ಲೋಕದರ್ಶನ ವರದಿ
ಸಿದ್ದಾಪುರ; ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಕಾರವಾರ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಸಿದ್ದಾಪುರ ಇವರ ಸಂಯುಕ್ತಆಶ್ರಯದಲ್ಲಿ ತಾಲೂಕಾ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಅಡ್ವೋಕೆಸಿ ಕಾರ್ಯಗಾರ ಬುಧವಾರ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದತಾಲೂಕ ಪಂಚಾಯತ ಸ್ಥಾಯಿ ಸಮಿತಿಯಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಲೇರಿಯಾದಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಈಗ ನಮ್ಮ ಭಾಗದಲ್ಲಿ ಮಲೇರಿಯಾಇಲ್ಲಾ. ಆದರೂಡೇಂಗ್ಯೂ ಮುಂತಾದ ಕಾಯಿಲೆಗಳು ಸೊಳ್ಳೆಗಳಿಂದ ಬರುವುದರಿಂದಇಂತಹ ಕಾರ್ಯಗಾರಗಳ ಅವಶ್ಯಕತೆಇದೆ.ಸೊಳ್ಳೆಗಳು ಉತ್ಪತ್ತಿಯಾಗದಂತೆ ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.ಈ ಕುರಿತು ತಿಳುವಳಿಕೆ ನೀಡಿ ಪ್ರಾಣ ಹಾನಿಯನ್ನುತಡೆಗಟ್ಟಬೇಕುಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ಪಂಚಾಯತ ಅಧ್ಯಕ್ಷ ಸುಧೀರಗೌಡರ್ ಮಾತನಾಡಿಗ್ರಾಮ ಪಂಚಾಯತಹಾಗೂ ಆಶಾ ಕಾರ್ಯಕರ್ತಯರಿಂದ ಅರಿವು ಮೂಡಿಸುವ ಕಾರ್ಯ ಆಗುತ್ತಿದೆ. ನಾವು ಅರಿವು ಮೂಡಿಸಬಹುದು ಆದರೆ ಜನರು ಈ ಮುಖೇನ ಕಾರ್ಯೋನ್ಮುಖ ವಾಗಬೇಕು.ಜನಸಾಮಾನ್ಯರು ಸ್ವಚ್ಚತೆ ನಮ್ಮಜವಾಬ್ದಾರಿಎಂದು ತಿಳಿಯಬೇಕು. ಬಾವಿ,ಗಟಾರ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವತ್ತ ಗಮನ ಹರಿಸಬೇಕುಎಂದರು.
ವೇದಿಕೆಯಲ್ಲಿ ತಾಲೂಕ ಪಂಚಾಯತ ಸದಸ್ಯರಘುಪತಿ ಹೆಗಡೆ,ತಾಲೂಕ ಪಂಚಾಯತಕಾರ್ಯನಿರ್ವಹಣಾಧಿಕಾರಿ ದಿನೇಶ ಈ.ಡಿ,ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ಉಪಸ್ಥಿತರಿದ್ದರು.
ಸವಿತಾ ವಿ ನಾಯ್ಕ ಸ್ವಾಗತಿಸಿ, ನಿರ್ವಹಿಸಿದರು.