ಮಕ್ಕಳ ಬದುಕಿಗೆ ಶಿಕ್ಷಕರು, ಪಾಲಕರು ಮಾದರಿಯಾಗಿ: ಕಡ್ಲೆಪ್ಪನವರ

ಲೋಕದರ್ಶನವರದಿ

ಸವಣೂರ :ಮಕ್ಕಳೇ ದೇಶದ ಭವಿಷ್ಯವಾಗಿದ್ದು, ಮಕ್ಕಳ ಬದುಕಿಗೆ ಶಿಕ್ಷಕರು ಹಾಗೂ ಪಾಲಕರು ಮಾದರಿಯಾಗಿ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ವಾತಾವರಣ ನಿಮರ್ಿಸಲು ಮುಂದಾಗಬೇಕು ಎಂದು ಶಿಕ್ಷಣ ಪ್ರೇಮಿ ಬಸಪ್ಪ ಕಡ್ಲೆಪ್ಪನವರ ಹೇಳಿದರು.

            ಸವಣೂರ ಹಿರೇಮುಗದೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚಾರಣೆ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು.

      ಮಾಹಾನ್ ವ್ಯಕ್ತಿ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನದ ನೆನೆಪಿಗಾಗಿ ಮಕ್ಕಳ ದಿನಾಚಾರಣೆ ಆಚರಣೆ ಮಾಡಲಾಗಿದೆ.

   ಈ ದಿನ ಮಕ್ಕಳೆ ಸಮಾರಂಭದ ಮುಖ್ಯ ಅಥಿತಿಗಳಾಗಿದ್ದು, ಇದೊಂದು ಮಹತ್ವ ಪೂರ್ಣವಾದ ರಾಷ್ಟೀಯ ಹಬ್ಬವಾಗಲಿ, ದೇಶದಲ್ಲಿ ಶಿಕ್ಷಕರು ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ.ಮಕ್ಕಳ ಜ್ಞಾನ ವಿಕಾಸಕ್ಕಾಗಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಹಿರೇಮುಗದೂರಿನ ಅಮ್ಮಾ ಸಂಸ್ಥೆ(ರಿ) ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಸಪ್ಪ ಕಡ್ಲೆಪ್ಪನವರ ಮೆಚ್ಚಿಗೆ ವ್ಯಕ್ತಪಡಿಸಿದರು.        ಚುಸಾಪ ತಾಲೂಕಾಧ್ಯಕ್ಷ ಗಂಗಯ್ಯ ಎಸ್ ಕುಲಕಣರ್ಿ ಮಾತನಾಡಿ ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗಲು ಮಕ್ಕಳ ದಿನಾಚಾರಣೆಂದು ಪ್ರತಿ ಮಗು ಓದುವಿಕೆ ಬೆಳೆಸಲು ಸಹಕಾರಿಯಾಗಿ ಪುಸ್ತಕ ವಿತರಣೆ ಮಾಡುತ್ತಿರುವುದು ಸಂತೋಷಕರವಾಗಿದೆ.ಶಾಲೆಯ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಿದ್ದು, ಶಿಕ್ಷಕರು ಮಕ್ಕಳ ಕ್ರೀಡೆ,ಸಾಹಿತ್ಯ ಹಾಗೂ ಕಲಿಕೆಯಲ್ಲಿ ಸಾಧನೆಗೈಯಲು ನಿರಂತರ ಶ್ರಮವಹಿಸುತ್ತಿದ್ದಾರೆ.ಮಕ್ಕಳು ಸಾಹಿತ್ಯಾಭಿರುಚಿ ಬೆಳಿಸಿಕೊಂಡು ಸಾಧನೆ ಮಾಡಲು ಮುಂದಾಗಬೇಕು ಎಂದು ಸಲಹೆ ಚೂಚನೆ ನೀಡಿದರು.         ಶಾಲಾ ಮುಖ್ಯೋಪಾಧ್ಯಾಯರಾದ ಸಿಪಿ ಭಜಂತ್ರಿ ಮಾತನಾಡಿ ಎಲ್ಲ ವೇದಿಕೆಯಲ್ಲಿ ನಾವೆಲ್ಲಾ ಕುಳಿತುಕೊಳ್ಳುತ್ತಿದ್ದೇವು.ಆದರೆ ಇಂದು ಶಾಲಾ ಸಂಸತ್ತು ಪ್ರತಿನಿಧಿಸುವ ಮಕ್ಕಳು ಕುಳಿತುಕೊಂಡು ಅರ್ಥಪೂರ್ಣವಾದ ಮಕ್ಕಳ ದಿನಾಚಾರಣೆ ಮಾಡಿದಂತಾಗಿದೆ.ಶಾಲೆಗೆ ಊರಿನ ನಾಗರಿಕರು ಹಾಗೂ ಸರ್ವ ಶಿಕ್ಷಕ ವರ್ಗದವರು ಸಂಪೂರ್ಣ ಸಹಕಾರ ನೀಡಿ, ಮಕ್ಕಳ ಗುಣಾತ್ಮಕ ಕಲಿಕೆಗೆ ಉತ್ತಮ ವಾತಾರವಣ ಸಿಗುತ್ತಿದೆ.

  ಮಕ್ಕಳ ಕಲಿಕೆಗೆ ಎಲ್ಲ ಶಿಕ್ಷಕರು ಪ್ರಮಾಣಿಕ ಕೆಲಸ ಮಾಡುತ್ತಿದ್ದೇವೆ. ಇಂದು ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಮ್ಮಾ ಸಂಸ್ಥೆಯವರು ಮಕ್ಕಳಿಗೆ ಅನುಕೂಲವಾಗಲಿ ಎಂದು  ಉಚಿತ ಪುಸ್ತಕ ನೀಡಿ ನಮಗೆ ಸಹಕಾರ ನೀಡಿದ್ದಾರೆ.ಅವರಿಗೆ ಎಸ್ಡಿಎಂಸಿ ಹಾಗೂ ನಮ್ಮೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

          ವಿದ್ಯಾಥರ್ಿ ಪ್ರತಿನಿಧಿಗಳಾದ ಮಹೇಶ ಕೋಳೂರ.ವಿಜಯಲಕ್ಷ್ಮಿ ಅಂದಾನೆಪ್ಪನವರ.ಪಲ್ಲವಿ ಆರೇರ ಹಾಗೂ ಅಧ್ಯಕ್ಷತೆ ವಹಿಸಿದ ಚೈತ್ರಾ ಮರಾಠೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜಯಶಾಲಿಗಳಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಗ್ರಾ.ಪಂ ಸದಸ್ಯ ಈರಣ್ಣ ಚಪ್ಪರದಹಳ್ಳಿಮಠ ಹಾಗೂ ಪತ್ರಕರ್ತರಾದ ನಿಂಗಪ್ಪ ಎಂ ಆರೇರ  ಮಕ್ಕಳ ದಿನಾಚಾರಣೆ ಹಾಗೂ ಶಾಲೆ ಅಭಿವೃದ್ಧಿ ಕುರಿತು ಮಾತನಾಡಿದರು.

           ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷರಾದ ಕವಿತಾ ಮರಾಠಿ.ಸದಸ್ಯರಾದ ಬಿಡಿ ಕೊಳೂರ.ಸುಧಾ ಮೇವುಂಡಿ.ನಾಗಮ್ಮ ಮುಲಿಮನಿ.ಶಿಕ್ಷಕ ವೃಂದದವರಾದ ಜೆಬಿ ತಳವಾರ.ಪಿಜಿ ರೋಣಿಮಠ.ಆರ್.ಜಿ ಲಮಾಣಿ.ಕೆಎಲ್ ಕಾರಗಿ.ಎಲ್ ಬಿ ಆಲೂರ.ಚುಸಾಪನ ರವಿ ಇಚ್ಚಂಗಿ.ಮಂಜು ಬಡಿಗೇರ. ಊರಿನ ನಾಗರಿಕರು. ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.ವಿದ್ಯಾಥರ್ಿ ಚೇತನ ಮೇವುಂಡಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದನು.