ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ, ವಿಶ್ವಶಾಂತಿ ಮಹಾಯಾಗ
ಯಮಕನಮರಡಿ, : ದರ್ಮಗಳ ಬೀಡಾದ ಹುಕ್ಕೇರಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮಠ ಮಂದಿರಗಳು ಜೈನ ಧರ್ಮದ ಬಸದಿಗಳು ಸೇರಿದಂತೆ ಅನೇಕ ಮಠ ಮಂದಿರಗಳು ಪುರಾತನ ಕಾಲದಿಂದಲೂ ತಮ್ಮ ಗತ ವೈಭವವನ್ನು ಸಾರುತ್ತಾ ಬಂದಿರುವ ಹುಕ್ಕೇರಿ ತಾಲೂಕಿನ ಯಮಕನಮರಡಿ ಸಮೀಪದ ಶುಭಸ್ತಾನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಹೇಮಾಡಪಂಥಿ ಪಾಶಾನದಲ್ಲಿ ನಿರ್ಮಿತ ಪುರಾತನ ಜಿನಾಲಯ ನಿರ್ಮಾಣವಿದ್ದು, ಆ ಜಿನಾಲಯದಲ್ಲಿ ನವನಿರ್ಮಿತ ಪಚ್ಚವರ್ಣದಲ್ಲಿ ವೇದಿ, ಕಮಲ, ಅಷ್ಠಪ್ರಾತಿಹಾರ್ಯ ಸಹಿತ, ವೇದಿಕಮಲ ಸಿಂಹಾಸನೋಪರಿ ಮೂಲನಾಯಕ ಶ್ರೀ 1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಜಿನಬಿಂಬದ ಪಂಚಕಲ್ಯಾಣ ಪ್ರತಿಷ್ಠಾ ಮಹಮಹೋತ್ಸವವನ್ನು ಶ್ರಾವಕ-ಶ್ರಾವಕಿಯರು ಕೂಡಿಕೊಂಡು ನಿಶ್ಚಯಿಸಿದ್ದಾರೆ.
ಈ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವವನ್ನು ಪ.ಪೂ ವಾತ್ಸಲ್ಯವಾರಿದ ಧರ್ಮ ಕೇಸರಿ ಆಚಾರ್ಯ ಶ್ರೀ 108 ಜೀನಸೇನ ಮುನಿಮಹಾರಾಜರ ಸಂಘದ ಪರಮ ಪಾವನ ಮಂಗಳ ಸಾನಿಧ್ಯದಲ್ಲಿ ಪ ಪೂ ಸ್ವತ್ತಿಶ್ರೀ ಜೀನಸೇನ ಪಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ಸಂಸ್ಥಾನ ಮಠ ನಾಂದಣಿ ಇವರ ಆದಿ ನೇತ್ರತ್ವದಲ್ಲಿ ಹಾಗೂ ಪ ಪೂ ಸ್ವತ್ತಿಶ್ರೀ ಲಕ್ಷ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಾಹಾಸ್ವಾಮಿಜಿ ಸಂಸ್ಥಾನ ಮಠ ಕೊಲ್ಲಾಪುರ ಇವರ ಉಪಸ್ಥಿತಿಯಲ್ಲಿ ಜೈನ ಅರ್ಶ ಪರಂಪರಾನುಸಾರವಾಗಿ ಪೂಜಾ ಮಹೋತ್ಸವವ ಪ್ರತಿಷ್ಠಾಚಾರ್ಯ ಪಂಡಿತ ಪವನ ಚಂದ್ರನಾಥ ಉಪಾಧ್ಯೆ ಇವರ ಮಾರ್ಗದರ್ಶನದಲ್ಲಿ ಪಂಚಕಲ್ಯಾಣ ಮಹಾಮಹೋತ್ಸವ ನಿಯೋಜಿತ ಕಾರ್ಯಕ್ರಮ ಜರುಗಲಿದ್ದು. ಪೂಜ್ಯ ಆಚಾರ್ಯ ತ್ಯಾಗಿ ಮುನಿಗಳಿಂದ ಧರ್ಮೋಪಧೇಶ ವಿದ್ವಾನ್ನರ ವ್ಯಾಖ್ಯಾನ ಗಂಡು ಮ್ಕಕಳಿಗೆ ಮೌಂಜಿ ಬಂದನ ಸಂಸ್ಕಾರ ಭಜನೆ, ನಾಟಕ, ನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಯಾನುಕೂಲ ಯಥೋಚಿತವಾಗಿ ಜರುಗಲಿದ್ದು ಅದಕ್ಕೆ ಸದ್ಧರ್ಮ ಸಮ್ಯಕ ಜೈನ ಶ್ರಾವಕ ಶ್ರಾವಕಿಯರು ತಮ್ಮ ಪರಿಜನ ಪುರಜನ ಸಹಿತ ಬಂದು ಪ್ರತಿಷ್ಠಾ ಮಹಾಮಹೋತ್ಸವದಲ್ಲಿ ಅಪಾರ ಪುಣ್ಯ ಸಂಪಾಧನೆ ಮಾಡಿಕೊಳ್ಳಿರಿ.
ಪಂಚ ಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಮಾಂಗಲಿಕ ಕಾರ್ಯಕ್ರಮಗಳು
ಸೋಮವಾರ ದಿ 3 ರಂದು ದ್ವಜಾರೋಹಣ ಗರ್ಬಕಲ್ಯಾಣ ಪೂರ್ವಾರ್ಧ
ಮಂಗಳವಾರ ದಿ 4 ರಂದು ಗರ್ಭಕಲ್ಯಾಣ ಉತ್ತಾರಾರ್ಧ ನವಗ್ರಹ ಶಾಂತಿ ವಿಧಾನ
ಬುಧವಾರ ದಿ 5 ರಂದು ಭಗವಾದ್ ಜನ್ಮ ಕಲ್ಯಾಣಕ
ಗುರುವಾರ ದಿ 6 ರಂದು ರಾಜಾಭಿಷೇಕ ಧಿಕ್ಷಾಕಲ್ಯಾಣಿಕ ಭೊಗದಿಂದ ಪದದ ಕಡೆಗೆ
ಶುಕ್ರವಾರ ದಿ 7 ರಂದು ಕೇವಜ ಜ್ಞಾನ ಕಲ್ಯಾಣ, ಭಗವಂತರ ಆಹಾರ ವಿಧಿ, ಮೌಂಜಿ ಬಂಧನ, ಸಂಸ್ಕಾರ
ಶನಿವಾರ ದಿ 8 ರಂದು ಭವ್ಯ ರಥೋತ್ಸವ ಜರುಗಲಿದ್ದು
ರವಿವಾರ ದಿ 9 ರಂದು ನಿರ್ವಾಣ ಕಲ್ಯಾಣ ಶಾಶ್ವತ ಮೋಕ್ಷ ಮಾರ್ಗ ಶ್ರೀ ಕಲಿಕುಂಡ ಆರಾಧನಾ ವಿಧಾನ ಹಾಗೂ ಹೇಲಿಕ್ಯಾಪ್ಟರ ಮೂಲಕ ಪುಷ್ಪವೃಷ್ಠಿ ಇತ್ಯಾದಿ ಕಾರ್ಯಕ್ರಮ ಜರುಗಲಿದ್ದು ಸದರಿ ಕಾರ್ಯಕ್ರಮಕ್ಕೆ ಮುಖ್ಯ ಉಪಸ್ಥಿತರಾಗಿ ಷ ಬ್ರ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಟ ಉಳ್ಳಾಗಡ್ಡಿ ಖಾನಾಪುರ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಸತೀಷ ಅಣ್ಣಾ ಜಾರಕಿಹೋಳಿ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಗಮಿಸಲಿದ್ದು ಚಿಕ್ಕೋಡಿ ಲೋಕಸಭಾ ಸಂಸದರು ಆದ ಕು. ಪ್ರಿಯಾಂಕ ಸತೀಷ ಜಾರಕಿಹೋಳಿ ಮಾಜಿ ಸಚಿವರು ಕರ್ನಾಟಕ ಸರ್ಕಾರ ವೀರಕುಮಾರ ಅ ಪಾಟೀಲ ಮಾಜಿ ಸಂಸದರು ರಮೇಶ ವಿಶ್ವನಾಥ ಕತ್ತಿ ಹಾಗೂ ಉತ್ತಮ ರಾವಸಾಹೇಬ ಪಾಟೀಲ ಖ್ಯಾತ ಉದ್ಯಮಿಗಳು ಭೋರಗಾಂವ ಇವರು ಆಗಮಿಸಲಿದ್ದು ಕಾರ್ಯಕ್ರಮದ ಅಂಗವಾಗಿ ಎಲ್ಲ ಭಕ್ತಾದಿಗಳಿಗೆ ಪ್ರತಿದಿವಸ ಆಹಾರ ವ್ಯವಸ್ಥೆ ಇರುತ್ತದೆ ಎಂದು ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಎಲ್ಲ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.