ಪುಣೆ, ಫೆ.6 : ಬಾಲೆವಾಡಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಾಟಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಮುಖ ಆಟಗಾರ ರಾಮ್‌ಕುಮಾರ್ ರಾಮನಾಥನ್ ಹಾಗೂ ಪುರಬ್ ರಾಜಾ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದು, ಪ್ರತಿಭಾವಂತ ಆಟಗಾರ ಸುಮಿತ್ ನಾಗಲ್ ಕೂಡ ಡಬಲ್ಸ್‌ನಲ್ಲಿ ಸೋಲು ಕಂಡಿದ್ದಾರೆ.
ಬುಧವಾರ ರಾಮನಾಥನ್ ಮತ್ತು ರಾಜಾ ಅವರು ಭಾರತದ ಸುಮಿತ್ ನಾಗಲ್ ಮತ್ತು ಬೆಲಾರಸ್‌ನ ಇಗೊರ್ ಗೆರಾಸಿಮೊವ್ ಅವರನ್ನು 7-6, 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ. ಜರ್ಮನಿಯ ಪೀಟರ್ ಗ್ಜೋವಿಕ್ ಮತ್ತು ಸೆಡ್ರಿಕ್ ಮಾರ್ಸೆಲ್ ಸ್ಟೌಬ್ ಪಂದ್ಯಾವಳಿಯಿಂದ ಹೊರಗುಳಿದಿದ್ದರಿಂದ ನಗಾಲ್ ಮತ್ತು ಗೆರಾಸಿಮೊವ್ ಡಬಲ್ಸ್‌ನಲ್ಲಿ ಶ್ರೇಯಾಂಕ ಪಡೆದಿದ್ದರು. ನಾಗಲ್ ಮೊದಲ ಸುತ್ತಿನಲ್ಲಿ ಆಘಾತ ಅನುಭವಿಸಿದ್ದರು.
ಕ್ವಾರ್ಟರ್ ಫೈನಲ್ಸ್ ನಲ್ಲಿ ರಾಮನಾಥನ್ ಮತ್ತು ಪುರಬ್ ಆಸ್ಟ್ರೇಲಿಯಾದ ಲಿಯಾಂಡರ್ ಪೇಸ್ ಮತ್ತು ಮ್ಯಾಥ್ಯೂ ಅಬ್ಡೆನ್ ಅವರನ್ನು ಎದುರಿಸಲಿದ್ದಾರೆ.