ಆಕ್ಲೆಂಡ್, ಫೆ 8 (ಯುಎನ್ಐ) ಮಾರ್ಟಿನ್ ಗುಪ್ಟಿಲ್ (79 ರನ್) ಹಾಗೂ ರಾಸ್ ಟೇಲರ್ (ಔಟಾಗದೆ 73 ರನ್) ಅವರ ಅರ್ಧಶತಕಗಳ ಹೊರತಾಗಿಯೂ ಯಜ್ವೇಂದ್ರ ಚಾಹಲ್ (58 ಕ್ಕೆ 3) ನ್ಯೂಜಿಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 274 ರನ್ ಗುರಿ ನೀಡುವಲ್ಲಿ ಶಕ್ತವಾಗಿದೆ. ಇಲ್ಲಿನ ಈಡಾನ್ ಪಾರ್ಕ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ ಗಳಿಗೆ ಎಂಟು ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದ್ದು, ಭಾರತಕ್ಕೆ 274 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ನ್ಯೂಜಿಲೆಂಡ್ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಜೋಡಿ ತಲೆ ಕೆಳಗಾಗುವಂತೆ ಮಾಡಿತ್ತು. ಈ ಜೋಡಿ ಮುರಿಯದ ಮೊದಲನೇ ವಿಕೆ್ಟ್‌ಗೆ 93 ರನ್ ಗಳಿಸಿತ್ತು. ಆ ಮೂಲಕ ಕಿವೀಸ್ ಬೃಹತ್ ಮೊತ್ತ ದಾಖಲಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಚೆಂಡು ಕೈಗೆತ್ತಿಕೊಂಡ ಯಜ್ವೇಂದ್ರ ಚಾಹಲ್, 41 ರನ್ ಗಳಿಸಿ ಆಡುತ್ತಿದ್ದ ಹೆನ್ರಿ ನಿಕೋಲ್ಸ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆ ಮೂಲಕ ಆರಂಭಿಕ ಜೋಡಿ ಪತನವಾಯಿತು.
ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಟಾಮ್ ಬ್ಲಂಡೆಲ್ 22 ರನ್ ಗಳಿಸಿ ಕಿವೀಸ್ ಪಾಳಯದಲ್ಲಿ ವಿಶ್ವಾಸ ಮೂಡಿಸಿದ್ದರು. ಆದರೆ, ಅವರನ್ನು ಶಾರ್ದೂಲ್ ಠಾಕೂರ್ ನಿಯಂತ್ರಿಸಿದರು. ಒಂದು ತುದಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದ ಆರಂಭಿಕ ಮಾರ್ಟಿನ್ ಗುಪ್ಟಿಲ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. 79 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ 79 ರನ್ ಗಳಿಸಿದ್ದರು. ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಗುಪ್ಟಿಲ್ ರನೌಟ್ ಆದರು.
ಮಾರ್ಟಿನ್ ಗುಪ್ಟಿಲ್ ಔಟಾದ ಬಳಿಕ ತಂಡದ ಜವಾಬ್ದಾರಿ ಹೊತ್ತು ರಾಸ್ ಟೇಲರ್ ಒಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದರು. 74 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ ಅಜೇಯ 73 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ. ಟೇಲರ್‌ಗೆ ಮತ್ತೊಂದು ತುದಿಯಲ್ಲಿ ಯಾರೂ ಸರಿಯಾಗಿ ಸಾಥ್ ನೀಡದ ಪರಿಣಾಮ ತಂಡದ ಮೊತ್ತ ಕಿರಿದಾದ ಅಂಗಳದಲ್ಲಿಯೂ 300ರ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.ಭಾರತದ ಪರ ಯಜ್ವೇಂದ್ರ ಚಾಹಲ್ ಮೂರು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 50 ಓವರ್‌ಗಳಿಗೆ 273/8 (ರಾಸ್ ಟೇಲರ್ ಔಟಾಗದೆ 73, ಮಾರ್ಟಿನ್ ಗುಪ್ಟಿಲ್ 79, ಹೆನ್ರಿ ನಿಕೋಲ್ಸ್ 41; ಯಜ್ವೇಂದ್ರ ಚಾಹಲ್ 58 ಕ್ಕೆ 3, ಶಾರ್ದೂಲ್ ಠಾಕುರ್ 60 ಕ್ಕೆ 2, ರವೀಂದ್ರ ಜಡೇಜಾ 35 ಕ್ಕೆ 1)