ನವದೆಹಲಿ, ಅ.24: ವಿಯೆನ್ನಾದಲ್ಲಿ ನಡೆಯುತ್ತಿರುವ ಎರ್ಸ್ಟ್ ಬ್ಯಾಂಕ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಡೇನ್ನಿಸ್ ಶಪೋವಲೊವ್ ಜೋಡಿ ಜಯ ಸಾಧಿಸಿದೆ.
ಪುರುಷರ ಡಬಲ್ಸ್ ನಲ್ಲಿ ಬೋಪಣ್ಣ ಜೋಡಿ 7-6 (6), 6-2 ರಿಂದ ಕೆನಡಾದ ಆಸ್ಟ್ರೇಲಿಯಾದ ಓಲಿವರ್ ಮಾರ್ಚ, ಜುರ್ಗನ್ ಮೆಲ್ಜರ್ ವಿರುದ್ಧ ಗೆಲುವು ದಾಖಲಿಸಿತು. 77 ನಿಮಿಷದಲ್ಲಿ ರೋಹನ್ ಜೋಡಿ ಸಮಯೋಚಿತ ಭರ್ಜರಿ ಪ್ರದರ್ಶನ ನೀಡಿತು. ಮೂರು ಏಸ್ ಹಾಗೂ ನಾಲ್ಕು ಡಬಲ್ ಫಾಲ್ಟ್ ಅಂಕಗಳನ್ನು ಕಲೆ ಹಾಕಿದರು. ಅಲ್ಲದೆ ಅವರು ಎಂಟು ಬ್ರೇಕ್ ಪಾಯಿಂಟ್ ಗಳಲ್ಲಿ ಮೂರುರಲ್ಲಿ ಜಯ ಸಾಧಿಸಿದರು.
ಎದುರಾಳಿ ಅವರು ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಬೋಪಣ್ಣ ಜೋಡಿ ಆರಂಭದಲ್ಲಿ 2-4 ರಿಂದ ಹಿನ್ನಡೆ ಅನುಭವಿಸುತ್ತಿದ್ದರು. ಆದರೆ ಬಳಿಕ ಭರ್ಜರಿಯಾಗಿ ಪುಟಿದೆದ್ದಿತು. ಅಲ್ಲದೆ ಟೈಬ್ರೇಕರ್ ಪಂದ್ಯದಲ್ಲಿ ಜಯ ಸಾಧಿಸಿತು.
ಎರಡನೇ ಸೆಟ್ ನಲ್ಲಿ 2-0ಯಿಂದ ಮುನ್ನಡೆ ಸಾಧಿಸಿದ್ದ ಬೋಪಣ್ಣ ಜೋಡಿ, 3-2 ಹಾಗೂ 6-2ಕ್ಕೇ ಏರಿಸಿಕೊಂಡು ಜಯ ಸಾಧಿಸಿತು.