ಸಂಕಲನ ಆರಂಭಿಸಿದ ತಗಟ್ಟಿ ಸಿನೆಮಾ

ವರದಿ: ಡಾ.ಪ್ರಭು ಗಂಜಿಹಾಳ 

ಬೆಂಗಳೂರ 27 : ಶ್ರೀ ಚೆನ್ನಿಗರಾಯಸ್ವಾಮಿ ಆಶೀರ್ವಾದದೊಂದಿಗೆ ಸಿಸಿ ಸಿನಿ ಪ್ರೊಡಕ್ಷನ್ ಬೆಂಗಳೂರ ಅವರ ಚೊಚ್ಚಲ ಕಾಣಿಕೆ ಹರಿಹರನ್ .ಬಿ .ಪಿ. ನಿರ್ದೇಶನದಲ್ಲಿ ‘ತಗ್ಗಟ್ಟಿ’ ಎಂಬ ಸಾಂಸಾರಿಕ , ಥ್ರಿಲ್ಲರ್ ,ಪ್ರೀತಿ ,ಬಾಂಧವ್ಯದ ಕಥಾ ಹಂದಿರದ ಕನ್ನಡ ಚಲನಚಿತ್ರ   ಸದ್ದಿಲ್ಲದೆ ಶೇ.95 ರಷ್ಟು ಭಾಗದ  ಚಿತ್ರೀಕರಣ ಮುಗಿಸಿ ಸಂಕಲನ ಕಾರ್ಯ ಆರಂಭಿಸಿದೆ. 

‘ತಗಟ್ಟಿ .ಇದು ಕರ್ನಾಟಕ-ತಮಿಳುನಾಡಿನ ನಡುವೆ ಒಂದು ಹಳ್ಳಿಯ ಹೆಸರು .   ಆ ಹಳ್ಳಿಯಲ್ಲಿ ನಡೆದ ಪವಾಡದ ಮೇಲೆ ಸೃಷ್ಟಿಯಾಗಿರುವ ಸತ್ಯ ಘಟನೆಯನ್ನು ಆಧರಿಸಿದ    ಕಥೆ ಇದು.    ಬಹು ತಾರಾ ಬಳಗದೊಂದಿಗೆ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು , ತಾರಾಗಣದಲ್ಲಿ ರೇಖಾದಾಸ್ ,ಶಿವಕುಮಾರ ಆರಾಧ್ಯ, ಮಂಡ್ಯ ಸಿದ್ದು ,ಡೈಮಂಡ್ ರಾಜಣ್ಣ , 4 ಯುವ ನಾಯಕ ನಾಯಕಿಯರು ಇದ್ದು,  ಚಲನಚಿತ್ರ ಹಾಗೂ  ಕಿರುತೆರೆಗಳಲ್ಲಿ   ಖಳನಟ ಮುಖ್ಯ ಪಾತ್ರವನ್ನು ವಹಿಸುವ ರೇಣು ಶಿಖಾರಿಯವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.   ಬಾಲರಾಜ್‌ವಾಡಿಯ ತಂದೆ ಮಗನ ಪಾತ್ರವೂ ತುಂಬಾ ಪ್ರಮುಖವಾಗಿದೆ.   ಮುಖ್ಯ  ಪಾತ್ರದಲ್ಲಿ ಪ್ರವೀಣ್‌ಕುಮಾರ್ ಟಿ.ಸಿ  ಅಮೋಘವಾಗಿ   ಅಭಿನಯಿಸಿದ್ದಾರೆ.   ಸಾಹಿತ್ಯವನ್ನು ,ಲವ್ ಇನ್ ಮಂಡ್ಯ’  ಖ್ಯಾತಿಯ ಅರಸು ಅಂತಾರೆ ಮತ್ತು ‘ಮುಸ್ಸಂಜೆ ಮಾತು’ ಚಲನಚಿತ್ರ ಪ್ರಖ್ಯಾತ ಸಾಹಿತಿ ರೇವಣ್ಣ ನಾಯಕ್ ದೊಡ್ಡ ಕಾಡನೂರು ರಚಿಸಿದ್ದಾರೆ .          ಕನ್ನಡ ಚಿತ್ರರಂಗದ ಬಾದಾಮಿ ಎಂದು ಕರೆಯಲ್ಪಡುವ ಎಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ.  ನಾಗೇಂದ್ರ ರಂಗಹರಿ ಅವರು  ಅದ್ಭುತ   ಛಾಯಾಗ್ರಹಣ  ಮಾಡಿದ್ದು ,ಪ್ರಸಾಧನ ಗುರು(ಆನಂದ), ಸಂಕಲನ ಮಾಂತ್ರಿಕ ಮುತ್ತುರಾಜ್ .ಟಿ ಅವರ ಸಂಕಲನವಿದೆ , ಪಿ.ಆರ್‌.ಓ ಸುಧೀಂದ್ರ ವೆಂಕಟೇಶ,   ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ  , ಸಹಾಯಕ ನಿರ್ದೇಶನ ಎಂ.ಡಿ.ರಾಘವೇಂದ್ರ ಅವರದಿದ್ದು ಚಿತ್ರಕ್ಕೆ ಚಂದ್ರಮಾ ಚನ್ನಾಚಾರಿ ಬಂಡವಾಳ ಹೂಡಿದ್ದಾರೆ.  

ಚಿಕ್ಕಮಂಗಳೂರು ,ಊಟಿ , ಬೆಂಗಳೂರು , ಕನಕಪುರ ಸುತ್ತಮುತ್ತ  84 ದಿನಗಳ ಕಾಲ ಚಿತ್ರೀಕರಣವಾಗಿದೆ .  ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು , ಮುತ್ತುರಾಜ್ ಅವರು ಸಂಕಲನ ಕಾರ್ಯ ಆರಂಭಿಸಿದ್ದು,   ಶೀಘ್ರದಲ್ಲೇ ಉಳಿದಿರುವ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಬೇಗನೇ ಬೆಳ್ಳಿತೆರೆಗೆ ತರುವ ಆಲೋಚನೆ ಇದೆ ಎಂದು ನಿರ್ದೇಶಕ ಹರಿಹರನ್ .ಬಿ.ಪಿ,ಚಿತ್ರದ ನಿರ್ಮಾಪಕರಾದ  ಚಂದ್ರಮಾ  ಚನ್ನಾಚಾರಿ ಹೇಳುತ್ತಾರೆ.