ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ತೇಜಿಂದರ್, ಜಿನ್ಸನ್ ಜಾನ್ಸನ್ ಔಟ್

ದೋಹಾ, ಅ 4:  ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ಶಾಟ್ಪುಟ್ ಸ್ಟಾರ್ ತೇಜಿಂದರ್ ಪಾಲ್ ಸಿಂಗ್ ತೂರ್ ಹಾಗೂ 1500 ಮೀ ರನ್ನರ್ ಜಿನ್ಸನ್ ಜಾನ್ಸನ್ ಅವರು ಹೊರ ನಡೆದಿದ್ದಾರೆ. 2018ರ ಏಷ್ಯನ್ ಕ್ರೀಡಾಕೂಟ ಚಿನ್ನದ ಪದಕ ವಿಜೇತ ತೇಜಿಂದರ್ ಪಾಲ್ ಸಿಂಗ್ ಅವರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹಾಗಾಗಿ, ಅವರು ಅರ್ಹತಾ ಸುತ್ತಿನ ಅಗ್ರ 12 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಆ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ನಿರ್ಗಮಿಸಿದರು. 24ರ ಪ್ರಾಯದ ತೇಜಿಂದರ್ ಸಿಂಗ್ ಮೊದಲನೇ ಪ್ರಯತ್ನದಲ್ಲಿ 20.43 ದೂರ ಶಾಟ್ ಪುಟ್ ಎಸೆದರು. ಈ ಆವೃತ್ತಿಯಲ್ಲಿ ಅವರ ಉತ್ತಮ ಪ್ರಯತ್ನವಾಗಿತ್ತು. ಆದರೆ, ಎರಡನೇ ಪ್ರಯತ್ನದಲ್ಲಿ ಅವರು ಎಡವಿದರು. ನಂತರ, ಮೂರನೇ ಪ್ರಯತ್ನದಲ್ಲಿ 19.55 ದೂರ ಎಸೆಯುವ ಮೂಲಕ ತಮ್ಮ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಅಭಿಯಾನ ಮುಗಿಸಿದರು. ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ ಎಂಟನೇ ಹಾಗೂ ಒಟ್ಟಾರೆ 34 ಸ್ಪಧರ್ೆಗಳಲ್ಲಿ 18ನೇ ಸ್ಥಾನ ಪಡೆದರು. ನ್ಯೂಜಿಲೆಂಡ್ನ ಥಾಮಸ್ ವಾಲ್ಷ್ ಅವರು 21.92 ದೂರ ಶಾಟ್ ಪುಟ್ ಎಸೆಯುವ ಮೂಲಕ  ಫೈನಲ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರು. ಇನ್ನೂ, ಭಾರತದ ಮಧ್ಯಮ ಅಂತರದ ರನ್ನರ್ ಜಿನ್ಸನ್ ಜಾನ್ಸನ್ ಅವರು ಮೊದಲನೇ ಸುತ್ತಿನಲ್ಲಿ 10ನೇ ಸ್ಥಾನ ಪಡೆದರು. ಅಲ್ಲದೇ, ಒಟ್ಟಾರೆ 43 ಓಟಗಾರರಲ್ಲಿ ಜಿನ್ಸನ್ 34ನೇ ಸ್ಥಾನ ಪಡೆದರು. 1500 ಮೀ ಓಟವನ್ನು3:39:86 ಸೆಕೆಂಡ್ಗಳಲ್ಲಿ ಮುಗಿಸಿದರು. ಕೇವಲ ಮೂರು ಸೆಕೆಂಡ್ಗಳ ಅಂತರದಲ್ಲಿ ಅಗ್ರ ಸ್ಥಾನ ಪಡೆದಿದ್ದ ಕೀನ್ಯಾದ ಟಿಮೋಥಿ ಚೆರಿಯೋಟ್ ಹಿಂದೆ ಬಿದ್ದರು. ಜಕತರ್್ ಏಷ್ಯನ್ ಗೇಮ್ಸ್ನಲ್ಲಿ ಜಿನ್ಸನ್ ಜಾನ್ಸನ್ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದರು. ಆದರೆ, ವಿಶ್ವ ಅಥ್ಲೆಟಿಕ್ಸ್ ಪ್ರದಾನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.