ರಾಣೇಬೆನ್ನೂರು16: ಸಾರ್ವಜನಿಕರ ಸಹಕಾರದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯ. ಪಕ್ಷಭೇದ ಮರೆತು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು. ಪಂಚಾಯ್ತಿ ಮೂಲಕ ಸರ್ಕಾರ ದಿಂದ ದೊರೆಯುವ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಗಿರಿಜಮ್ಮ ಹನುಮಂತಪ್ಪ ಬ್ಯಾಲದಹಳ್ಳಿ ಹೇಳಿದರು.
ಅವರು ನದಿಹರಳಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ನರೇಗಾ ಅನುದಾನದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ನಿಮರ್ಿಸಿರುವ ನೂತನ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ವ ಸದಸ್ಯರು ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ ಅಶೋಕ್ ನಾರಜ್ಜಿ ಮಾತನಾಡಿ, ತಾಲೂಕಿನಲ್ಲಿ ಎರಡು ಗ್ರಾಮ ಪಂಚಾಯ್ತಿಗಳಿಗೆ ಸ್ವಂತ ಕಟ್ಟಡ ನಿಮರ್ಿಸಿಕೊಳ್ಳಲು ಜಿಲ್ಲಾ ಪಂಚಾಯ್ತಿ ಅನುಮೋದನೆ ನೀಡಿದ್ದು, ಅದರಲ್ಲಿ ಈ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಶ್ರಮಪಟ್ಟು ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿದ್ದಾರೆ ಎಂದರು.
ಗ್ರಾಪಂ ಸದಸ್ಯ ಚಂದ್ರಪ್ಪ ಬೇಡರ ಮಾತನಾಡಿ, ಸ್ವಂತ ಕಟ್ಟಡವಿಲ್ಲದೆ ಅಂತಜಾಲ ಸಂಪರ್ಕ ಕೊರತೆಯಿಂದಾಗಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿತ್ತು. ನದಿಹರಳಹಳ್ಳಿ, ಹುಲಿಕಟ್ಟಿ ಹಾಗೂ ವಡೇರಾಯನಹಳ್ಳಿ ಗ್ರಾಮಸ್ಥರು ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಿದೆ, ಜಾಗದ ಕೊರತೆ ಕಾಡುತಿತ್ತು. ಆದರೆ, ಗ್ರಾಮದ ಭೀಮಪ್ಪ ಕುರುಬರ ಹಾಗೂ ರಾಮಪ್ಪ ಕುರುಬರ ಎರಡು ಗುಂಟೆ ದಾನ ನೀಡಿದ್ದಾರೆ. ಇವರ ಉದಾರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಭೂದಾನಿಗಳಾದ ಭೀಮಪ್ಪ ಕುರುಬರ ಹಾಗೂ ರಾಮಪ್ಪ ಕುರುಬರ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗುತ್ತೆಮ್ಮ ಕೋಲಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಗೀತಾ ಲಮಾಣಿ ಕಟ್ಟಡದ ನಾಮಫಲಕವನ್ನು ಉದ್ಘಾಟಿಸಿದರು.
ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಪ್ಪ ಮೇಗಳಮನಿ, ತಾಪಂ ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಸದಸ್ಯ ರಾಮಪ್ಪ ಬೆನ್ನೂರ, ವ್ಯವಸ್ಥಾಪಕ ಬಸವರಾಜ ಶಿಡೇನೂರ, ಭೀಮೇಶ್ ಕುಡಪಲಿ, ಜಿಪಂ ಉಪವಿಭಾಗದ ಎಇಇ ರಾಮಣ್ಣ ಬಜಾರಿ, ಸಹಾಯಕ ಭಿಯಂತರ ಪ್ರಮೋದ್ ಮುದುಗಲ್, ಪಿಡಿಒ ಗೀತಾ.ಟಿ., ಗಾಯಿತ್ರಮ್ಮ ಹೊಸಂಗಡಿ, ಮಂಜಪ್ಪ ಆನ್ವೇರಿ, ದಿಳ್ಳೆಪ್ಪ ಹೊಸಳ್ಳಿ, ಬಸವರಾಜ ಮೇಗಳಗೇರಿ, ದ್ರಾಕ್ಷಾಯಣಮ್ಮ ಬುಳ್ಳನಗೌಡ್ರ, ಕೆಂಚಮ್ಮ ನಲವಾಗಲ, ಶೀಲಾ ಕುರುಬರ, ಗುತ್ತೆಮ್ಮ ಉಜ್ಜೇರ, ಹಿರಿಯಕ್ಕ ಬಣಕಾರ ಇದ್ದರು.