ಬೆಂಗಳೂರು, ಮಾ 28, ಕೊರೋನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ 21 ದಿನಗಳ ಕಾಲ ದೇಶಾದ್ಯಂತ ಲಾಕ್ಡೌನ್ಗೆ ಕರೆ ನೀಡಿದ್ದರೂ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೆಆರ್. ಮಾರ್ಕೆಟ್ನಲ್ಲಿರುವ ಅಂಗಡಿಗಳನ್ನು ಸ್ಥಳಾಂತರ ಮಾಡಿಸಿದ್ದಾರೆ. ಎನ್.ಆರ್.ಕಾಲೋನಿಯ ಮಾರ್ಕೆಟನ್ನು ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಿದ್ದಾರೆ.ಕೆ.ಆರ್. ಮಾರ್ಕೆಟ್ನಲ್ಲಿರುವ ಅಂಗಡಿಗಳನ್ನು ಬಸವನಗುಡಿಯ ನ್ಯಾಷನಲ್ ಮೈದಾನ ಮತ್ತು ವಿಜಯನಗರದ ಮೈದಾನಕ್ಕೆ ಪೊಲೀಸ್ ಅಧಿಕಾರಿಗಳೊಂದಿಗೆ ತೆರಳಿ ಸ್ಥಳಾಂತರ ಮಾಡಿದ್ದಾರೆ. ತರಕಾರಿ, ಹಣ್ಣುಗಳನ್ನು ಕೊಳ್ಳಲು ಕೆ.ಆರ್. ಮಾರುಕಟ್ಟೆಗೆ ಜನರು ಮುಗಿಬೀಳುತ್ತಿದ್ದಾರೆ. ಹೀಗಾಗಿ, ಮಾರ್ಕೆಟ್, ಕಲಾಸಿಪಾಳ್ಯದಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಮತ್ತು ಕೆ.ಆರ್. ಮಾರ್ಕೆಟ್ನಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಇಲ್ಲಿ ಬಂದು ಪರಿಶೀಲನೆ ನಡೆಸಿದಾಗ ಬೆಳಗ್ಗೆಯಿಂದ ಹೆಚ್ಚು ಜನ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಂಸದ ತಿಳಿಸಿದ್ದಾರೆ.
ತರಕಾರಿಗೆ ಚಂದ್ರಾ ಲೇಔಟ್, ವಿಜಯನಗರ, ಬಸವನಗುಡಿ ಕಡೆಯಿಂದ ಜನರು ಬರುತ್ತಿದ್ದಾರೆ. ಪ್ರಧಾನಿ ಮೋದಿ ಲಾಕ್ಡೌನ್ಗೆ ಆದೇಶಿಸಿದ್ದರೂ ಜನರು ಕೇಳುತ್ತಿಲ್ಲ. ಈ ಬಗ್ಗೆ ಸಚಿವ ಆರ್. ಅಶೋಕ್ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಮಾರ್ಕೆಟ್ ವ್ಯಾಪಾರವನ್ನು ಸ್ಥಳಾಂತರಿಸುರುವುದಾಗಿ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಇನ್ನು ತೇಜಸ್ವಿ ಸೂರ್ಯ ಅವರ ಸ್ಥಳಾಂತರ ಕ್ರಮಕ್ಕೆ ಕಾಂಗ್ರೆಸ್ ವಲಯ ಆಕ್ಷೇಪ ವ್ಯಕ್ತಪಡಿಸಿದ್ದು, ಶ್ರೀಮಂತರಿಗೆ ಮಣಿದು ಬಡವರ ಬದುಕಿನ ಮೇಲೆ ತೇಜಸ್ವಿ ಸೂರ್ಯ ಎಳೆದಿದ್ದಾರೆ ಎಂದು ಬೆಂಗಳೂರು ನಗರ ಘಟಕದ ಮನೋಹರ್ ಆರೋಪಿಸಿದ್ದಾರೆ.