ಸೊಪ್ಪಡ್ಲ ಸತ್ತಿಗೇರಿ ರಸ್ತೆ ಅಪಘಾತಕ್ಕೆ ಆಹ್ವಾನಿಸುತ್ತಿದೆ: ಕಣ್ಣು ಮುಚ್ಚಿ ಕುಂತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು

ಯರಗಟ್ಟಿ,27 : ಸಮೀಪದ ಸೋಪ್ಪಡ್ಲ ಗ್ರಾಮದಿಂದ್ದ ಸತ್ತಿಗೇರಿಗೆ ತೆರಳುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಅದರಲ್ಲಿ ಮೊಳಕಾಲವರೆಗೆ ಮಳೆನೀರು ಸಂಗ್ರಹವಾಗಿದ್ದು ವಾಹನ ಸವಾರರು ಎಷ್ಟೋ ಬಾರಿ ಕೈ ಕಾಲು ಮುರಿದುಕೊಂಡ ಘಟನೆ ನಡೆದಿದೆ. 

ಸೊಪ್ಪಡ್ಲ ಗ್ರಾಮದಿಂದ ಸತ್ತಿಗೇರಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ. ಈಗಾಗಲೇ ಹತ್ತಾರು ವಾಹನಗಳು ಗುಂಡಿಯಲ್ಲಿ ಬಿದ್ದು ಕೈ ಕಾಲು ಕೆತ್ತಿಕೊಂಡ ಉದಾಹರಣೆಗಳು ಬಹಳಷ್ಟಿವೆ. ಇನ್ನೂ ಕೆಲವು ದಿನ ಬಿಟ್ಟರೆ ಬಹುತೇಕ ಬೈಕ್ ಸವಾರರು ಅಥವಾ ವಾಹನ ಸವಾರರು ಆ ಗುಂಡಿಗಳಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ.ಕಳೆದ ಮೂರು ತಿಂಗಳಿಂದ ತಗ್ಗಿನಲ್ಲಿ ನೀರು ಸಂಗ್ರಹವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇದುವರೆಗೂ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ರಾತ್ರಿ ಹೊತ್ತಿನಲ್ಲಿ ಸರಿಯಾಗಿ ರಸ್ತೆ ಕಾಣಲ್ಲ. ಅಲ್ಲದೇ ಆ ರಸ್ತೆಗೆ ಹೊಸದಾಗಿ ಯಾರಾದರೂ ವಾಹನ ಸವಾರರು ಬಂದರೆ ಗುಂಡಿಗಳ ಆಳ ತಿಳಿಯದೇ ಗುಂಡಿಯಲ್ಲಿ ಬೀಳಬಹುದಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಗುಂಡಿಯನ್ನು ಮುಚ್ಚಿ ಅನಾಹುತವನ್ನು ತಪ್ಪಿಸಬೇಕು ಎಂಬುವುದು ನಾಗರಿಕರ ಆಗ್ರಹವಾಗಿದೆ.ಹೇಳಿಕೆ: ಈ ರಸ್ತೆ ಕುರಿತು ಅಧಿಕಾರಿಗಳಿಗೆ ಹಲವಾರು ಬಾರಿ ಮನವು ಮಾಡಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಕಣ್ಣು ಮುಚ್ಚಿ ಕುರಿತು ಅಧಿಕಾರಿಗಳು ಈ ಹಿಂದೆ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದಾನೆ ಆದರೂ ಕೇಳಿಸಿಕೊಳ್ಳದ ಲೋಕೋಪಯೋಗಿ ಇಲಾಖೆ ಅಧಿಕಾರಿ ಕಿರಣ ಹುಣಶ್ಯಾಳ ಗ್ರಾಮ ಪಂಚಾಯತ್ ಸದಸ್ಯರು.  

ಹೇಳಿಕೆ: ರಸ್ತೆ ಕುರಿತು ಮಾಹಿತಿ ಬಂದಿದ್ದು ತಲೆಕೆ ಭೇಟಿ ನೀಡಿ ಪರೀಶೀಲಿಸಿ ಶೀಘ್ರವೇ ರಸ್ತೆಗಳಲ್ಲಿ ಬಿದ್ದಿರ್ತಕಂತ ಗುಂಡುಗಳನ್ನು ಮುಚ್ಚುವ ಕಾರ್ಯ ಮಾಡುತ್ತೇವೆ ಮೇಲಾಧಿಕಾರಿಗಳ ತಿಳಿಸಿ ಕಾಮಗಾರಿಯ ಯೋಜನಾ ವರದಿ ತಯಾರಿಸಿ ಕಾಮಗಾರಿ ಪ್ರಾರಂಭಿಸಲು ಅನುಮೋದನೆ. ಪಡೆದುಕೊಳ್ಳುತ್ತೇವೆವಿಜಯ ಸಂಗಪ್ಪಗೋಳ ಎಇಇ ಲೋಕೋಪಯೋಗಿ ಇಲಾಖೆ, ಸವದತ್ತಿ.