ಲೋಕದರ್ಶನ ವರದಿ
ಇಂಡಿ, 6: ವಿಕಲಚೇತನರು ನಿರಾಶೆ ಭಾವನೆಯನ್ನು ಬಿಟ್ಟು ಸಾಧಿಸುವ ಛಲ ಮೈಗೂಡಿಸಿಕೊಂಡು ಸಾಗಬೇಕು ಎಲ್ಲರಂತೆ ನಾವು ಕೂಡಾ ಎಂದು ಆತ್ಮವಿಶ್ವಾಸದಿಂದ ಹಿಡಿದ ಕೆಲಸ ಈಡೇರುವರೆಗೂ ಶ್ರಮಿಸಿದರೆ ಗೆಲುವು ನಿಮ್ಮದಾಗುತ್ತದೆ ಎಂದು ತಾ.ಪಂ ಅಧ್ಯಕ್ಷ ಶೇಖರ ನಾಯಕ ಹೇಳಿದರು.
ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಜಿ.ಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಇತಿಹಾದಲ್ಲಿ ಅನೇಕ ವಿಕಲಚೇತನರು ತಮ್ಮದೆಯಾದ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬರಲ್ಲಿ ಭಗವಂತ ಒಂದೊಂದು ತಮ್ಮದೇಯಾದ ಶಕ್ತಿ ನೀಡಿದ್ದಾನೆ. ವೀಚೇತನರು ಎಂಬ ಕೀಳರಿಮೆ ಮೊದಲು ನಿಮ್ಮಿಂದ ದೂರವಾಗಬೇಕು. ದೈಹಿಕವಾಗಿ ವಿಚೇತನರಾಗಿರಬಹುದು ಮಾನಸಿಕವಾಗಿ ಸದೃಡರಾಗಬೇಕು ಯಾರಲ್ಲಿ ಆತ್ಮವಿಶ್ವಾಸವಿರುತ್ತದೆಯೋ ಅವರು ಸಾಧನೆಯ ಶಿಖರವನ್ನು ಏರುತ್ತಾರೆ. ಇಂದು ಹಿರೇಬೇವನೂರಿನ ರಾಜೇಶ ಅಥ್ಲೇಟಿಕ್ ಕ್ರೀಡೆಯಲ್ಲಿ ಅಂತಾರಾಷ್ಟೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿರುವದು ಆತ್ಮವಿಶ್ವಾಸ ಮತ್ತು ಛಲದಿಂದ ಯಾರಲ್ಲಿ ಕೀಳರಿಮೆ ಇರಬಾರದು ಛಲದಂಕ ಮಲ್ಲನಂತೆ ಮುನ್ನುಗಬೇಕು ಎಂದರು.
ಅಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಖೇಡ ದೈಹಿಕ ಪರೀವಿಕ್ಷಕ ಎ,ಬಿ.ಕೌಲಗಿ , ಅಂತರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾ ಪಟು ರಾಜೇಶ ಪವಾರ ತಮ್ಮ ಸಾಧನೆಯನ್ನು ಕುರಿತು ಮಾತನಾಡಿದರು.
ತಾಲೂಕಾ ಕ್ರೀಡಾಧಿಕಾರಿ ಆರತಿ ಚವ್ಹಾಣ ಪ್ರಸ್ತಾವಿಕವಾಗಿ ಮಾತನಾಡಿದರು.
ಪರಶುರಾಮ ಭೋಸಲೆ, ಸರಪರಾಜ ಮಕಾನದಾರ, ಚಂದ್ರಕಾಂತ ಸೋರೆಗಾಂವ್ , ಬಾಬುಶಾ ಹೊಸಮನಿ, ದಸ್ತಗೀರ ಮೋಮಿನ, ಪ್ರಕಾಶ ಐರೋಡಗಿ, ಎಚ್.ಎಸ್.ಬಿಳವಾರ, ಮಂಜುನಾಥ ನಾಯ್ಕೋಡಿ, ವಿಜಯಕುಮಾರ ಜಾಧವ, ಶರಣಪ್ಪ ಕಂಠಿಕಾರ, ಎಲ್.ಬಿ.ತೋಟದ, ಶೈಲಾ ಬಿರಾದಾರ, ಎಸ್.ಟಿ. ಜೇವೂರ, ಎಚ್.ಎಂ.ಹದಗಲ್, ಓಂಕಾರ ಪ್ರಕಾಶ ಪಾಲ್ಗೊಂಡಿದ್ದರು.