ನೀರು ಬಳಕೆಯ ಕುರಿತು ಕಾಳಜಿ ವಹಿಸಿ: ಕಬ್ಬೂರ

ಲೋಕದರ್ಶನ ವರದಿ

ಮುಂಡಗೋಡ: ಪ್ರತಿಯೊಬ್ಬರು ನೀರಿನ ಬಳಕೆ ಯ ಕುರಿತು ಕಾಳಜಿ ವಹಿಸಬೇಕು. ಕಾಡಿನ ನಾಶದಿಂದಾಗಿ ಇವತ್ತಿನ ದಿನಮಾನದಲ್ಲಿ ನೀರಿನ ಅಭಾವ ತುಂಬಾ ಕಂಡುಬರುತ್ತಿದ್ದು ಪ್ರತಿಯೊಬ್ಬರು ಕಾಡನ್ನು ಬೆಳಸಿ-ಉಳಿಸಿಕೊಂಡರೆ ನೀರಿನ ಬರವನ್ನು ನಿಗಿಸಬಹುದು. ಎಂದು ಇಲ್ಲಿನ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಈರನಗೌಡ ಕೆ ಕಬ್ಬೂರ ಹೇಳಿದರು.

   ಅವರು ಗುರುವಾರ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರಿಗೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮತ್ತು ಇವತ್ತಿನ ಆತಂಕದ ಸನ್ನಿವೇಶದಲ್ಲಿ ನಾವು ನದಿ, ಕೆರೆ, ಬಾವಿ, ಇತ್ಯಾಧಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಬೇಕು. 

  ನೀರನ್ನು ಮಿತ ಪ್ರಮಾಣದಲ್ಲಿ ಬಳಸೋಣ ಹಾಗೂ ಗ್ರಾಹಕರ ರಕ್ಷಣೆ ಮಾಡುವುದರ ಸಲುವಾಗಿ ತಾಲೂಕು, ಜಿಲ್ಲಾ, ಹಾಗೂ ರಾಜ್ಯ ಮಟ್ಟದಲ್ಲಿ ಗ್ರಾಹಕರ ಹಿತರಕ್ಷಣಾ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಹಕರಿಗೆ ಮಾಲಿಕರಿಂದ ಅನ್ಯಾಯವಾದಂತಹ ಸಂದರ್ಬದಲ್ಲಿ ಸಾರ್ವಜನಿಕರು ಗ್ರಾಹಕರ ಹಿತರಕ್ಷಣಾ ಕೇಂದ್ರಕ್ಕೆ ದೂರು ನೀಡಿ ಪರಿಹಾರವನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಉಪಯೋಗ ಪಡೆದುಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದು ಎಂದರು.

  ನ್ಯಾಯವಾದಿಗಳಾದ ಕೆ. ಎನ್. ಹೆಗಡೆ ಮತ್ತು ಅನ್ನಪೂರ್ಣ ಎಸ್ ಬಟ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

   ವಕೀಲರ ಸಂಘದ ಕಾರ್ಯದಶರ್ಿಯಾದ ಎಂ. ಎ. ನಂದಿಕಟ್ಟಿ ಇವರು ಮಾತನಾಡುತ್ತ, ಸಾರ್ವಜನೀಕರು ನೀರಿನ ಮಹತ್ವ ಅರಿತು ನೀರಿನ್ನು ಕಾಳಜಿಯಿಂದ ಬಳಸಿ ಹಾಗೂ ನೀರಿನ ಮೂಲಗಳನ್ನು ಉಳಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದು ಕರೆ ನೀಡಿದರು.

   ನ್ಯಾಯವಾಗಳಾದ ಎಂ. ಎಸ್. ಬಿಜಾಪುರ, ಆರ್. ಎಸ್. ಹಂಚಿನಮನಿ, ಜ್ಯೋತಿ ತಲ್ಲೂರ, ಜಿ. ಆರ್. ಆಲದಕಟ್ಟಿ ಹಾಗೂ ಹಿರಿಯ, ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು. 

ನ್ಯಾಯವಾದಿ ಆರ್. ಬಿ. ಹುಬ್ಳಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.