ನವದೆಹಲಿ, ಅ.9: ಭಾರತದ ಭರವಸೆಯ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ಚಾಲೆಂಜರ್ಸ್ ಸ್ಯಾಂಟ್ ಡೊಮಿಂಗೊ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಸುಮಿತ್ 7-6, 0-6, 0-2 ರಿಂದ ಕೆನಡಾದ ಅಲೆಜಂಡ್ರೊ ಟಬಿಲೊ ವಿರುದ್ಧ ನಿರಾಸೆ ಅನುಭವಿಸಿದರು. ಪ್ರಸಕ್ತ ಋತುವಿನಲ್ಲಿ ಸೊಗಸಾದ ಪ್ರದರ್ಶನ ನೀಡಿ ಟ್ರೋಫಿಯನ್ನು ಎತ್ತಿದ್ದ ಸುಮಿತ್ ಆಘಾತಕ್ಕೆ ಒಳಗಾದರು. ಮೊದಲ ಸೆಟ್ ನಲ್ಲಿ4-1 ರಿಂದ ಮುನ್ನಡೆ ಸಾಧಿಸಿದ್ದ ಸುಮಿತ್ ಗೆ, ಎದುರಾಳಿ ಆಟಗಾರ ಶಾಕ್ ನೀಡಿದರು. ಪರಿಣಾಮ ಸುಮಿತ್ ಸೆಟ್ ನ್ನು ಟೈ ಬ್ರೆಕ್ ರನಲ್ಲಿ ಗೆದ್ದರು. ಟಬಿಲು ಅವರು ಎರಡನೇ ಸೆಟ್ ನ ಎರಡು, ನಾಲ್ಕು ಹಾಗೂ ಆರನೇ ಗೇಮ್ ಗಳಲ್ಲಿ ಸುಮಿತ್ ಸರ್ವೆ ಮೆಟ್ಟಿ ನಿಂತರು. ಪರಿಣಾಮ ಎರಡನೇ ಗೇಮ್ ನಲ್ಲಿ ಸುಲಭ ಜಯ ದಾಖಲಿಸಿದರು. ಮೂರನೇ ಸೆಟ್ ನಲ್ಲಿ ಸುಮಿತ್ ಗಾಯಕ್ಕೆ ತುತ್ತಾಗಿದ್ದರಿಂದ ಹೊರ ನಡೆದರು.