ಕಂಪ್ಲಿಯಲ್ಲಿ ಉದ್ಘಾಟನೆಗೊಂಡ ತಾಲೂಕು ಗುತ್ತಿಗೆದಾರರ ಸಂಘ

Taluk Contractors Association inaugurated at Kampli

ಕಂಪ್ಲಿ 04: ಗುತ್ತಿಗೆದಾರರು ಗುತ್ತಿಗೆದಾರರಾಗಿ ಇರಬೇಕು ಹೊರತು ರಾಜಕೀಯ ಮಾಡಬಾರದು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು. ಸ್ಥಳೀಯ ಎಸ್ ಎನ್ ಪೇಟೆಯ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಗುತ್ತಿಗೆದಾರರ ಸಂಘದ ನೂತನ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ಒಗ್ಗಟ್ಟಿನೊಂದಿಗೆ ಗುತ್ತಿಗೆದಾರರು ಕಾಮಗಾರಿಗಳ ಹಂಚಿಕೆ ಮಾಡಿಕೊಂಡು ಒಗಟ್ಟಿನೊಂದಿಗೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.  

ನಂತರ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ನಾಗಭೂಷಣ ಮಾತನಾಡಿ, ಕಂಪ್ಲಿ ತಾಲೂಕಿನ ಗುತ್ತಿಗೆದಾರರಲ್ಲಿ ಒಗ್ಗಟ್ಟು ಮೂಡಬೇಕಾಗಿದೆ. ಈ ಹಿನ್ನಲೆ ನೂತನ ಸಂಘ ಉದ್ಘಾಟಿಸಿ, ಗುತ್ತಿಗೆದಾರರನ್ನು ಒಂದುಕಡೆ ಸೇರುವಂತೆ ಮಾಡಲಾಗಿದೆ. ಪ್ಯಾಕೇಟ್ ರದ್ದು ಮಾಡಿ, ತುಂಡು ಕಾಮಗಾರಿ ನೀಡಿದಲ್ಲಿ ಎಲ್ಲಾ ಗುತ್ತಿಗೆದಾರರು ಬದುಕಲಿದ್ದಾರೆ. ಸ್ಥಳೀಯ ಗುತ್ತಿಗೆದಾರರಿಗೆ ಮೊದಲ ಆಧ್ಯತೆ ನೀಡಬೇಕು. ಮುಂಗಡವಾಗಿ ಅನುದಾನ ಕಾಯ್ದಿರಿಸಿ, ಕಾಮಗಾರಿ ನೀಡುವ ಜತೆಗೆ ಕಾಮಗಾರಿ ಮುಗಿದ ತಕ್ಷಣ ಬಿಲ್ ಮಾಡಬೇಕು ಎಂದರು.  

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಗುತ್ತಿಗೆದಾರರ ಸಂಘದ ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಉಪಾಧ್ಯಕ್ಷರಾದ ಭಾಸ್ಕರ್ ರೆಡ್ಡಿ, ರಮೇಶ ದೇವಲಾಪುರ, ಪ್ರಧಾನ ಕಾರ್ಯದರ್ಶಿ ಎನ್‌.ತಿಪ್ಪಯ್ಯ, ಖಜಾಂಚಿ ಬಾಲೆಸಾಬ್ ಎಮ್ಮಿಗನೂರು, ಜಿಲ್ಲಾ ಪ್ರತಿನಿಧಿ ರಾಮಾಂಜನೇಯಲು ಸುಗ್ಗೇನಹಳ್ಳಿ, ಸಂಘಟನಾ ಕಾರ್ಯದರ್ಶಿ ಜಿ.ರಮೇಶ ಮೆಟ್ರಿ, ಕಾನೂನು ಸಲಹೆಗಾರ ಟಿ.ಬಿ.ಸುದರ್ಶನರೆಡ್ಡಿ, ಸದಸ್ಯರಾದ ಬ್ರಹ್ಮಯ್ಯ ಕಂಪ್ಲಿ, ಕೆ.ವೆಂಕಟೇಶ ಕಂಪ್ಲಿ, ತಿಮ್ಮಾರೆಡ್ಡಿ ಸುಗ್ಗನಹಳ್ಳಿ, ಬಿ. ಸುಧಾಕರ ಕಂಪ್ಲಿ, ಟಿ.ವೀರಭದ್ರುಡು ಕಂಪ್ಲಿ, ಕೆ.ರಾಜೇಶ ಕಂಪ್ಲಿ, ಶಿವರಾಜಗೌಡ ಕಂಪ್ಲಿ, ರಮೇಶ ಯು.ಕಂಪ್ಲಿ, ಎಲ್‌.ರಾಜೇಶ ಕಂಪ್ಲಿ, ಲೋಕರಾಜ್ ಕಂಪ್ಲಿ, ಶಶಿಕುಮಾರ ಕಂಪ್ಲಿ, ಭಾಸ್ಕರ್ ಕಂಪ್ಲಿ, ಕೆ.ಬಸವಪ್ರಭು ಕಂಪ್ಲಿ, ಚಂದ್ರಶೇಖರ ಎಮ್ಮಿಗನೂರು, ಮುಖಂಡರಾದ ಕೆ.ಶ್ರೀನಿವಾಸರಾವ್, ಕೆ.ಎಂ.ಹೇಮಯ್ಯಸ್ವಾಮಿ, ಭಟ್ಟ ಪ್ರಸಾದ್, ಎಸ್‌.ಎಂ.ನಾಗರಾಜ, ಕೆ.ಷಣ್ಮುಕಪ್ಪ ಸೇರಿದಂತೆ ಅನೇಕರಿದ್ದರು.