ಲೋಕದರ್ಶನ ವರದಿ
ಗಂಗಾವತಿ: ನಗರಸಭೆ ಚುನಾವಣೆಯಲ್ಲಿ 35 ವಾರ್ಡಗಳಿಂದ ಸ್ಪದರ್ಿಸಲು ಮುಸ್ಲಿಂ ಜನಾಂಗದವರಿಗೆ ಜೆಡಿಎಸ್ ನಿಂದ ಪ್ರಥಮ ಆದ್ಯತೆ ನೀಡಲಾಗುವದು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾವ ಪಾಡಗುತ್ತಿ ಅಕ್ತರಸಾಬ ತಿಳಿಸಿ ಸಿರುವದು ವಿವಾದಕ್ಕೆ ಕಾರಣವಾಗಿದೆ.
ಸವರ್ೆಶ್ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ನಾಥರ ಅಧ್ಯಕ್ಷತೆಯಲ್ಲಿ ನಗರಸಭೆ ಚುನಾವಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹಿಂದು ಮತ್ತು ಮುಸ್ಲಿಂ ಜನಾಂಗಗಳ ಮಧ್ಯೆ ಬೆಂಕಿ ಇಟ್ಟು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅಶಾಂತಿ ಮತ್ತು ಗಲಭೆ ಉಂಟಾಗಲು ಕಾರಣನಾಗಿದ್ದ ಎಂದು ಹೇಳಿದರು. ಜನರು ಭಯದ ವಾತಾವರಣದಿಂದ ಜೀವನ ನಿರ್ವಹಣೆ ಮಾಡುವ ವಾತಾವರಣ ನಿಮರ್ಾಣ ಮಾಡಿ ತಮ್ಮ ಲಿಕ್ಕರ್ ದಂಧೆಯನ್ನು ವಿಸ್ತರಿಸಿಕೊಂಡು ಲಿಕ್ಕರ್ ಮಾಫಿಯಾ ಡಾನ್ ಆಗಿ ಮರೆದು ಇಂದು ಇಕ್ಬಾಲ್ ಚರಂಡಿ ಸೇರಿದ್ದಾರೆ ಎಂದು ಅಕ್ತರ ತಿಳಿಸಿದರು.
ಇಕ್ಬಾಲ್ ಅನ್ಸಾರಿ ತಂದೆ ಎಂಎಸ್ ಅನ್ಸಾರಿ ಜೀವಂತ ಇದ್ದಾಗ ಗಂಗಾವತಿ ಭಾವೈಕ್ಯತೆಯ ನಾಡಾಗಿತ್ತು. ಈ ಭಾಗದ ಧಣಿ ಎಚ್.ಜಿ.ರಾಮುಲು ಅವರ ಆಶೀವರ್ಾದ ದದಿಂದ ರಾಜಕೀಯಕ್ಕೆ ಪ್ರವೇಶಿಸಿದ ಇಕ್ಬಾಲ್ ಸಾಕಿದ ಧಣಿಗೆ ನಾಯಿಯಂತೆ ಕಚ್ಚಲು ಹೋಗಿ ವಿಧಾನಸಭಾ ಚುನಾವಣೆಯಲ್ಲಿ ನಗರಸಭೆ ಕಸದ ಬುಟ್ಟಿ ಸೇರಿದ ಎಂದು ಲೇವಡಿ ಮಾಡಿದರು. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ನಗರಸಭೆ ಚುನಾವಣೆ ಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಮಾಹಿತಿ ಬಂದಿದೆ.
ಈ ಎರಡೂ ಪಕ್ಷಗಳನ್ನು ಮತ್ತು ಮುಖಂಡರನ್ನು ಚುನಾವಣೆ ಯಲ್ಲಿ ಮೂಲೆ ಗುಂಪು ಮಾಡುವ ಅವಶ್ಯಕತೆ ಇದೆ. ಒಂದು ವೇಳೆ ಜೆಡಿಎಸ್ ಪಕ್ಷದಿಂದ ಸ್ಪದರ್ಿಸುವ ಆಕಾಂಕ್ಷಿಗಳಿಗೆ ಟಿಕೇಟ್ ಸಿಗದಿದ್ದರೆ ನೇರವಾಗಿ ತಮ್ಮ ಪಕ್ಷದ ಉಪಾಧ್ಯಕ್ಷ ಎಚ್.ಆರ್. ನಾಥಧಣಿಯವರನ್ನು ಸಂಪಕರ್ಿಸಬೇಕು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಶ್ರೀನಾಥ, ಜಿಲ್ಲಾ ಅಧ್ಯಕ್ಷ ಅಮರೇಶ ಮಾಲೀಪಾಟೀಲ್, ನಗರ ಘಟಕದ ಅಧ್ಯಕ್ಷ ಶೇಖನಬಿಸಾಬ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ, ಮಾಜಿ ಶಾಸಕ ಗವಳಿ ಮಹಾದೇವಪ್ಪನವರ ಪುತ್ರ ಗವಳಿ ರಮೇಶ ಸಭೆಯಲ್ಲಿ ಮಾತನಾಡಿದರು.