ತಿರುಮಲ, ಮೇ ೧೪, ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಕಲ್ಪಿಸಲು ದೇಗುಲ ನಗರಿ ತಿರುಮಲದಲ್ಲಿ ಸಿದ್ದತೆಗಳು ನಡೆಯುತ್ತಿವೆ. ಈ ತಿಂಗಳ ೨೮ ರಂದು ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ನಿತ್ಯ ಏಳು ಸಾವಿರ ಮಂದಿಗೆ ಮಾತ್ರ ತಿಮ್ಮಪ್ಪನ ದರ್ಶನ ಕಲ್ಪಿಸುವ ರೀತಿ ವ್ಯವಸ್ಥೆ ಮಾಡಬೇಕು ಎಂಬ ಆಲೋಚನೆಯನ್ನು ಟಿಟಿಡಿ ಹೊಂದಿದೆ. ಭಕ್ತರ ನಡುವೆ ದೈಹಿಕ ಅಂತರ ಕಾಪಾಡಿಕೊಂಡು ದರ್ಶನ ವ್ಯವಸ್ಥೆಗೆ ಏರ್ಪಾಟು ಮಾಡಲಾಗುತ್ತಿದೆ. ಮೊದಲು ಟಿಟಿಡಿ ಉದ್ಯೋಗಿಗಳಿಗೆ ವೆಂಕಟರಮಣನ ದರ್ಶನ ಲಭಿಸಲಿದೆ.ನಂತರ ತಿರುಮಲದಲ್ಲಿ ವಾಸವಾಗಿರುವ ಸ್ಥಳೀಯರಿಗೆ ದರ್ಶನ ಕಲ್ಪಿಸಲಿದ್ದಾರೆ. ಆದರೆ, ಭಕ್ತರು ಪೂರ್ಣ ಪ್ರಮಾಣದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸಕಲ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.