸೆಷನ್ ಸಂಪೂರ್ಣ ರದ್ದಾಗಿದೆ.
ಬೆಳಗ್ಗೆಯಿಂದ ತುಂತುರು ಮಳೆ ಆರಂಭಗೊಂಡಿರುವ ಕಾರಣ ಟಾಸ್ ಕೂಡ ಆಗಿಲ್ಲ. ಇದರ ಮಧ್ಯೆ ಟೀಂ ಇಂಡಿಯಾ ಆಡುವ 11ರ ಬಳಕ ಲೀಕ್ ಆಗಿದೆ ಎಂಬ ಮಾತು ಕೇಳಿ ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಆಡುವ 11ರಲ್ಲಿ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿಯುತ್ತಿದೆ ಎನ್ನಲಾಗಿದೆ. ಮೊದಲ ಪಂದ್ಯದಲ್ಲಿ ಚೇತೇಶ್ವರ್ ಪೂಜಾರಾ ಅವರಿಗೆ ಆಡುವ 11ರಲ್ಲಿ ಸ್ಥಾನ ನೀಡದ ಕಾರಣಕ್ಕಾಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟಾದರೂ ತಂಡದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಟೀಂ ಇಂಡಿಯಾ ಆಡುವ 11ರ ಬಳಗ
ಮುರುಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ದಿನೇಶ್ ಕಾತರ್ಿಕ್, ಆರ್ ಅಶ್ವಿನ್, ಹಾದರ್ಿಕ್ ಪಾಂಡ್ಯ, ಇಶಾಂತ್ ಶಮರ್ಾ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ. ಇನ್ನು ಇತ್ತ ಇಂಗ್ಲೆಂಡ್ ತಂಡ ಎರಡು ಬದಲಾವಣೆವೊಂದಿಗೆ ಕಣಕ್ಕಿಳಿದಿದ್ದು, ಮೊಯಿನ್ ಅಲಿ ಬದಲಿಗೆ ಕ್ರಿಸ್ ವೋಕ್ಸ್ ಅವಕಾಶ ಪಡೆದುಕೊಂಡಿದ್ದರೆ, ಡೇವಿಡ್ ಬದಲಿಗೆ ಓಲಿ ಪೊಪ್ಸ್ ಸ್ಥಾನ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ಆಡುವ 11ರ ಬಳಗ
ಅಲಸ್ಟೇರ್ ಕುಕ್, ಕೀಟನ್ ಜಿನ್ನಿಂಗ್ಸ್, ಜೋ ರೂಟ್(ಕ್ಯಾಪ್ಟನ್), ಓಲಿ ಪೋಪ್, ಜಾನಿ ಬೇರ್ಸ್ಟೋವ್, ಜೋಶ್ ಬಟ್ಲರ್, ಕ್ರಿಸ್ ವೋಕ್ಸ್, ಸ್ಯಾಮ್ ಕುರಣ್, ಆದಿಲ್ ರಶೀದ್, ಸ್ಟುವಟರ್್ ಬ್ರಾಂಡ್, ಜೇಮ್ಸ್ ಆಂಡರ್ಸನ್