ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಹಸೀಲ್ದಾರ ಮಾಂಸ ಮಾರಾಟಗಾರರಿಗೆ ಸೂಚನೆ

ಬ್ಯಾಡಗಿ15: ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಸೂಕ್ತ ಸ್ಥಳದಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟಕ್ಕೆ ಕ್ರಮ ವಹಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ತಹಸೀಲ್ದಾರ ಶರಣಮ್ಮ ಕಾರಿ ಮಾಂಸ ಮಾರಾಟಗಾರರಿಗೆ ಸೂಚಿಸಿದ್ದಾರೆ. 

      ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬೀದಿ ಬದಿಗಳಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಗುರುವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು ಬೀದಿ ಬದಿಗಳಲ್ಲಿ ಮಾಂಸ ಮಾರಾಟ ಮಾಡುವುದರಿಂದ ಗಲೀಜು ಮತ್ತು ದುವರ್ಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಎಲ್ಲೆಂದರಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟ ಮಾಡಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಮಾಂಸ ಮಾರಾಟಗಾರರಿಗೆ ಸೂಕ್ತ ಸ್ಥಳದಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟ ಮಾಡುವಂತೆ ತಿಳಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮುಖ್ಯಾಧಿಕಾರಿ ಅವರಿಗೆ ಸೂಚಿಸಿದರು. 

        ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಬೀದಿ ಬದಿಗಳಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟ ಮಾಡುವುದರಿಂದ ಹಂದಿ, ನಾಯಿಗಳ ಕಾಟವೂ ಹೆಚ್ಚಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಬಾರದೆಂಬ ಉದ್ದೇಶದಿಂದ ಸ್ವಚ್ಛತೆಯನ್ನು ಕಾಪಾಡಿಕೊಂಡು ಒಂದು ನಿದರ್ಿಷ್ಟ ಸ್ಥಳದಲ್ಲಿ ಮಾಂಸ ಮಾರಾಟ ಮಾಡುವಂತೆ ಈಗಾಗಲೇ ಮಾಂಸ ಮಾರಾಟಗಾರರಿಗೆ ತಿಳಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

 ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ನ್ಯಾಸ ಘಟಕದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ, ಗ್ರಾಮ ಲೆಕ್ಕಾಧಿಕಾರಿ ಗುಂಡಪ್ಪ ಹುಬ್ಬಳ್ಳಿ ಹಾಗೂ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.