ಚೀನಾದಲ್ಲಿ ಟ್ಯಾಂಕ್ ಟ್ರಕ್ ಸ್ಫೋಟ: ಸಾವಿನ ಸಂಖ್ಯೆ 18 ಕ್ಕೆ ಏರಿಕೆ

ಹ್ಯಾಂಗ್‌ ಜನ್  ಜೂನ್ 14,ಪೂರ್ವ ಚೀನಾದ ಜಿಯಾಂಗ್ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ  ಟ್ಯಾಂಕ್ ಟ್ರಕ್ ಸ್ಫೋಟದಿಂದ ಸಾವನ್ನಪ್ಪಿದವರ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಪ್ರಚಾರ ಪ್ರಾಧಿಕಾರ ಭಾನುವಾರ ತಿಳಿಸಿದೆ.ಘಟನೆಯಲ್ಲಿ  ಗಾಯಗೊಂಡ ಒಟ್ಟು 166 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೆನ್ಲಿಂಗ್ ನಗರದ ಪ್ರಚಾರ ವಿಭಾಗ ತಿಳಿಸಿದೆ.ಶೆನ್ಯಾಂಗ್-ಹೈಕೌ ಎಕ್ಸ್‌ಪ್ರೆಸ್‌ವೇಯ ವೆನ್ಲಿಂಗ್ ವಿಭಾಗದ ಹಳ್ಳಿಯ ಬಳಿ ಗ್ಯಾಸ್ ಟ್ಯಾಂಕ್ ಟ್ರಕ್ ಸ್ಫೋಟಗೊಂಡಿದೆ ಎಂದು ಇಲಾಖೆ ತಿಳಿಸಿದೆ.ಎಕ್ಸ್‌ಪ್ರೆಸ್ ಹೆದ್ದಾರಿ ಬಳಿಯ ಖಾರ್ಕನೆ ಸಮುಚ್ಚಯದ  ಮೇಲೆ  ಟ್ರಕ್ ಬಿದ್ದಾಗ ಎರಡನೇ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ  ವಸತಿ ಮನೆಗಳು ಮತ್ತು ಕಾರ್ಖಾನೆ  ಕುಸಿತಕ್ಕೆ ಕಾರಣವಾಗಿದೆ.ರಕ್ಷಣಾ ಕಾರ್ಯಕ್ಕಾಗಿ ನೂರಾರು ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿದೆ.