ತಾಂಬಾ: ವಿದ್ಯುತ್ ತಗುಲಿ ಬೆಳೆ ನಾಶ

ತಾಂಬಾ 29: ವಾಡೆ ಗ್ರಾಮದ ಶರಣಪ್ಪ ಅವಟಿ ಅವರ ಕಟಾವಿಗೆ ಬಂದ ಕಬ್ಬು ಸಂಪೂರ್ಣ ಸುಟ್ಟು ಕರಕಲವಾಗಿದೆ 5 ಎಕರೆ ಜಮಿನಿನಲ್ಲಿ ಬೆಳೆಯಲಾದ ಕಬ್ಬು ವಿದ್ಯುತ್ ಕಂಬವು ಆಕಸ್ಮಿಕವಾಗಿ ನೇಲದಮೇಲೆ ಬೀದ್ದು ವಿದ್ಯುತ್ ತಂಂತಿಗಳು ಒಂದಕ್ಕೋಮದು ತಾಗಿ ಶಾರ್ಟ ಸರ್ಕಾಟ್ದಿಂದ ಕಬ್ಬಿಗೆ ಬೆಂಕಿ ಹತ್ತಿ ಸುಡುತ್ತಿತ್ತು ಸುದ್ದಿತಿಳಿದ ಅಗ್ನಿಶಮಕ ದಳದವರು ಬೆಂಕಿಯನ್ನು ಆರಿಸಿ ಮುಂದಿನ ಅನಾಹುತವನ್ನು ತಪ್ಪಿಸಿದರು. ಸುಮಾರು 250ಟನ್ ಕಬ್ಬು ಸುಟ್ಟು ಕರಕಲಾಯಿತ್ತು 3ಲಕ್ಷ ರೂಗಳಷ್ಟು ಕಬ್ಬು ನಾಶವಾಗಿದೆ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸದೆ ಇದ್ದರೆ ಸುಮಾರು ಹತ್ತು ಲಕ್ಷರೂಗಳಷ್ಟು ರೈತನಿಗೆ ನಷ್ಟವಾಗುತ್ತಿತ್ತು. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ತಸಿಲ್ದಾರರು ಪೋಲಿಸರು ಬೇಟಿನೀಡಿ ಪರಿಸಿಲಿಸಿದ್ದಾರೆ. 

ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ  ಈ ಬಡ ರೈತನಿಗೆ ಸರಕಾರ ತಕ್ಷಣ ಪರಿಹಾರ ನೀಡಬೆಕೆಂದು ಹಾಲುಮತ ಸಮಾಜದ ಮುಖಂಡ ಪರಸು ಬಿಸನಾಳ, ಬಾಸ್ಕರ್ ದೋಡ್ಡಮನಿ, ಸತೀಶ ಅಡವಿ, ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.