ಬೆಂಗಳೂರು, ಮಾರ್ಚ್ 26, ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಡೀ ದೇಶ ಸ್ತಬ್ಧವಾಗಿರುವ ಕಾರಣ 2020 ರ ಏಪ್ರಿಲ್ 11 ರಂದುನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಮುಂದೂಡಲಾಗಿದೆ. ಕೊವಿಡ್ 19 ನಿಯಂತ್ರಣ ಸಂಬಂಧ 21 ದಿನಗಳ ಕಾಲ ಇಡೀ ದೇಶದ ಲಾಕ್ ಡೌನ್ ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಆದ ಕಾರಣ ಟಿಇಟಿ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.