ತಾಂಬಾ: ಬರಛಾಯೆ ಕುಟುಂಬ ಸಮೇತ ಗುಳೆ ಹೊರಟ ರೈತರು

ಲೋಕದರ್ಶನ ವರದಿ

ತಾಂಬಾ 19: ಶಾಶ್ವತ ಬರಗಾಲ ಪಿಡಿತ ಪ್ರದೇಶವೆಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪೂರ ಜಿಲ್ಲೆಯಲ್ಲಿ ಒಂದು ವರ್ಷ ಭೂಮಿಗೆ ಒಂದು ಹನಿ ಮಳೆ ನೀರು ಬೀಳದೆ  ಈರುವದರಿಂದ ರೈತರು ಆಕಾಶ ದತ್ತ ಮುಖಮಾಡಿದ್ದಾರೆ ಮೂರು ವರ್ಷ ಒಣ ಬರ ಎರಡೂ ವರ್ಷ ಹಸಿಬರ ಕಂಡ ಜಿಲ್ಲೆಯ ರೈತ ನಗುವನ್ನೇ ಕಳೆದುಕೊಂಡಿದ್ದಾನೆ. ಕಳೆದ ವರ್ಷ ಸರಿಯಾದ ಸಮಯಕ್ಕೆ ಬಂದೊದಗಿದ್ದ ಮಳೆ ಬರಡು ನೆಲವನ್ನು ಹಸಿರಾಗಿಸಿತ್ತು. ಈ ಬಾರಿ ಭೂಮಿ ಹದಮಾಡಿಕೊಂಡು ಪೂರ್ವಸಿದ್ದತೆಯಾಗಿದ್ದರು ಸಮರ್ಪಕವಾಗಿ ಮಳೆ ಇಲ್ಲದೆ ಮತ್ತೇ ಭೀಕರ ಬರಗಾಲದ ಛಾಯೆ ಗೊಚರಿಸುತ್ತಿದೆ. 

ಜಿಲ್ಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ವಾಣಿಜ್ಯ ಬೆಳೆಗಳು ಬೆಳೆಯಾಗಲಿಲ್ಲ. ಇನ್ನು ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ದನಕರು ಹಾಗೂ ಕುಟುಂಬದ ನಿರ್ವಹಣೆ ಹಿಗೆಂದು ಕಂಗೆಟ್ಟಿರುವ ಮಣ್ಣಿನ ಮಗ ಚಿಂತೆಯ ಚಿತೆಗೆರುತ್ತೀದ್ದಾನೆ. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವದರಿಂದ ಕೃಷಿ ಕೂಲಿಕಾರ್ಮಿಕರ  ಸ್ಥಿತಿ ಇದಕಿಂತ ಭಿನ್ನವಾಗಿಲ್ಲ. ಕೃಷಿಯನ್ನೆ ಅವಲಂಬಿತರು ಮತ್ತು ತುತ್ತು ಅನ್ನಕ್ಕಾಗಿ ಹೊರರಾಜ್ಯಗಳಿಗೆ ಗೂಳೆ ಹೋಗುವುದು ಅನಿವಾರ್ಯವಾಗಿದೆ. ರೈತರ ನಂಬಿಕೆಯ ಮಳೆಯಾದ ರೂಹಿಣಿ, ಮೀರಗಾ ಕೂಡ ಕರುಣೆತೋರಲಿಲ್ಲ. ಪ್ರತಿದಿನ ಆಕಾಶ ಕಪ್ಪಾಗುತ್ತದೆ. ಆದರೆ ಬರುವ ಮೊಡುಗಳೆಲ್ಲ ಬರಿ ಗೊಡ್ಡು ಗರ್ಭ ಕಟ್ಟಿದ ಮೊಡಗಳಿಂದಮಳೆ ಹನಿ ಉದರಲೇ ಇಲ್ಲ. ಮಳೆಗಾಗಿ ತಹತಹಿಸುವ ಭೂಮಿ ತಂಪಾಗಲೇ ಇಲ್ಲ ಚದುರಿ ಹೊಗುತ್ತಿರುವ ಮೊಡುಗಳ ಮೆರವಣಿಗೆಯನ್ನು ನೊಡುತ್ತಾ ರೈತರು ಆಗ ಮಳೆ ಬರುತ್ತದೆ, ಈಗ ಮಳೆ ಬರುತ್ತದೆ ಎಂದು ಹಂಬಲಿಸುತ್ತಾ ಆಕಾಶದಡೆಗೆ ಮುಖ ಮಾಡಿದ ರೈತನಿಗೆ ಕಾರಹುಣ್ಣುಮೇಯ ಸಂಭ್ರಮವು ಇಲ್ಲದಂತಾಯಿತು.

ಬರಗಾಲ ಬಂತಪ್ಪೋ ಬರಗಾಲ ಎಂದು ಈ ಭಾಗದ ರೈತರು ಕೃಷಿ ಕೂಲಿಕಾರರು ನೆರೆಯ ರಾಜ್ಯಗಳಿಗೆ ಗೂಳೆ ಹೋಗುತ್ತಿದ್ದಾರೆ ತಾಂಬಾ ಗ್ರಾಮದ ಬಸ್ ನಿಲ್ದಾಣದಲ್ಲಿ ಗುಳೆ ಹೋಗುವವರ ದಟ್ಟಣೆ ಸವರ್ೆ ಸಾಮಾನ್ಯವಾಗಿ ಕಂಡುಬರುತ್ತದೆ.   

ವಿಜಯಪುರ ಜಿಲ್ಲೆಯ ಮೇಲೆ ಬರಗಾಲದ ಛಾಯೆ ಪ್ರತ್ತಿ ವರ್ಷ ವ್ಯಾಪಿಸುತ್ತಿದೆ. ಸಕರ್ಾರದಿಂದ ಪರಿಹಾರ ಹಣ ಬರಲಿಲ್ಲ ಸರ್ಕಾರವನ್ನು  ನಂಬಿ ಊರಲ್ಲೆ ಕುಳಿತರೆ ತುತ್ತಿನ ಚೀಲ ತುಂಬುವದಿಲ್ಲ. ಎಂದು ಕೃಷಿ ಕೂಲಿಕಾರರು ನೆರೆಯ ಮಹಾರಾಷ್ರ್ಟ, ಗೋವಾ ರಾಜ್ಯಗಳಿಗೆ ಕುಟುಂಬ ಸಹಿತ ಗುಳೆ  ಹೋಗುತ್ತಿದ್ದಾರೆ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ಬಡರೈತರಿಗೆ ಕೂಲಿ ಕೆಲಸವನ್ನು ನೀಡಿ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಹೊಂಡಗಳನ್ನು ನಿರ್ಮಿಸಿ ತೋಟಗಾರಿಕಾ ಬೇಳೆಗಳಿಗೆ ಪರಿಹಾರ ನೀಡಿ ಬಡ ರೈತರ ಮಾನ ಕಾಯುತ್ತದೆಯೋ ಎಂಬುದನ್ನು ಕಾದು ನೊಡಬೇಕಷ್ಟೆ.