ಮಂತ್ರಾಲಯ ಪಾದಯಾತ್ರಿಗಳೊಂದಿಗೆ ಕಿರುತೆರೆ ಕಲಾವಿದರು

Television artistes with Mantralaya Padayatris

ಮಹಾಲಿಂಗಪುರ 17: ಕಳೆದ 4ಂ ವರ್ಷಗಳಿಂದ ಮಂತ್ರಾಲಯ ಪಾದಯಾತ್ರೆ ಕೈಗೊಳ್ಳುತ್ತಿರುವ ಮಹಾಲಿಂಗಪುರದ ರಾಯರ ಭಕ್ತರು ಈ ಬಾರಿ ವಿಶೇಷ ಅನುಭವದೊಂದಿಗೆ 7 ದಿನಗಳಿಂದ ಪಾದಯಾತ್ರೆ ಬೆಳೆಸಿದ್ದಾರೆ.  

ಪಾದಯಾತ್ರಿಗಳ ಬಾಲ್ಯದ ಗೆಳೆಯ ಕಿರುತೆರೆ ಹಾಸ್ಯ ಕಲಾವಿದ ಮಹಾಲಿಂಗಪುರದ ದಾನಪ್ಪ ಮೂಡಲಗಿ ಹಾಗೂ ಮಾ.ಆನಂದ ಕೂಡ ಪಾದಯಾತ್ರೆ ಬೆಳೆಸಿದ್ದು ವಿಶೇಷ. ವಿದ್ಯಾರ್ಥಿದೆಸೆಯಿಂದಲೂ ಮಂತ್ರಾಲಯ ಪಾದಯಾತ್ರೆ ಮಾಡುತ್ತಿದ್ದ ದಾನಪ್ಪ ಮೂಡಲಗಿ ಕಲಾವಿದರಾಗಿ ಬೆಂಗಳೂರು ಸೇರಿದ್ದರೂ ಪ್ರತಿ ವರ್ಷ ತವರೂರಿನಿಂದ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷ ದಾನಪ್ಪನ ಜೊತೆ ಮಾ.ಆನಂದ ಕೂಡ ಮಹಾಲಿಂಗಪುರಕ್ಕೆ ಬಂದು ಮಹಾಲಿಂಗೇಶ್ವರ ದೇವಸ್ಥಾನದಿಂದ ಎಲ್ಲ ಭಕ್ತರೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಮಂಗಳವಾರ ಜ.15ರಂದು ಮಂತ್ರಾಲಯ ತಲುಪಲಿದ್ದಾರೆ.  

ಪಾದಯಾತ್ರೆಯಲ್ಲಿ ರವಿ ತಟ್ಟಿಮನಿ, ಕೃಷ್ಣಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ವಿನೋದ (ಪಪ್ಪು) ಹುರಕಡ್ಲಿ, ಚನ್ನಪ್ಪ ಹುನ್ನೂರ, ರಾಜು ತಾಳಿಕೋಟಿ, ಮಲ್ಲಪ್ಪ ಯರಡ್ಡಿ, ರಾಜು ಕೋಳಿಗುಡ್ಡ, ಸಂಜಯ ತಾಳಿಕೋಟಿ ಹಾಗೂ ಬೆಂಗಳೂರಿನಿಂದ ದಾನಪ್ಪ ಮೂಡಲಗಿ ಗೆಳೆಯ ಮಾ.ಆನಂದ ರಾಯರ ಭಕ್ತರಾಗಿ ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದಾರೆ.