ಲೋಕದರ್ಶನ ವರದಿ
ಮಾಂಜರಿ 14: ಮನುಷ್ಯನ ಭಾವನೆಗಳನ್ನು ಪವಿತ್ರಗೊಳಿಸಿ ಅಂತರಂಗವನ್ನು ಶುದ್ಧಿಕರಿಸಲು ದೇವಾಲಯಗಳು ಸಹಕಾರಿಯಾಗಲಿವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನಮಠ ಮತ್ತು ವೀರಭದ್ರ ದೇವಸ್ಥಾನದ ಧಮರ್ಾಧಿಕಾರಿಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಹಳೆ ಯಡೂರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಗಣೇಶ ಮತ್ತು ಹನುಮಾನ ಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಶೈಲ ಜಗದ್ಗುರುಗಳು ಮಾತನಾಡುತ್ತಿದ್ದರು ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ವಹಿಸಿದ್ದರು ಆಥರ್ಿಕ ಸಂಪತ್ತಿಗಿಂತ ಶಾಂತಿ ನೆಮ್ಮದಿ ಜೊತೆಗೆ ತೃಪ್ತಿಯೆಂಬ ಆಂತರಿಕ ಸಂಪತ್ತು ಮನುಷ್ಯನಲ್ಲಿರಬೇಕು.
ಭಾರತೀಯ ಸಂಸ್ಕೃತಿಯಲ್ಲಿ ದೇವರ ಬಗ್ಗೆ ಇರುವ ಶ್ರದ್ಧಾಭಕ್ತಿಯ ಪ್ರತಿಕವಾಗಿ ದೇವಾಲಯಗಳು ನಿಮರ್ಾಣಗೊಳ್ಳುತ್ತಿವೆ ದೇವಾಲಯಗಳು ನಿರ್ಮಿಸುವಂತೆ ಯಾವ ದೇವರು ಅಜರ್ಿ ಹಾಕುವುದಿಲ್ಲ ಇಡೀ ಜಗತ್ತೆ ದೇವರದ್ದು ನಾವೆಲ್ಲ ಬಾಡಿಗೆದಾರರು ವ್ಯಾಪಾರ ಮುಸಿಕೊಂಡು ಹೋಗಬೆಕಷ್ಟೇ ದೇವರುಗಳ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಪಾಲಿಸಿದಾಗ ದೇವರ ಆರಾಧನೆಗೆ ಅರ್ಥ ಬರುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಈ ವೇಳೆ ಡಾ.ಪ್ರಭಾಕರ ಕೋರೆ ಮಾತನಾಡಿ ದ್ವೇಷ ಅಸೂಹೆ ತೊರೆದು ಪ್ರೀತಿ ವಿಶ್ವಾಸದಿಂದ ಬದುಕಿದಾಗ ಮಾತ್ರ ದೇವರು ಒಲಿಯುತ್ತಾನೆ ಭಗವದ್ಗೀತೆಯಲ್ಲಿರುವಂತೆ ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದ ಪಾಪ ಕರ್ಮಗಳನ್ನು ದೂರ ಮಾಡಿ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಹೇಳಿ ಕೊಡುವ ಕೆಲಸ ಪಾಲಕರಿಂದ ಆಗಬೇಕು ದುಶ್ಚಟಗಳಿಂದ ದೂರವಿರಿ ಎಂದರು. ಈ ವೇಳೆ ಬಸವಪ್ರಸಾದ ಜೊಲ್ಲೆ ಮಾತನಾಡಿ ಮನುಷ್ಯನಂತೆ ಮಾಡುವುದನ್ನು ಬೀಡಬೇಕಿದೆ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವುದು ಭಕ್ತರ ಕೆಲಸವಾಗಿದೆ.
ಭಾರತೀಯ ಸಂಸ್ಕೃತಿ, ಆಚರಣೆ, ಪರಂಪರೆಯನ್ನು ದೇವಾಲಯಗಳಲ್ಲಿ ನೋಡಬಹುದಾಗಿದೆ ನಾವೆಲ್ಲಾ ಜಾತಿ, ಧರ್ಮ, ಪಂಥಗಳನ್ನು ಬಿಟ್ಟು ಎಲ್ಲರೂ ಒಂದೇ ತಾಯಿಯ ಮಕ್ಕಳೆಂದು ಭಾವಿಸಿ ನಡೆದುಕೊಳ್ಳಬೇಕಿದೆ ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು ಈ ವೇಳೆ ಕಬ್ಬು ಬೆಳೆಗಾರ ಹೋರಾಟ ಸಂಗದ ಅಧ್ಯಕ್ಷರಾದ ಮಲ್ಲಪ್ಪಾ ಸಿಂಧೂರ ಹಾಗೂ ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೆಶಕ ಅಜಿತರಾವ ದೇಸಾಯಿ, ಮಲ್ಲಿಕಾಜರ್ುನ ಕೊರೆ, ತಾತ್ಯಾಸಾಹೇಬ ಕಾಟೆ, ಚೇತನ ಪಾಟೀಲ, ಭರತೇಶ ಬನವಣೆ, ಪ್ರಕಾಶ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಯುವರಾಜ ಪಾಟಿಲ, ಸುಕುಮಾರ ಚೌಗಲೆ, ಸಂತೋಷ ಭಾವಿದಂಡಿ, ಶ್ರೀಕಾಂತ ಉಮರಾಣೆ, ರಾಜು ಹಕಾರೆ, ಅಮರ ಬೊರಗಾಂವೆ, ಈರಗೌಡಾ ಪಾಟೀಲ, ಈರಗೌಡಾ ಚೌಗಲೆ, ಸಚೀನ ಪಾಟೀಲ, ನರಸಗೌಡಾ ಕಮತೆ, ಈರಣ್ಣಾ ಕೋಳಿ, ರಾವಸಾಹೇಬ ಪೋಲಿಸ್, ಅಣ್ಣಾಪ್ಪಾ ಬೋರಗಾಂವೆ, ಬಾಬಾಸಾಹೇಬ ಬೊರಗಾಂವೆ ಹಾಗೂ ಮಹಿಳೆಯರು ಮತ್ತು ಗ್ರಾಮಸ್ಥರು ಹಾಜರಿದ್ದರು ಶ್ರೀಕಾಂತ ಉಮರಾಣೆ ಸ್ವಾಗತಿಸಿ ಪರಶುರಾಮ ಪಾಟಿಲ ನಿರೂಪಿಸಿ ವಂದಿಸಿದರು.