ಲೋಕದರ್ಶನ ವರದಿ
ತಾಳಿಕೋಟೆ 12: ತಾಲೂಕಿನ ದೇವರ ಹುಲಗಬಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸರಿಯಾಗಿ ಸೇವೆ ಸಲ್ಲಿಸದೇ ಇರುವುದರಿಂದ ಅವರೆಲ್ಲರನ್ನೂ ಸಾಮೂಹಿಕವಾಗಿ ಬೇರೆಡೆಗೆ ವರ್ಗಾವಣೆಗೆ ಆಗ್ರಹಿಸಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮದ ಶಾಲೆಯಲ್ಲಿ ಮಂಗಳವಾರ ಇಂಗಳಗೇರಿ ಕ್ಲಸ್ಟರ್ ಮಟ್ಟದ ಮುಖ್ಯಗುರುಗಳ ಸಭೆ ಕರೆಯಲಾಗಿತ್ತು.ವಿಷಯ ತಿಳಿದ ಗ್ರಾಮಸ್ಥರು,ಯುವಕರು ಶಾಲೆಗೆ ಆಗಮಿಸಿ ಸಿಆರ್ಸಿ ಜಿ.ಆರ್.ಸೋನಾರ ಅವರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿದರು.
ಮನವಿಯಲ್ಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹ ಶಿಕ್ಷಕಿ ಎಂ.ಜಿ.ವಾಲಿ ಹಾಗೂ ಇನ್ನುಳಿದ ಶಿಕ್ಷಕಿಯರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೇ ಶಾಲೆಯ ಹೊರಗಡೆ ಹರಟೆ ಹೊಡಯುತ್ತ ಕೂಡುತ್ತಾರೆ.ಮದ್ಯಾಹ್ನ ಊಟ ಮಾಡಿ ತರಗತಿ ಕೋಣೆಯಲ್ಲಿಯೇ ನಿದ್ರೆ ಮಾಡುತ್ತಾರೆ.ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ.ಊರಿನ ಗ್ರಾಮಸ್ಥರು,ಮಕ್ಕಳು ಶಿಕ್ಷಣದ ಕುರಿತು ಸರಿಯಾದ ಪಾಠ ಮಾಡಲು ಹೇಳಿದರೆ ಅವರಿಗೆ ಸರಿಯಾದ ಸ್ಪಂದನೆ ನೀಡದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ ಎಂದು ದೂರಿದ್ದಾರೆ.
ತಮ್ಮಲ್ಲಿ ಇದ್ದ ಮೊಬೈಲ್ನಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಾ ಹೋಗುತ್ತಾರೆ.ಸಂಪೂರ್ಣ ನಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟದ ಬಗ್ಗೆ ಜವಾಬ್ದಾರಿ ವಹಿಸಿಕೊಂಡು ಸಾಮೂಹಿಕವಾಗಿ ಈ ಎಲ್ಲ ಶಿಕ್ಷಕರನ್ನು ವಗರ್ಾಯಿಸುವಂತೆ ಆಗ್ರಹಿಸಿದ್ದಾರೆ.
ಬಳಿಕ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಆರ್.ಸೋನಾರ ಗ್ರಾಮಸ್ಥರ ಸಭೆ ನಡೆಸಿದರು.ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಾಗಿ ಇನ್ನುಳಿದ ಶಿಕ್ಷಕಿಯರ ಮೇಲೆ ಬೆರಳು ಮಾಡದೇ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಜಿ.ವಾಲಿ ಅವರ ಮೇಲೆ ದೂರಿನ ಸುರಿಮಳೆಗೈಯ್ದರು.ಮುಖ್ಯಗುರುಗಳು ಇಲ್ಲಿ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ.ಅವರ ಮಾತು ಯಾರು ಕೇಳುವುದಿಲ್ಲ.ಶಾಲೆಯಲ್ಲಿ ಒಟ್ಟು 1-8ನೇ ತರಗತಿಯವರೆಗೆ ವರ್ಗಗಳಿದ್ದು 122 ವಿದ್ಯಾಥರ್ಿಗಳಿದ್ದಾರೆ.ಒಟ್ಟು ಆರು ಜನ ಶಿಕ್ಷಕರಿದ್ದು ಅದರಲ್ಲಿ ಮುಖ್ಯಶಿಕ್ಷಕರು ಪುರುಷರಾಗಿದ್ದರೆ ಐವರು ಶಿಕ್ಷಕಿಯರಿದ್ದಾರೆ.
ಮುಖ್ಯಗುರು ಎ.ವಿ.ಕುಲಕಣರ್ಿ ಶಿಕ್ಷಕಿಯರಿಗೆ ವಿರುದ್ಧ ಮಾತನಾಡದೇ ಮೌನವಾಗಿರುವುದೇ ಉತ್ತಮ ಎಂಬಂತೆ ಸೇವೆ ಸಲ್ಲಿಸುತ್ತಿದ್ದಾರೆ.ಶಿಕ್ಷಕಿ ಎಂ.ಜಿ.ವಾಲಿ ಅವರಂತೂ ಮುಖ್ಯಶಿಕ್ಷಕರಿಂದಲೇ ತಮ್ಮ ವರ್ಗ ಕೋಣೆಗೆ ಚಾಕ್ಪೀಸ್ ತರಿಸಿಕೊಳ್ಳುತ್ತಾರೆ.ಪ್ರಾರ್ಥನೆ ಸಮಯದಲ್ಲಿ ಇರುವುದಿಲ್ಲ.ಇವರಿಗೆ ಯಾರೂ ಏನು ಕೇಳುವವರು ಹೇಳುವರು ಯಾರು ಇಲ್ಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥರಾದ ಗ್ರಾಪಂ ಸದಸ್ಯ ನಿಂಗನಗೌಡ ಪಾಟೀಲ,ಎಂ.ಎಚ್.ನಾವದಗಿ, ,ನಾಗನಗೌಡ ಪಾಟೀಲ, ಆರ್.ಜಿ.ಹಿರೇಮಠ, ಎಂ.ಎನ್.ಇನಾಮದಾರ, ಮಹ್ಮದರಫೀಕ ಇನಾಮದಾರ, ಎಚ್.ಎಂ.ಚಲವಾದಿ, ಶಿವಪುತ್ರಪ್ಪ ಚಲವಾದಿ, ಮಾದೇವಿ ಹಿರೇಮಠ, ಭಾಷಾಸಾಬ ಮಾಗಿ, ಅಲ್ಲಾಪಟೇಲ ಬಿರಾದಾರ, ಹುಸೇನಪಟೇಲ್ ಬಿರಾದಾರ, ಭೀಮಣ್ಣ ಚಲವಾದಿ, ಯಾಸೀನ ಹಾದಿಮನಿ, ಮಾರುತಿ ಮಾದರ, ರಹೆಮಾನಸಾಬ ತಾಳಿಕೋಟಿ ಇದ್ದರು.
ಅಧಿಕಾರಿ ಗೈರು ಎಂದು ಬರೆದಿದ್ದರೂ ಸಹಿ ಮಾಡಿದ ಶಿಕ್ಷಕಿ
ಬೆಳಗ್ಗೆ 12 ಗಂಟೆಯವರೆಗೂ ಶಾಲೆಗೆ ಆಗಮಿಸದೇ ಇದ್ದ ಎಂ.ಜಿ.ವಾಲಿ ಅವರ ಹೆಸರಿನ ಮುಂದೆ ಸಮೂಹ ಸಂಪನ್ಮೂಲ ಅಧಿಕಾರಿ ಜಿ.ಆರ್.ಸೋನಾರ ಗೈರು ಎಂದು ಕೆಂಪು ಅಕ್ಷರದಲ್ಲಿ ಬರೆದು ಸಹಿ ಮಾಡಿದ್ದರು.ಅಲ್ಲದೇ ಮುಖ್ಯಗುರುಗಳು ಹಾಜರಿಪುಸ್ತಕದಲ್ಲಿ ಬೆಳಗಿನ ಹಾಗೂ ಮದ್ಯಾಹ್ನದ ಅವಧಿಯಲ್ಲಿ ಗೈರು ಎಂದು ಬರೆದಿದ್ದರು.ಆದರೆ ಮದ್ಯಾಹ್ನ 2 ಗಂಟೆಗೆ ಹಾಜರಾಗಿರುವುದಾಗಿ ಅಧಿಕಾರಿಗಳ ಸಹಿಯನ್ನೇ ಮರೆ ಮಾಚಿ ಶಿಕ್ಷಕಿ ಎಂ.ಜಿ.ವಾಲಿ ಅವರು ತಮ್ಮ ಸಹಿ ಮಾಡಿದ್ದಾರೆ.
ಎಸ್ಡಿಎಂಸಿ ರಚನೆ ಇಲ್ಲ:ಕಳೆದ ಹಲವಾರು ವರ್ಷಗಳಿಂದ ಎಸ್ಡಿಎಂಸಿ ರಚನೆಯಾಗಿಲ್ಲ.ಮೂರು ನೋಟಿಸ್ ನೀಡಿದ್ದರೂ ಕೋರಂಭರ್ತಿ ಆಗಿಲ್ಲದ ಕಾರಣ ಎಸ್ಡಿಎಂಸಿ ರಚನೆಗೆ ಸಭೆ ನಡೆದಿಲ್ಲ ಎಂದು ಮುಖ್ಯಗುರು ಎ.ವಿ.ಕುಲಕರ್ಣಿ ತಿಳಿಸಿದರು.
ನಮ್ಮ ತಪ್ಪಿದ್ದರೆ ಕ್ರಮ ಕೈಗೊಳ್ಳಿ:
ನಮ್ಮಿಂದ ತಪ್ಪಾಗಿದ್ದರೆ ಅಧಿಕಾರಿಗಳು,ಗ್ರಾಮಸ್ಥರು ಯಾವುದೇ ಕ್ರಮ ಜರುಗಿಸಿದರೂ ಅದಕ್ಕೆ ನಾವು ಸಿದ್ಧರಿದ್ದೇವೆ.ನಾವು ಪಡೆದುಕೊಳ್ಳುವ ಸಂಬಳಕ್ಕೆ ಸರಿಯಾಗಿ ಸೇವೆ ಸಲ್ಲಿಸುತ್ತಿದ್ದೇವೆ.ತಪ್ಪಾಗಿದೆ ಎಂದರೆ ಅದನ್ನು ತಿದ್ದಿಕೊಳ್ಳಲು ಸಿದ್ಧರಿದ್ದೇವೆ ಎಂದು ಹಾಜರಿದ್ದ ಸಹ ಶಿಕ್ಷಕಿಯರಾದ ಬಿ.ಎಸ್.ಬಿರಾದಾರ,ಕೆ.ಜಿ.ಗದ್ದೆಪ್ಪನವರ,ಪಿ.ವಿ.ಸಾನು,ಪಿ.ಎ.ಖೋತ ಗ್ರಾಮಸ್ಥರ ಎದುರಿಗೆ ಹೇಳಿಕೊಂಡರು.
ಶಾಲೆಗೆ ಭೇಟಿ ನೀಡುವೆ:
ದೇವರ ಹುಲಗಬಾಳ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಮೇಲೆ ಗ್ರಾಮಸ್ಥರು ಆರೋಪ ಮಾಡಿದ್ದು ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.ಅಲ್ಲದೇ ಎರಡು ದಿನಗಳಲ್ಲಿ ಶಾಲೆಗೆ ಭೇಟಿ ನೀಡುತ್ತೇನೆ ಎಂದು ಬಿಇಓ ಎಸ್.ಡಿ.ಗಾಂಜಿ ತಿಳಿಸಿದ್ದಾರೆ.