ಶಿಕ್ಷಕರು ನಿರಂತರ ಅಧ್ಯಯನದಿಂದ ಉತ್ತಮ ಶಿಕ್ಷಣ ನೀಡಲಿ: ಕಾಕಡೆ

ಮುನವಳ್ಳಿ 19: ಶಿಕ್ಷಕರಾಗುವರು ನಿರಂತರ ಅಧ್ಯಯನ ಮಾಡುವ ಮೂಲಕ ವಿದ್ಯಾಥರ್ಿಗಳಿಗೆ ಉತ್ತಮ ಶಿಕ್ಷಣ ನೀಡುವ ಎಲ್ಲ ಸಾಮಥ್ರ್ಯವನ್ನು ಹೊಂದಿರಬೇಕು. ಮಕ್ಕಳಲ್ಲಿ ಆಸಕ್ತಿ ಕುತೂಹಲ ಮೂಡಿಸುವಂತೆ ಪಾಠ ಮಾಡಬೇಕು ಎಂದು ಗೋಕಾಕ ಪ್ರೌಢಶಾಲೆ ಶಿಕ್ಷಕ ರಾಮಚಂದ್ರ ಕಾಕಡೆ

ಹೇಳಿದರು.

ಪಟ್ಟಣದ ಜೆ.ಎಸ್.ಪಿ. ಸಂಘದ ಬಿ. ಎಫ್. ಯಲಿಗಾರ ಬಿ.ಇಡಿ. ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರಶಿಕ್ಷಣಾಥರ್ಿಗಳ ಸ್ವಾಗತ, ವಿದ್ಯಾಥರ್ಿ ಒಕ್ಕೂಟ ಉದ್ಘಾಟನೆ ಹಾಗೂ ಹಿಂದಿನ ಸಾಲಿನ ಪ್ರಶಿಕ್ಷಣಾಥರ್ಿಗಳ ವಾಷರ್ಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಸಂಸ್ಥೆಯ ಚೇರಮನ್ನ ಎಂ.ಆರ್. ಗೋಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟಕರಾಗಿ ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ರವೀಂದ್ರ ಯಲಿಗಾರ, ಅತಿಥಿಗಳಾಗಿ ರಾಜ್ಯಪ್ರಶಸ್ತಿ ವಿಭೂಷಿತ ನಿವೃತ್ತ ಶಿಕ್ಷಕ ಎಚ್.ಬಿ.ಅಸೂಟಿ, ವ್ಹಿ. ಎಸ್. ಯಕ್ಕುಂಡಿ, ಪಿ.ಡಿ.ಪಾಟೀಲ. ಸುಧಾಕರ ರೇಣಕೆ ಆಗಮಿಸಿದ್ದರು. 

ಡಾಕ್ಟರೇಟ ಪದವಿ ಪಡೆದ ಸವದತ್ತಿ ಕುಮಾರೇಶ್ವರ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಡಾ. ಎನ್. ಎಸ್. ಕಳ್ಳಿ ಇವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಅಂತಿಮ ವರ್ಷದ ಪ್ರಶಿಕ್ಷಣಾಥರ್ಿಗಳಿಂದ ದೀಪದಾನ ಸಮಾರಂಭ ಜರುಗಿತು.

ಉಪನ್ಯಾಸಕರಾದ ಪಿ. ವಿ. ಮೊಹರೆ, ಎ.ಜಿ.ಪಾಟೀಲ, ಜಿ.ವಿ.ಹಡಪದ, ಜೆ.ಕೆ.ಬಡಿಗೇರ, ಎ.ಎಂ.ಕರೀಕಟ್ಟಿ, ಎಲ್.ಎಸ್.ತ್ಯಾಪಿ ಇತರರು ಉಪಸ್ಥಿತರಿದ್ದರು.

ಪ್ರಾಚಾರ್ಯ ಎ.ಎಸ್.ಅಮೋಘಿಮಠ ಸ್ವಾಗತಿಸಿದರು. ಉಪನ್ಯಾಸಕ ಎಫ್.ಬಿ. ಭೋವಿ ನಿರೂಪಿಸಿದರು ಅಮೀತ ಅಬ್ಬಾರ ವಂದಿಸಿದರು.