ತೆಲಂಗಾಣ : ಕೃಷಿ ಭೂಮಿಯಲ್ಲಿ ಜೈನ ತೀರ್ಥಂಕರ ಮಹಾವೀರ ಪ್ರತಿಮೆ ಪತ್ತೆ

ಹೈದರಾಬಾದ್, ಜೂನ್ 13, ಜೈನ ಧರ್ಮದ 24 ನೇ ತೀರ್ಥಂಕರರಾದ ವರ್ಧಮಾನ ಮಹಾವೀರರ   ಪ್ರತಿಮೆಯು ತೆಲಂಗಾಣದ   ಕರ್ಮಿನಗರ ಜಿಲ್ಲೆಯ ಹಳ್ಳಿಯೊಂದರ ಕೃಷಿ ಕ್ಷೇತ್ರದಲ್ಲಿ ಶನಿವಾರ ಪತ್ತೆಯಾಗಿದೆ.ಟ್ರಾಕ್ಟರ್‌ ಮೂಲಕ ಭೂಮಿಯನ್ನು ಕೊರೆಯುವಾಗ ಪ್ರತಿಮೆಯನ್ನು ಕಂಡ ಭೂ   ಮಾಲೀಕ ಅಂಜಯ್ಯ ತಕ್ಷಣವೇ ಗ್ರಾಮದ ಸರಪಂಚ ಮತ್ತು ಇತರರಿಗೆ   ತಿಳಿಸಿದ್ದಾರೆ.ಅವರೆಲ್ಲ ಕೂಡಲೇ,ಜಮೀನಿಗೆ ಧಾವಿಸಿ ಪ್ರತಿಮೆಗೆ ಪೂಜೆ ಸಲ್ಲಿಸಿದ್ದಾರೆ.  ಪ್ರತಿಮೆ ಪತ್ತೆಯಾದ ಬಗ್ಗೆ ಪುರಾತತ್ವ ಇಲಾಖೆ   ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.