ಲೋಕದರ್ಶನವರದಿ
ರಾಣೇಬೆನ್ನೂರು: ಶಿಕ್ಷಕರು ಶಿವನ ಸ್ವರೂಪಿ ಇದ್ದಂತೆ ಮಕ್ಕಳನ್ನು ತಿದ್ದಿ ಬುದ್ದಿ ಹೇಳಿ ಉತ್ತಮರನ್ನಾಗಿ ಮಾಡುವುದು ಶಿಕ್ಷಕರ ಕೈಯಲ್ಲಿದೆ, ಶಿಕ್ಷಕರು ಸದೃಢ ದೇಶವನ್ನು ಕಟ್ಟಲು ಸಹ ಮುಂದೆ ಬರಬೇಕು ಎಂದು ಮಾಜಿ ಸಚಿವ ರುದ್ರಪ್ಪ ಎಂ ಲಮಾಣಿ ಹೇಳಿದರು.
ನಗರದ ಬಿಎಜೆಎಸ್ಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ (ಬಿ.ಇಡಿ) ಶಿಕ್ಷಕ ವಿದ್ಯಾರ್ಥಿ ಒಕ್ಕೂಟ ಸಂಘದ ಸಮಾರೋಪ ಹಾಗೂ ದೀಪದಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ಸರಿಯಾಗಿ ನಯ ವಿನಯ ಮತ್ತು ನಡವಳಿಕೆ ಹಾಗೂ ನಮ್ಮ ಪರಂಪರೆಯನ್ನು ತಿಳಿಸಿಕೊಟ್ಟರೆ ಅವರನ್ನು ದೇಶದ ಅತ್ಯುತ್ಮಮ ವ್ಯಕ್ತಿಯನ್ನಾಗಿ ಮಾಡಲು ಸಹಾಯಕಾರಿಯಾಗಿದೆ ಎಂದರು.
ಮಕ್ಕಳಿಗೆ ಅರಿವಾಗುವಂತೆ ಹಾಗೂ ಪ್ರಭಾವವಾಗಿ ಹೇಳುವ ಶಕ್ತಿ ಶಿಕ್ಷಕರಿಗೆ ಇದೆ. ಅದಕ್ಕಾಗಿ ಶಿಕ್ಷಕರು ಪಠ್ಯದ ಕಡೆಗೆ ಎಷ್ಟು ಗಮನಕೊಡುತ್ತಿರೋ ಅಷ್ಟೇ ವ್ಯಕ್ತಿತ್ವ ವಿಕಸನದ ಕಡೆಗೆ ಗಮನಿಹರಿಸಬೇಕು. ಅದು ನಿಮ್ಮ ಕೈಯಲ್ಲಿ ಇದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಎನ್ ಮಾತನಾಡಿ ಉತ್ತಮ ಶಿಕ್ಷಕರಿಂದ ಮಾತ್ರ ನವ ರಾಷ್ಟ್ರವನ್ನು ಸೃಷ್ಟಿ ಮಾಡಲು ಸಾಧ್ಯ ಆ ಶಿಕ್ಷಕರು ನೀವಾಗಬೇಕು. ಶಿಕ್ಷಕರು ಪ್ರತಿ ಹೆಜ್ಜೆಯನ್ನು ಮಕ್ಕಳು ಅನುಸರಿಸುತ್ತಾರೆ, ಶಿಕ್ಷಕರು ವಿದ್ಯಾಥರ್ಿಗಳಿಗೆ ಮಾದರಿಯಾಗಬೇಕು. ಆಗ ವಿದ್ಯಾಥ್ರಿಗಳಲ್ಲಿ ನಿಮ್ಮ ನಡೆ ನುಡಿಯನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಪ್ರೊ. ಎಸ್ಎ ಭಿಕ್ಷಾವರ್ತಿಮಠ, ಪ್ರೊ. ಮೃತ್ಯುಂಜಯ, ಪ್ರಾಚಾರ್ಯ ಎಸ್ ಎ ತಾಂಬೆ, ಆರ್.ವಿ.ಚಿನ್ನಿಕಟ್ಟಿ, ಡಾ.ಬಿ.ಎಂ.ಬೇವಿನಮರದ, ಹಾನಗಲ್ಲ, ಪ್ರೊ. ಬಿ ಯು ಮಾಳೇನಹಳ್ಳಿ, ಪ್ರೊ.ರಾಜೀವ್.ಕೆ.ಎಂ, ಪ್ರೊ.ಮಲ್ಲಮ್ಮ ವೈ ಕೋರಿ, ಪರಶುರಾಮ ಪವಾರ, ಪ್ರೊ.ಎನ್ ಎನ್ ಗೊರವರ, ಪ್ರೊ.ಎಸ್ ಎಂ. ಬಿಸಲಳ್ಳಿ, ಪ್ರೊ ಶೇಖರನಾಯಕ ಎಸ್, ಪ್ರೊ.ಮಹೇಶ ಕಂಬಳಿ ಸೇರಿದಂತೆ ಮತ್ತಿತರರು ಇದ್ದರು.