ಬೆಂಗಳೂರು, ಜ.29, ಎಕ್ಸ್ ಪ್ರೆಸ್ ಡಿಸ್ಟ್ರಿಬ್ಯುಷನ್ ನಲ್ಲಿ ಪ್ರಮುಖ ಸಂಸ್ಥೆಯಾಗಿರುವ ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯು ತನ್ನ ತ್ರೈಮಾಸಿಕ ಹಣಕಾಸು ಸಾಧನೆಯನ್ನು ಪ್ರಕಟಿಸಿದೆ.ಅಕ್ಟೋಬರ್-ಡಿಸೆಂಬರ್ ನ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು 26 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ಕಳೆದ ವರ್ಷ ಇದೇ ಅವಧಿಯಲ್ಲಿ 19 ಕೋಟಿ ರೂ ನಿವ್ವಳ ಲಾಭ ಗಳಿಸಿತ್ತು. ಸಂಸ್ಥೆಯು ಈ ತ್ರೈಮಾಸಿಕ ಅವಧಿಯಲ್ಲಿ ಶೇಕಡ 36.4 ರಷ್ಟು ಹೆಚ್ಚುವರಿ ಬೆಳವಣಿಗೆ ಕಂಡಿದೆ.
ಆಡಳಿತ ಮಂಡಳಿಯು ಎರಡನೇ ಮದ್ಯಂತರ ಲಾಭಾಂಶವನ್ನು ಪ್ರತಿ ಶೇರಿಗೆ 1.5 ರೂ ಎಂದು ಶಿಫಾರಸು ಮಾಡಿದೆ. ಒಟ್ಟಾರೆ ಲಾಭಾಂಶವು ಪ್ರತಿ ಶೇರಿಗೆ ರೂ 3 ನಿಗದಿ ಪಡಿಸಿದೆ. ಈ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ನಿವ್ವಳ ಲಾಭಾಂಶದ ಮಾರ್ಜಿನ್ ಶೇಕಡ 9.5 ಇದ್ದು ಕಳೆದ ಅವಧಿಯಲ್ಲಿ ಶೇಕಡ 7.1 ಇತ್ತು. ಈ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ 268 ಕೋಟಿ ರೂ ರೆವೆನ್ಯೂ ಫ್ರಮ್ ಆಪರೇಷನ್ ಆಗಿದ್ದು ಕಳೆದ ವರ್ಷದ ಇದೇ ಅವಧಿಯಲ್ಲಿ 263 ಕೋಟಿ ರೂ ರೆವೆನ್ಯೂ ಫ್ರಮ್ ಆಪರೇಷನ್ ಆಗಿತ್ತು. ಈ ತ್ರೈಮಾಸಿಕದಲ್ಲಿ ಶೇಕಡ 2 ರಷ್ಟು ಹೆಚ್ಚುವರಿ ಬೆಳವಣಿಗೆ ಗಳಿಸಿದೆ. "ಆರ್ಥಿಕತೆಯಪ್ರಮುಖ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸ್ಥೂಲ ಆರ್ಥಿಕ ವಾತಾವರಣದ ಹೊರತಾಗಿಯೂ ಟಿಸಿಐ ಎಕ್ಸ್‌ಪ್ರೆಸ್ ತ್ರೈಮಾಸಿಕದಲ್ಲಿ ಚೇತರಿಸಿಕೊಳ್ಳುವ ಕಾರ್ಯಕ್ಷಮತೆಯನ್ನು ನೀಡಿದೆ ಎಂದು ವರದಿಮಾಡಲು ನನಗೆ ಸಂತೋಷವಾಗಿದೆ. ಈ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ 268 ಕೋಟಿ ರೂ ರೆವೆನ್ಯೂ ಫ್ರಮ್ ಆಪರೇಷನ್ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡ 2 ರಷ್ಟು ಹೆಚ್ಚುವರಿ ಬೆಳವಣಿಗೆ ದಾಖಲಿಸಿದೆ" ಎಂದು ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್ ಹೇಳಿದರು.