ಗದಗ 22: ಹೊರದೇಶಕ್ಕೆ ಹೋದಾಗ ದೇಶದ ಬಗ್ಗೆ ಹೇಗೆ ನಡೆದುಕೊಳ್ಳಬೇಕು. ಭಾರತದ ಗೌರವ ಕಾಪಾಡುವ ರೀತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವೂ ರಾಹುಲ್ ಗಾಂಧಿಗಿಲ್ಲ, ವಿದೇಶದಲ್ಲಿ ನಿಂತು ರಾಹುಲ್ ಗಾಂಧಿ ಭಾರತದ ಆಡಳಿತದ ಬಗ್ಗೆ ಮಾತನಾಡುತ್ತಿರುವ ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿ ವಿದೇಶದಲ್ಲಿ ನಿಂತು ಭಾರತದ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾತಾಡ್ತಾರೆ. ಸಂವಿಧಾನಾತ್ಮಕ ಸಂಸ್ಥೆ ಚುನಾವಣಾ ಆಯೋಗದ ಬಗ್ಗೆ ಟೀಕೆ ಮಾಡ್ತಾರೆ. ಭಾರತದ ಆಡಳಿತದ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ಇದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಅವರಿಗೆ ಹಿನ್ನಡೆ ಆಗಿದ್ರೆ ಪಾರ್ಲಿಮೆಂಟಲ್ಲಿ, ನಮ್ಮ ದೇಶದಲ್ಲಿ ಮಾತಮಾಡಬಹುದು. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗ ಬಿಜೆಪಿಗೆ ಸಹಕಾರ ಕೊಟ್ಟಿದೆ. ಕಾಂಗ್ರೆಸ್ ಗೆ ಮೋಸ ಆಗಿದೆ ಅಂದ್ರೆ ತೆಲಂಗಾಣದಲ್ಲೂ ಮೋಸ ಮಾಡಬಹುದಿತ್ತಲ್ಲ? ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ ಅಲ್ಲೂ ಕೂಡಾ ಬಿಜೆಪಿ ಅಧಿಕಾರಕ್ಕೆ ಬರಬಹುದಿತ್ತು. ಹಿಮಾಚಲ, ತೆಲಂಗಾಣದಲ್ಲಿ ಗೆದ್ದಾಗ ಒಂದು ಮಾನದಂಡ. ಮಹಾರಾಷ್ಟ್ರ, ಹರಿಯಾಣಾದಲ್ಲಿ ಚುನಾವಣೆ ಸೋತಾಗ ಇವರಿಗೆ ಚುನಾವಣಾ ಆಯೋಗದ ಬಗ್ಗೆ ಅನುಮಾನಗಳು ಪ್ರಾರಂಭ ಆಗ್ತವೆ. cc ಎಂದು ಕಿಡಿಕಾರಿದರು.
ಇಂತಹ ವಿರೋಧ ಪಕ್ಷದ ನಾಯಕ ಬೇಜವಾಬ್ದಾರಿ ರೀತಿ ನಡೆದುಕೊಳ್ಳುವಂತಹದ್ದು ಸರಿಯಲ್ಲ.