ದೇವರಹಿಪ್ಪರಗಿ :ಹೆಣ್ಣು ಕೊಟ್ಟ ಅತ್ತೆಯನ್ನೇ ಹತ್ಯೆ ಮಾಡಿ ಕೆನಾಲ್ ಗೆ ಎಸೆದ ಪಾಪಿ ಅಳಿಯ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ.
ಸರಾಯಿ ಕುಡಿದು ಗಂಡ ಹೆಂಡತಿ ನಡುವಿನ ಜಗಳಕ್ಕೆ ತಿಳುವಳಿಕೆ ಹೇಳಲು ಬಂದ ಅತ್ತೆ ಬಲಿಯಾಗುವ ಮೂಲಕ ಕೊನೆಗೊಂಡ ಘಟನೆ. ಮಂಗಳವಾರದಂದು ಕುಡಿದ ಮತ್ತಿನಲ್ಲಿ ಅತ್ತೆ ಮೇಲೆ ಹಲ್ಲೆ ನಡೆಸಿ ಸಾಕ್ಷಿ ನಾಶ ಮಾಡಲು ಕೆನಾಲಿಗೆ ಎಸೆದು ಬಂದು ಹೆಂಡತಿಯ ಮೇಲೆ ದಾಳಿ ನಡೆಸಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದೇನೆ ಎಂದು ತಿಳಿದುಬಂದಿದೆ.ಬುಧವಾರದಂದು ಗ್ರಾಮಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾದ ವಿಜಯಪುರ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ, ಹೆ.ಎಸ್ಪಿ ಶಂಕರ ಮರಿಹಾಳ, ಡಿಎಸ್ಪಿ ಜಿ.ಎಚ್. ತಳಕಟ್ಟಿ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಪಿಎಸ್ಐ ಬಸವರಾಜ ತಿಪ್ಪರಡ್ಡಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಬುಧವಾರ ಮಧ್ಯಾಹ್ನ ಕೇನಾಲ್ ನಲ್ಲಿ ಬೋಟ್ ಮೂಲಕ ಅತ್ತೆಯಾದ ಗೌರಾಬಾಯಿ ಈರಣ್ಣ ನರಳಿ (65) ಅವರ ಶವ ಅಗ್ನಿಶಾಮಕ ದಳದ ಸಿಬ್ಬಂದಿ ಬೂಟ್ ಮೂಲಕ ಪತ್ತೆ ಕಾರ್ಯಚರಣೆಯಲ್ಲಿ ಹೊರ ತೆಗೆಯಲಾಯಿತು.ಭೀಮಪ್ಪ ತುಳಸಪ್ಪ ಗುಗ್ಗರಿ (ಪಡಸಲಗಿ) ಹತ್ಯೆ ಮಾಡಿದ್ದಾನೆ ಎಂದು ಆತನ ಹೆಂಡತಿ ದೇವಕಿ ಭೀಮಪ್ಪ ಗುಗ್ಗರಿ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಇದು ದೇವರಹಿಪ್ಪರಗಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ.