ತಬಸುಮ್ ಗುಳೇದಗುಡ್ಡಗೆ ಪಿಎಚ್‌ಡಿ ಪದವಿ ಪ್ರದಾನ

Tabasum Guledagudda conferred with Ph.D

ವಿಜಯಪುರ 05: ವಿಜಯಪುರ ನಗರದ ಪ್ರತಿಷ್ಠಿತ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕಿಯಾದ  ತಬಸುಮ್ ಗುಳೇದಗುಡ್ಡ "ಎಐಎಂಎಲ್ ಅಪ್ರೋಚ್ ಫಾರ್ ಡಿಸಿಶನ್ಸ್‌ ಇನ್ ಐಓಟಿ ಬೇಸ್ಡ್‌ ಹೆಲ್ತ್‌ ಮಾನಿಟರಿಂಗ್ ಸಿಸ್ಟಮ್" ಎಂಬ ವಿಷಯಕ್ಕೆ  ಸಂಬಂಧಿಸಿದಂತೆ ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.  

ಡಾ.ನೂರೂಲ್ಲಾ ಷರೀಫ್  ಅವರ ಮಾರ್ಗದರ್ಶನ ಪಡೆದು ಪ್ರಬಂಧವನ್ನು ಮಂಡಿಸಿದ್ದಾರೆ. ತಬಸುಮ್ ಗುಳೇದಗುಡ್ಡ ಅವರು ಸಿಕ್ಯಾಬ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಇಸಿಇ ವಿಭಾಗದ ಅಧ್ಯಾಪಕರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್‌ಐಇಟಿ ಪ್ರಾಂಶುಪಾಲರಾದ ಡಾ. ಸಯ್ಯದ್ ಅಬ್ಬಾಸ್ ಅಲಿ, ಕಂಪ್ಯೂಟರ್ ಸೈನ್ಸ್‌ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಎ ಖಾದ್ರಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್‌. ಎ. ಪುಣೇಕರ್ ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್, ಕಾರ್ಯದರ್ಶಿ ಎ. ಎಸ್‌. ಪಾಟೀಲ ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು  ಅಭಿನಂದಿಸಿದ್ದಾರೆ.