ನಾಯಿಗೆ ಬಿಸ್ಕೆಟ್ ಹಾಕಿದರೆ ಅದರ ಬಾಲ ಅಲ್ಲಾಡುತ್ತಲ್ಲ ಅದೇ ತರ ಪಾಕಿಸ್ತಾನಕ್ಕೆ ಮೂಳೆ ಎಸೆದು, ತಾಲಿಬಾನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ ಈ ಚೀನಾ. ತಾಲಿಬಾನಿಗಳಿಗೆ ಅದೇನ್ ಹುಚ್ಚೊ ಬೆಪ್ಪೊ! ಶಿವಲೀಲೆಯೊ! ಇದ್ಯಾವುದೂ ಅರ್ಥವಾಗುತ್ತಿಲ್ಲ, ಅವರಿಗೆ ಚೀನಾ ಹಾಕೊ ತಾಳಕ್ಕೆ ತಕತೈ ಅಂತ ಕುಣಿಯುತ್ತಾ ಇರುವ ಈ ಮೂರ್ಖ ತಾಲಿಬಾನಿಗಳಿಗೆ, ಚೀನಾ ಮತ್ತು ರಶಿಯಾಗಳ ಅಸಲಿ ಆಟ ಇನ್ನೂ ಗೊತ್ತೇ ಆಗುತ್ತಿಲ್ಲ. ಸಧ್ಯಕ್ಕೆ ಇಡೀ ಅಫ್ಘಾನಿಸ್ತಾನದಲ್ಲಿ ಹತ್ತಿದ ದ್ವೇಶದ ಬೆಂಕಿಯ ಜ್ವಾಲೆಗೆ ಕೋಟ್ಯಂತರ ಅಮಾಯಕರು ಬೆಂದು ಹೊಗುತ್ತಿದ್ದಾಗೆ. ಇತ್ತ ಅದೇ ಬೆಂಕಿಯ ಬಿಸಿಯಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳುವುದಕ್ಕಾಗಿ ಚೀನಾ ಮತ್ತು ರಶಿಯಾ ಕಾದು ಕುಳಿತಿವೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಇತ್ತೀಚಿನ ಆ ಸಂದರ್ಭದಲ್ಲಿ ಅದನ್ನು ಚೀನಾ ರಶಿಯಾಗಳು ತುಂಬು ಹೃದಯದಿಂದ ಸ್ವಾಗತಿಸಿದ್ದವು. ಆಗ ಎಲ್ಲಾ ದೇಶದಗಳು ಅಲ್ಲಿರುವ ತಮ್ಮ ಪ್ರಜೆಗಳ ರಕ್ಷಣೆಗೋಸ್ಕರ, ಅವರನ್ನು ಏರ್ ಲಿಪ್ಟ್ ಮಾಡುವುದಕ್ಕಾಗಿ ಹರಸಾಹಸ ಮಾಡುತ್ತಿದ್ದವು. ಆದರೆ ರಶಿಯಾ ಮಾತ್ರ ಅಲ್ಲಿರುವ ತನ್ನ ಪ್ರಜೆಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿರಲಿಲ್ಲ. ತಾಲಿಬಾನಿಗಳು ಅಫ್ಘಾನನ್ನು ವಶಪಡಿಸಿಕೊಳ್ಳೋ ವಿಷಯ ರಶಿಯಾಗೆ ಮೊದಲೇ ತಿಳಿದಿತ್ತು. ಅಫ್ಘಾನ್ ನಲ್ಲಿರುವ ರಶಿಯಾದ ರಾಯಭಾರಿ ಒಪನ್ ಆಗಿ ಒಂದು ಸ್ಟೇಟ್ ಮೆಂಟ್ ಕೊಡ್ತಾರೆ. 'ತಾಲಿಬಾನಿಗಳಿಂದ ರಶಿಯಾಗೆ ಮುಂದೆ ಬಹಳ ಒಳ್ಳೆಯದಾಗುತ್ತದೆ, ಲಾಭವಾಗುತ್ತದೆ. ಹಿಂದಿನ ಅಶ್ರಫ್ ಗಣಿ ಅವರ ಆಡಳಿತಕ್ಕಿಂತ ಈಗಿರುವ ತಾಲಿಬಾನಿಗಳ ಅಡಳಿತದ ಅಡಿಯಲ್ಲಿ ಅಫ್ಘಾನ್ ಹೆಚ್ಚು ಕ್ಷೇಮವಾಗಿರುತ್ತದೆ ಅಂತ ಹೇಳಿದ್ದರು' ಇಲ್ಲಿ ರಶಿಯಾದ ಕುತಂತ್ರ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ವಾಸ್ತವದಲ್ಲಿ ಚೀನಾ ಮತ್ತು ರಶಿಯಾಗಳಿಗೆ ಈ ಅಫ್ಘಾನಿಸ್ತಾನದ ತಾಲಿಬಾನಿಗಳ ಮೇಲೆ ಅದ್ಯಾವ ಲವ್ ನೂ ಇಲ್ಲ ಮತ್ತು ಅವರನ್ನು ಅಭಿವೃದ್ಧಿಯಗೊಳಿಸುವ ಕನಸಂತೂ ಮೊದಲೇ ಇಲ್ಲ. ಈ ರಶಿಯಾ, ಚೀನಾಗಳಂತೂ ಯಾವಾಗಲೂ ತಮ್ಮ ಸ್ವಾರ್ಥದ ಲಾಭವಿಲ್ಲದೆ ಎನನ್ನೂ ಮಾಡುವುದಿಲ್ಲ. ಈಗಾಗಲೆ ಅಫ್ಘಾನಿಸ್ತಾನಕ್ಕೆ ಅಂಟಿಕೊಂಡಿರೊ ತಜಕಿಸ್ತಾನ, ಟರ್ಕ್ಮಿನಿಸ್ತಾನ, ಖಜಕಿಸ್ತಾನ, ಕಿರಗಿಸ್ತಾನ ಇಲ್ಲೆಲ್ಲ ಕೂಡ ತನ್ನ ಸಂಸ್ಥೆ ಮತ್ತು ಏರ್ ಬೇಸ್ ಗಳನ್ನು ಸ್ಥಾಪನೆ ಮಾಡಿಕೊಂಡಿದೆ ರಶಿಯಾ. ಅವೆಲ್ಲವೂ ಅದರ ಗಡಿಗಳಲ್ಲಿ ಬರುವುದರಿಂದಾಗಿ ಅಫ್ಘಾನಿಗಳ ದ್ವೇಶಕಟ್ಟಿಕೊಂಡರೆ ಆಪತ್ತು ಗ್ಯಾರಂಟಿ ಅನ್ನೊ ಕಾರಣಕ್ಕೆ ರಶಿಯಾ ಇಷ್ಟೆಲ್ಲ ಸರ್ಕಸ್ ಗಳನ್ನು ಮಾಡುತ್ತಿದೆ. ಇನ್ನು ಚೀನಾದ ಕೈಯಲ್ಲಿ ತಾವೇ ಹಗ್ಗಕೊಟ್ಟು ತಮ್ಮ ಕೈಕಾಲುಗಳನ್ನ ಕಟ್ಟಿಸಿಕೊಳ್ಳುತ್ತಿವೆ ಈ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು, ಇದು ಒಂದು ರೀತಿ ಅವರ ಅವನತಿಯೇ ಸರಿ. ಚೀನಾ, ರಶಿಯಾ ದೇಶಕ್ಕೆ ಬೇಕಿರುವುದು ತಾಲಿಬಾನಿ, ಪಾಕಿಗಳ ಒಳಿತು ಅಲ್ಲ ಮತ್ತು ಅವರ ಅಧಿಕಾರವೂ ಅಲ್ಲ, ಸಮಸ್ತ ಗಾಂಧಾರದ ಒಡಲನ್ನ ಬಗೆದು ಅಲ್ಲಿನ ಸಂಪತ್ತನ್ನು ಲೂಟಿಗೈಯುವುದು ಅವರ ಮೂಲ ಕನಸು.
ಅಂದು ತಾಲಿಬಾನಿಗಳಿಗೆ ಅವಶ್ಯಕವಿದ್ದ, ಹಣ, ಶಸ್ತ್ರಾಸ್ತ್ರಗಳು, ಇವುಗಳನ್ನು ಕೊಡುವುದಕ್ಕೆ ಚೀನಾ ಮುಂದೆ ಬಂದಿತ್ತು. 1996 ರಿಂದ 2001 ವರೆಗೆ ತಾಲಿಬಾನಿಗಳಿಗೆ ವೆಪನ್ ಗಳ ಸಾಗಾಣೆ ಮಾಡಿತ್ತು ಚೀನಾ. ಇದನ್ನ ಅದೆಷ್ಟೋ ದೇಶಗಳು ವಿರೋಧಿಸಿದ್ದವು. ಆದರೆ ಕುತಂತ್ರಿ ಚೀನಾ ಮಾತ್ರ ತಾನೂ ಏನನ್ನೂ ಕೊಡಲೆ ಇಲ್ಲ, ಅದಕ್ಕೂ ನಮಗೂ ಯಾವುದೇ ಸಂಭಂದವಿಲ್ಲ ಅನ್ನೊ ಮೇಲ್ನೋಟಕ್ಕೆ ಹಾರಿಕೆ ಸ್ಟೇಟ್ಮೆಂಟ್ ಕೊಡುತ್ತ ಒಳಗಿಂದೊಳಗೆ ಸಾಗಟನೆ ಮಾಡುತ್ತಲೇ ಇತ್ತು, ಆದರೆ ವಿಶ್ವದ ಅನೇಕ ರಾಷ್ಟ್ರಗಳಿಂದ ಅತೀವ ವಿರೋಧಗಳು ಬರುತ್ತಿದ್ದಂತೆ, ನಿಧಾನಕ್ಕೆ ಕಡಿಮೆ ಮಾಡಿತ್ತಾದರೂ, ತಾಲಿಬಾನಿಗಳೊಂದಿಗಿನ ಸಂಭಂದವನ್ನು ಮಾತ್ರ ಕೆಡಿಕೊಂಡಿರಲಿಲ್ಲ.
ಅಫ್ಘಾನ್ ನಲ್ಲಿ ಇದೀಗ ಮತ್ತೆ ತಾಲಿಬಾನಿಗಳದ್ದೆ ಸಾಮ್ರಾಜ್ಯ. ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮತ್ತೇ ಇದೀಗ ಚೀನಾ ತುದಿಗಾಲಮೇಲೆ ನಿಂತಿದೆ. ಮೊದಲನೆಯದ್ದು ಯುಗರ್ ಮುಸ್ಲಿಮ್ ರ ಟೆನ್ಷನ್, ಇಷ್ಟು ಕಾಲ ಚೀನಾದಲ್ಲಿ ಯುಗರ್ ಮುಸ್ಲಿಂರು ನರಕ ಯಾತನೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ಈ ಯುಗರ್ ಮುಸ್ಲಿಮರಿಗಾಗಿ ಹೋರಾಟ ಮಾಡುತ್ತಿರುವ 'ಈಷ್ಟ್ ಟರ್ಕಿಸ್ತಾನ ಇಸ್ಲಾಮಿಕ್ ಮೂವ್ಮೆಂಟ್' ಅನ್ನೋ ಉಗ್ರಸಂಘಟನೆ ಕೂಡಾ ತಾಲಿಬಾನಿಗಳ ತೊಳ್ಬಲ ನಮಗೂ ಯ್ಯಾಕ್ಟೀವ್ ಆಗಿದೆ ಅನ್ನೊ ಹೇಳಿಕೆ ಕೊಟ್ಟಾದ ಬೆನ್ನಲ್ಲೇ, ಚೀನಾಗೆ ಅತಿದೊಡ್ಡ ಸಂಕಷ್ಟಕ್ಕೆ ಎದುರಾಗಿದೆ. ಇದರಿಂದ ಪಾರಾಗೊದಕ್ಕೆ ಹೊಸ ತಂತ್ರ ಶುರುಮಾಡಿದೆ. ಚೀನಾದ ಗಡಿ, ಅಫ್ಘಾನ್ ಹಾಗೂ ಟರ್ಕಿಸ್ಥಾನ ಎರಡೂ ಕಡೆ ಕೂಡಿದೆ. ಎರಡರಲ್ಲೂ ಯುಗರ್ ಮುಸ್ಲಿಮರ ಸಂಖ್ಯೆಯೇ ಹೆಚ್ಚಾಗಿರುವ ಸಿಂಜಿಯಾಂಗ್ ಪ್ರಾಂತ್ಯಕ್ಕೆ ಸಮೀಪದಲ್ಲಿದೆ. ಅಲ್ಲದೆ ಯುಗರ್ ಮುಸ್ಲಿಮರು ಕೂಡಾ ಈಷ್ಟ್ ಟರ್ಕಿಸ್ಥಾನ ಇಸ್ಲಾಮಿಕ್ ಮೂವ್ಮೆಂಟ್ ಮೇಲೆ ಅಘಾದ ವಿಶ್ವಾಸವಿಟ್ಟಿದ್ದಾರೆ. ಒಂದು ವೇಳೆ ತಾಲಿಬಾನ್ ಉಗ್ರರು ಸ್ವಲ್ಪ ಯಾಮಾರಿದರೂ, ಚೀನಾ 40 ವರ್ಷಗಳಿಂದ ಆಕ್ರಮಣಮಾಡಿ ಇಟ್ಟುಕೊಂಡಿರುವ ಅಷ್ಟು ಪ್ರಾಂತ್ಯ ಕೈತಪ್ಪೊ ಸಾಧ್ಯತೆ ಬಹಳ ಇದೆ. ಹಾಗಾಗಿ ಚೇಳಿಗೆ ಹಿರಿತನ ಕಟ್ಟೊಹಾಗೆ ತಾಲಿಬಾನಿಗೆ ಬೇಷರತ್ ಬೆಂಬಲ ಕೊಟ್ಟ ಚೀನಾ ಇದೀಗ ಆ ಉಗ್ರರ ನೆರಳಿನಲ್ಲಿ ಅವಿತುಕೊಂಡು ತನ್ನ ಹಗೆತನವನ್ನು ಸಾಧಿಸೊ ಪ್ರಯತ್ನದಲ್ಲಿ ಸನ್ನದ್ದವಾಗಿದೆ.
ಇಂದು ಜಗತ್ತು ಪ್ರೆಟ್ರೋಲಿಯಂ ಬಿಟ್ಟು ಎಲೆಕ್ಟ್ರಿಕಲ್ ಆಗುವತ್ತ ಸಾಗುತ್ತಿದೆ. ಮುಂದಿನ ಜಗತ್ತು ಅದರ ಮೇಲೆ ನಿಂತಿದೆ. ಎಲೆಕ್ಟ್ರಿಕ್ ಬ್ಯಾಟರಿ ಅಂದರೆ ಅದರಲ್ಲಿ ಮುಖ್ಯವಾಗಿ ಬಳಕೆಯಾಗುವುದು 'ಲಿಥಿಯಂ' ಅಂತಹ ಖನಿಜ ಸಂಪತ್ತು ಅಫ್ಘಾನಿಸ್ತಾನದಲ್ಲಿ ಜಗತ್ತಿನಲ್ಲಿರುವ ಅತಿವಿರಳದ ಅದೆಷ್ಟೋ ಟ್ರೀಲಿಯನ್ ಗಟ್ಟಲೇ ಸಂಪತ್ತು ಅಲ್ಲಿದೆ. ಅದರ ಮೇಲೆ ಹಲವಾರು ವರ್ಷಗಳಿಂದ ಕಣ್ಣಿಟ್ಟಿರುವ ಚೀನಾ ಇದಕ್ಕೋಸ್ಕರ ಅಲ್ಲಿ "ಒನ್ ಬೆಲ್ಟ್ ಒನ್ ರೋಡ್" ಮಾಡುವ ನೆಪದಲ್ಲಿ ತನ್ನ ಬೇರುಗಳನ್ನೂರಲು ವ್ಯವಸ್ಥೆಯನ್ನು ಮೊದಲೆ ಮಾಡಿಕೊಂಡಿದೆ. ಆದರೆ ಅಫ್ಘಾನಿಸ್ತಾನ ಅಂದೆಂತಹ ಮುಟ್ಟಾಳ ಕೆಲಸ ಮಾಡಿತ್ತೆಂದರೆ, ಚೀನಾದ ಬೆಟಲ್ ಸರ್ಜಿಕಲ್ ಗ್ರುಪ್ ನೊಂದಿಗೆ ಮೂರು ಬಿಲಿಯನ್ ಡಾಲರ್ ಪ್ರಾಜೆಕ್ಟ್ ಗೆ ಮೂವತ್ತು ವರ್ಷಗಳ ಮಟ್ಟಿಗೆ ಸಹಿ ಹಾಕಿದೆ. ಚೀನಾ ಅದಾಗಲೇ ಬಲು ಅಪರೂಪದ ಮೆಸ್ ಹಯಾಂಗ್ ಕಾಪರ್ ಮೈನಿಂಗ್ ನಡೆಸಿ ತನ್ನ ದೇಶಕ್ಕೆ ತೆಗೆದುಕೊಂಡು ಹೊಗುತ್ತಿದೆ. ಅದೇ ಸಂಪತ್ತಿಗಾಗಿ ಇತ್ತ ರಶಿಯಾ ಕೂಡಾ ಜಾತಕ ಪಕ್ಷಿಯಂತೆ ಕಾದು ಕುಳಿತಿದೆ. ತಾಲಿಬಾನಿಗಳ ಈ ಮಂಗನಾಟದ ಲಾಭ ಚೀನಾಗೋ? ರಶಿಯಾಗೋ? ಅನ್ನೊದನ್ನ ಕಾದು ನೋಡಬೇಕಿದೆ. ಹಿಂದೆ ಯಾವ ಕಾರಣಕ್ಕಾಗಿ ತಾಲಿಬಾನ್ ಹುಟ್ಟಿಕೊಂಡಿತೊ ಅದೇ ರಶಿಯಾದ ಎಂಜಲಿಗೆ ಕಾದು ಕುಳಿತಿದೆ ತಾಲಿಬಾನ್. ಅಲ್ಲಿನ ಸಂಪತ್ತು ತಮ್ಮ ವಶವಾಗಬೇಕೆನ್ನುವ ಆಶೆಮಾತ್ರ ಚೀನಾ ರಶಿಯಾಗಿದೆ. ಈ ಸಂಪತ್ತು ಸಿಕ್ಕಿಬಿಟ್ಟರೆ ಜಗತ್ತಿನ ದೊಡ್ಡನ್ನನಾಗುವುದು ದೊಡ್ಡ ಮಾತು ಅಲ್ವೇ ಅಲ್ಲ ಅನ್ನೊದು ಇವರ ಉದ್ದೇಶದ ಹಿಂದಿರೊ ಮರ್ಮ.
ಇನ್ನು ಪಾಕಿಸ್ತಾನದ ಮೂರ್ಖತನದ ನರ್ತನೆ ಹೇಗಿದೆ ಅಂದ್ರೆ:- ತನ್ನ ಮನೆಯ ಸೂತ್ತಲೂ ಸರ್ಪಸಂತತಿಯನ್ನು ಬೆಳೆಸುತ್ತಿದೆ.
ತನ್ನ ಮನೆಯ ಸುತ್ತಮುತ್ತ ತಾನು ಬೆಳೆಸಿ ಪೋಷಿಸಿದ ಆ ಸರ್ಪಸಂತತಿ ಮುಂದೊಂದು ದಿನ ತನ್ನ ಮನೆಯ ಬಾಗಿಲೊಳಕ್ಕೆ ಬಾರದೆ ಬಿಟ್ಟಿತೆ? ಅದೇ ಹಾವುಗಳಿಂದ ಒಂದೊಮ್ಮೆ ಕಚ್ಚಿಸಿಕೊಂಡು ಸಾಯದೇ ಇರಲು ಅಸಾಧ್ಯವೇ? ಭಾರತಕ್ಕೆ ತಕ್ಕ ಪಾಠ ಕಲಿಸಿ, ಕಾಶ್ಮೀರವನ್ನು ಸ್ವಾತಂತ್ರ್ಯ ಗೊಳಿಸಿಯೇ ತಿರುತ್ತೇವೆಂದು ಹಲವಾರು ದಶಕಗಳಿಂದ ಹಗಲು ಕನಸು ಕಾಣುತ್ತಿದೆ ಈ ಕುತಂತ್ರಿ ಪಾಕಿಸ್ತಾನ. ಅದಕ್ಕಾಗಿ ಉಗ್ರ ನರಮೇಧರಂತಹ ವಿಷಸರ್ಪ ಸಂತತಿಗಳನ್ನು ಬೆಳೆಸುತ್ತಲೆ ಇದೆ. ಮನೆ ಬಾಗಿಲಲ್ಲಿ ವಿಷ ಸರ್ಪಗಳನ್ನು ಬಿಟ್ಟುಕೊಳ್ಳುವುದು ಯಾವ ದೇಶಕ್ಕೂ ಒಳಿತು ಮಾಡುವುದಿಲ್ಲ. ಬಾಗಿಲಿಗೆ ಬಂದ ಸರ್ಪ ಒಂದಿಲ್ಲೊಂದು ದಿನ ಮನೆಯೊಳಗೆ ನುಗ್ಗಿಬಂದು ಕಚ್ಚುವುದು ಅನಿವಾರ್ಯ ಅಲ್ಲವೆ!. ಭಾರತದ ಮೇಲಿನ ದ್ವೇಷದ ಕಾರಣಕ್ಕಾಗಿ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ಒಂದೊಮ್ಮೆ ಅದೇ ಉಗ್ರರಿಂದ ಸರ್ವ ನಾಶವಾಗುವ ಕಾಲ ಕೂಡಾ ಸಮಿಪಿಸುತ್ತಿದೆ! ಈ ಭಯೋತ್ಪಾದಕ ಸಂಘಟನೆಗಳು ಒಂದುರೀತಿ ರಕ್ತಬೀಜಾಸುರರಂತೆ, ಒಮ್ಮೆ ತಲೆಯೆತ್ತಿನಿಂತ ಮೇಲೆ ಅದನ್ನು ನಾಶಮಾಡುವುದು ಪ್ರಯಾಸದ ಕೆಲಸ. ಅದರಲ್ಲೂ ಈ ಇಸ್ಲಾಮಿಕ್ ಹೆಸರಲ್ಲಿ ಹುಟ್ಟಿಕೊಳ್ಳುವ ಉಗ್ರ ಸಂಘಟನೆಗಳಿಗೆ ವಿಶ್ವದ ನಾನಾ ಮೂಲೆಗಳಿಂದ ಸಾಕಷ್ಟು ಹಣ ಹರಿದು ಬರುತ್ತದೆ. ಅದರಿಂದಾಗಿ ಅಲ್ಲಿ ಕೊಂದಷ್ಟು ಮತ್ತೇ ಮತ್ತೇ ಕಟ್ಟ ಹುಳುಗಳು ಹುಟ್ಟುತ್ತಲೆ ಹೊಗುತ್ತವೆ.
ಅಫ್ಘಾನ್ ನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದು ತಮ್ಮ ಧ್ವಜವನ್ನ ಹಾರಿಸುತ್ತಿದ್ದರೆ, ಇತ್ತ ಪಾಕಿಸ್ತಾನದಲ್ಲಿ ವಿಜಯದ ಸಂಭ್ರಮಾಚರಣೆ ಮಾಡಿದ್ದರು. ಅದರಲ್ಲೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಮುಖಂಡ ಮುಲ್ಲಾ ಬರಾದಾರ್ ಗಡ್ಡಕ್ಕೆ ತಾನೇ ಎಣ್ಣೆ ಹಚ್ಚಿ, ತಲೆಬಾಚಿ, ಮೇಕಪ್ ಮಾಡಿ ಅಫ್ಘಾನ್ ಕುರ್ಚಿಯಲ್ಲಿ ಕೂಡಿಸೊದಕ್ಕೆ ಓಡಾಡಿದಂತೆ ನಕರಾ ಶುರುಹಚ್ಕೋಂಡು ಬಿಟ್ಟಿದ್ದ. ಆದರೆ ಪಾಕಿಸ್ತಾನದಲ್ಲಿ ಪ್ರಗತಿಪರರೆನಿಸಿಕೊಂಡಿರುವ ಮುಸ್ಲಿಮ್ ಮುಖಂಡರು, ಕೆಲ ಬುದ್ದಿವಂತರು ಅಭಿಪ್ರಾಯ ಪಡುವಂತೆ, ಈ ತಾಲಿಬಾನಿಗಳು ಕಾಶ್ಮೀರಕ್ಕೆ ಕಾಲಿಡುವುದಕ್ಕೂ ಮೊದಲೇ ಪಾಕಿಸ್ತಾನವನ್ನು ನುಂಗಿಹಾಕುವ ಸಾಧ್ಯತೆಗಳೆ ಹೆಚ್ಚಿದೆ ಎಂಬ ವಾಸ್ತವದ ಸಂಗತಿಗಳನ್ನು ಮನಗಂಡ ಅವರು ಬಹಳ ಆತಂಕವನ್ನು ವ್ಯಕ್ತಪಡಿಸಿದ್ದರು. ಹೊದಿಯಾ ಪಿಶಾಚಿ ಅಂದ್ರೆ, ಬಂದಿಯಾ ಗವಾಚಿ ಅಂದಂತೆ ಅಫ್ಘಾನಿಸ್ತಾನದ ಸಿಂಹಾಸನದ ಮೇಲೆ ತಾಲಿಬಾನಿಗಳನ್ನು ಕುಡಿಸಿದ ಪಾಕಿಸ್ತಾನ ತನ್ನ ಬಾಲಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದೆ. ಹೀಗಂತ ಜಗತ್ತಿನ ರಕ್ಷಣಾ ಇಲಾಖೆ ಹಾಗೂ ಅಮೇರಿಕಾದ ರಕ್ಷಣಾ ತಜ್ಞರು ಇತ್ತೀಚೆಗೆ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
ಅಲ್ಲಿ ಅಮೇರಿಕಾ ಬಿಟ್ಟುಹೋದ ಅನೇಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ತಾಲಿಬಾನಿಗಳ ಕೈ ಸೇರಿವೆ. ಆ ಪೈಕಿ 5 ಲಕ್ಷಲ್ಕೂ ಹೆಚ್ಚು M16, M4, ಅಸಾಲ್ಟ್ ರೈಫಲ್ಸ್ ಗಳು, ಲಕ್ಷಾಂತರ ಲೈಟ್ ಮೀಷಿನ್ ಗನ್ ಗಳು, ಫಿಷ್ಟಿಕ್ಯಾಲಿಬರ್ ವೆಪನ್ ಗಳು, ಮೌಂಟೆಡ್ ಆರ್ಮ್ಡ್ ವೇಹಿಕಲ್ಸ್, ಸ್ನೈಪರ್ ಗನ್ಸ್ ಗಳು, ಸ್ಟೇಲ್ಕೋರ್ ಬುಲೆಟ್ ಗಳು, ಎರಡುಸಾವಿರಕ್ಕೂ ಅಧಿಕ ಶಸ್ತ್ರಾಸ್ತ್ರ ವಾಹನಗಳು, ನೂರಕ್ಕೂ ಅಧಿಕ ಯುದ್ದ ವಿಮಾನಗಳು, ಇನ್ನೂರಕ್ಕೂ ಹೆಚ್ಚು ಯುದ್ದ ಹೆಲಿಕಾಪ್ಟರ್ ಗಳು, ಸ್ಕ್ಯಾನ್ ಈಗಲ್ ಡ್ರೋನ್ ಗಳು, 40 ಎರಿಯಲ್ ವೆಹಿಕಲ್ ಗಳು ಹೀಗೆ ಸಾಕಷ್ಟು ಆಯುಧಗಳು ತಾಲಿಬಾನಿಗಳ ಕೈ ಸೇರಿದೆ. ಇದರಿಂದ ಪಾಕಿಸ್ತಾನಕ್ಕೆ ಆಘಾತ ಹಾಗೂ ಕಾಶ್ಮೀರಕ್ಕೆ ಆತಂಕದ ಸುಳಿವು ಹೆಚ್ಚಾಗಿದೆ.
ಈ ಬೆಳವಣಿಗೆ ಪಾಕಿಗಳಿಗೆ ಒಳ್ಳದಲ್ಲ, ಒಂದು ರೀತಿ ತಮ್ಮ ಘೋರಿಯನ್ನು ತಾವೇ ತೊಡಿಕೊಂಡಂತೆ. ಯಾಕೆಂದರೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಹೇಗೆ ವಶಪಡಿಸಿಕೊಂಡರೊ ಹಾಗೆ ಪಾಕಿಸ್ತಾನವನ್ನು ಕೂಡಾ ಅದೇ ರೀತಿ ವಶಪಡಿಸಿಕೊಂಡು ಅಲ್ಲಿಯೂ ಶರಿಯಾ ಕಾನೂನು ಜಾರಿಗೊಳಿಸಬೇಕೆಂಬುದು ಅಲ್ಲಿನ 'ತೆರಹಕ್-ಇ-ತಾಲಿಬಾನ್ ಪಾಕಿಸ್ತಾನ್' ಅನ್ನುವ ಟಿ.ಟಿ.ಪಿ ಉಗ್ರ ಸಂಘಟನೆಯ ಕನಸಾಗಿದೆ. ಇದು ಇದು ಪಾಕಿಸ್ತಾನದ ಗಡಿ ಬಲೂಚಿ ಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಪಸ್ತೂನಿಗಳ ನಾಯಕತ್ವದ ಉಗ್ರ ಸಂಘಟನೆ. ಪಾಕಿಸ್ತಾನದ ಭ್ರಷ್ಟ ಸರಕಾರವನ್ನು ಕಿತ್ತೆಸೆಯಲು ಈ ಟಿ.ಟಿ.ಪಿ ಉಗ್ರ ಸಂಘಟನೆ ಅನೇಕ ದಶಕಗಳಿಂದ ಅಲ್ಲಿ ಹೋರಾಟವನ್ನು ಮಾಡುಯುತ್ತಲೇ ಇದೆ. ಈ ಉದ್ದೇಶದಿಂದ ಟಿ.ಟಿ.ಪಿಯ ಮುಖಂಡರು ಆಲ್-ಖೈದಾ ಹಾಗೂ ತಾಲಿಬಾನ್ ಉಗ್ರರೊಂದಿಗೆ ಉತ್ತಮ ನಂಟು ಬೆಳೆಸಿಕೊಂಡಿದ್ದಾರೆ. ಜೊತೆಗೆ ತಮ್ಮ ನೆಲೆಯನ್ನು ಅಫ್ಘಾನಿಸ್ತಾನದ ಪಾಕಿಸ್ತಾನ ಗಡಿಗೆ ಹತ್ತಿರವಿರುವ 'ಪಾಕ್ತಿಕಾ ಪ್ರಾವಿನ್ಸ್' ಪ್ರದೇಶದಲ್ಲಿ ಸ್ಥಳಾಂತರಿಸಿದೆ. ಪಾಕ್ ಗಡಿಯಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿ ಅಲ್ಲಿನ, ಉದ್ಯಮಿಗಳು, ಕಾಂಟ್ರಾಕ್ಟ್ ಗಳು, ಸರಕಾರಿ ಅಧಿಕಾರಿಗಳನ್ನು ಬೆದರಿಸುವುದು, ವ್ಯಾಪಾರಿಗಳು, ಶ್ರೀಮಂತರನ್ನು ಅಪಹರಿಸಿ ಹಣ ವಸೂಲಿ ಧಂದೆ ಆರಂಭಿಸಿದ್ದಾರೆ. ಅಲ್ಲದೆ ಸರಕಾರದ ಬಹುತೇಕ ಕಾಮಗಾರಿಗಳಲ್ಲೂ ಟಿ.ಟಿ.ಪಿ ಶೇಕಡಾ 5% ಪ್ರೊಟೆಕ್ಷನ್ ಮನಿಯನ್ನು ಸಂಗ್ರಹ ಮಾಡುತ್ತದೆ. ಹೀಗೆ ಅದು ಹಣಕಾಸಿನಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತ ಬಂದಿದೆ. ಇದು ಹಲವಾರು ಬಾರಿ ತನ್ನ ಸ್ವರೂಪವನ್ನು ಪಾಕಿಸ್ತಾನದಲ್ಲಿ ತೊರಿಸದೇ ಬಿಟ್ಟಿಲ್ಲ. 2011 ರಲ್ಲಿ ಪಾಕಿಸ್ತಾನದ ಮೇಹೆರಾಲ್ ಏರ್ ಪೋರ್ಟ್ ಬೇಸ್ ಮೇಲೆ ಟಿ.ಟಿ.ಪಿಯ ಹದಿನೈದು ಜನ ಉಗ್ರರು ದಾಳಿ ಮಾಡಿ ರಾಕೇಟ್ ಪ್ರೋಫೈಲ್ ಗ್ರ್ಯಾನೈಟ್ಸನ್ನು ಬಳಸಿ ಅಲ್ಲಿ ನಿಂತಿದ್ದ ಯುದ್ದ ವಿಮಾನಗಳನ್ನು, ಆ್ಯಂಟಿ ಸಬ್ ಮರಿನ್ ಸರ್ವೇಲೆನ್ಸ್ ಕ್ರಾಪ್ಟ್ ಗಳನ್ನು ನಾಶಮಾಡಿದ್ದರು. ಈ ದಾಳಿಯಿಂದಾಗಿ ಸುಮಾರು ಹದಿನೈದು ಜನ ಸಾವನ್ನಪ್ಪಿದರು. 2016 ರಲ್ಲಿ ಕರಾಚಿಯ ಇಂಟರ್ನ್ಯಾಷನಲ್ ಏರ್ಪೋರ್ಟ್ ಮೇಲೆ ದಾಳಿನಡೆಸಿದ್ದರು. ನಂತರ ಪೇಶಾವರದ ಸೇನಾ ಶಾಲೆಯ ಮೇಲೆ ದಾಳಿ ನಡೆಸಿ 135 ಮಕ್ಕಳನ್ನು ಬಲಿ ತೆಗೆದುಕೊಂಡಿದ್ದು ಇದೇ ಟಿ.ಟಿ.ಪಿಯ ನರ ಹಂತಕರು.
ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬೆನ್ನಲ್ಲೇ ಟಿ.ಟಿ.ಪಿಯ ಉಗ್ರರು ಅಭಿನಂದನಾ ಪತ್ರವನ್ನು ಬಿಡುಗಡೆಗೊಳಿಸಿದ್ದರು. ಅದರಲ್ಲಿ ಹೈಬರ್ ಫಕ್ತುವಾ, ಬಲೂಚ್, ಸಿಂಧುವಿ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ಪಾಕಿಸ್ತಾನ ಸರಕಾರ ನಮ್ಮ ಮೊದಲ ಶತ್ರು ಅಂತ ಅದರಲ್ಲಿ ಹೇಳಿಕೊಂಡಿತ್ತು. ಹೀಗೆ ಪಾಕಿಸ್ತಾನದಲ್ಲೂ ಒಂದು ತಾಲಿಬಾನ್ ಹುಟ್ಕೊಂಡು ಬಲಿಷ್ಠವಾಗಿ ಬೆಳಿಯುತ್ತಾ ಇದ್ದರೆ ಇತ್ತ ಇಮ್ರಾನ್ ಖಾನ್, ಅಲ್ಲಿನ ಮಂತ್ರಿಗಳು ಮತ್ತು ಅಧಿಕಾರಿಗಳೆಲ್ಲರೂ ಟಿ.ಟಿ.ಪಿಯಿಂದ ನಿರ್ಭಿತರಾಗಿ ಕುಳಿತಿದ್ದಾರೆ. ಅದನ್ನು ನಿಯಂತ್ರಣ ಮಾಡಲು ನಾವು ಅಫ್ಘಾನಿಸ್ತಾನದ ತಾಲಿಬಾನಿಗಳನ್ನು ಬಳಸಿಕೊಳ್ಳುತ್ತೇವೆಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಅದು ಸಾಧ್ಯವಾಗುತ್ತಾ? ವಾಸ್ತವದಲ್ಲಿ ತಾಲಿಬಾನಿಗಳು ಯಾವುದೇ ಕಾರಣಕ್ಕೂ ಟಿ.ಟಿ.ಪಿಯನ್ನು ನಿಯಂತ್ರಿಸೊದಕ್ಕೆ ಹೊಗುವುದಿಲ್ಲ! ಹೇಗೆ ಒಂದು ಪ್ರಜಾಪ್ರಭುತ್ವದ ದೇಶ ಮತ್ತೋಂದು ಪ್ರಜಾಪ್ರಭುತ್ವದ ದೇಶವಿದ್ದರೆ ನನಗೆ ಸಹಾಯ ವಾಗುತ್ತದೆಂದು ಬಯಸುತ್ತದೆಯೋ, ಹೇಗೆ ಕಮ್ಯುನಿಸ್ಟರು ಕಮ್ಯುನಿಸ್ಟ್ ದೇಶಗಳ ಸಂಖ್ಯೆ ಹೆಚ್ಚಾಗಬೇಕೆಂದು ಬಯಸುತ್ತಾರೋ ಹಾಗೇ ಇಸ್ಲಾಂಗಳ ಎಮಿರೇಟ್ಸ್ ಗಳ ಸಂಖ್ಯೆ ಹೆಚ್ಚಾಗಬೇಕೆಂದು ತಾಲಿಬಾನ್ ಸಹಜವಾಗಿ ಬಯಸುತ್ತದೆ. ಹಾಗಾದಾಗ ಮಾತ್ರ ಅವರ ಶಕ್ತಿ ಹೆಚ್ಚಾಗುವುದು. ಆದ್ದರಿಂದ ಅವರು ಟಿ.ಟಿ.ಪಿಯ ನಿಯಂತ್ರಿಸೊ ಹರಸಾಹಸಕ್ಕೆ ಕೈ ಹಾಕುವುದಿಲ್ಲ. ಟಿ.ಟಿ.ಪಿ ಈಗಾಗಲೇ ಪಾಕಿಸ್ತಾನದಲ್ಲಿ ಚೀನಾದ ನೌಕರರು ಹಾಗೂ ಚೀನಾದ ಪ್ರಾಜೆಕ್ಟ್ ಗಳಮೇಲೆ ದಾಳಿ ಮಾಡಿದೆ. ಅವರು ಯುಘರ್ ವಿಷಯದಲ್ಲಿ ಚೀನಾವನ್ನು ವಿರೋಧ ಮಾಡ್ತಾ ಇದ್ದಾರೆ. ಇದನ್ನು ನಿಯಂತ್ರಣ ಮಾಡಲು ಪಾಕಿಸ್ತಾನಕ್ಕೆ ಇನ್ಮುಂದೆ ಕಷ್ಟಸಾಧ್ಯವಾಗಬಹುದು. ಟಿ.ಟಿ.ಪಿಗೆ ಅಫ್ಘಾನ್ ತಾಲಿಬಾನ್ ಸಹಾಯ ಮಾಡುತ್ತಲೇ ಹೊಗುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಟಿ.ಟಿ.ಪಿ ಪಾಕಿಸ್ತಾನವನ್ನು ನಾಶಮಾಡದೆ ಬಿಡಲ್ಲ. ಸಾಮಾನ್ಯವಾಗಿ ಭಯೋತ್ಪಾದನೆಯನ್ನು ಯಾರೆಲ್ಲ ಪ್ರೋತ್ಸಾಹಿಸುತ್ತಾರೊ ಅವರು ಅದೇ ಭಯೋತ್ಪಾದನೆಯಲ್ಲಿ ಸಿಕ್ಕು ಸರ್ವನಾಶ ವಾಗುವುದಂತೂ ಪಕ್ಕಾ!.