ಟಿ20 ವಿಶ್ವಕಪ್: ಭಾರತ ತಂಡ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ ಎಂದ ಹರ್ಮನ್ಪ್ರೀತ್ ಕೌರ್

ಸಿಡ್ನಿ, ಫೆ 17 ,ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಆರಂಭವಾಗಲು ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಭಾರತ ತಂಡ ದಿನದಿಂದ ದಿನಕ್ಕೆ ಸುಧಾರಣೆ ಕಂಡುಕೊಳ್ಳುತ್ತಿದೆ ಎಂದು ನಾಯಕಿ ಹರ್ಮನ್ಪ್ರೀತ್ ಕೌರ್ ತಿಳಿಸಿದ್ದಾರೆ.ಮುಂದಿನ ಶುಕ್ರವಾರ ಭಾರತ ಮಹಿಳಾ ತಂಡ ಇಲ್ಲಿನ ಸಿಡ್ನಿ ಶೋಗ್ರೌಂಡ್ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿದೆ. ಕಳೆದ 2017ರ ವಿಶ್ವಕಪ್ ರೀತಿ ಪ್ರದರ್ಶನ ತೋರಲು ತಂಡ ಉತ್ಸುಕವಾಗಿದೆ. ಅಂದು ಭಾರತ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಸೋಲು ಅನುಭವಿಸಿತ್ತು.

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೂರು ಬಾರಿ ಸೆಮಿಫೈನಲ್ ಹಣಾಹಣಿಯಲ್ಲಿ ಸೋಲು ಅನುಭವಿಸಿತ್ತು. ಆದರೆ, ಒಮ್ಮೆಯೂ ಫೈನಲ್ ತಲುಪಿರಲಿಲ್ಲ. ವೆಸ್ಟ್ ಇಂಡೀಸ್ನಲ್ಲಿ ಕಳೆದ 2018ರ ಆವೃತ್ತಿಯಲ್ಲಿ 2009ರ ಚಾಂಪಿಯನ್ ಇಂಗ್ಲೆಂಡ್ಗೆ ಎಂಟು ವಿಕೆಟ್ಗೆ ಮಣಿದಿತ್ತು.ಈ ಬಗ್ಗೆ ಮಾತನಾಡಿದ ಹರ್ಮನ್ ಪ್ರೀತ್ ಕೌರ್,"ನಮ್ಮ ತಂಡ ದಿನದಿಂದ ದಿನಕ್ಕೆ ಸುಧಾರಣ ಕಂಡುಕೊಳ್ಳುತ್ತಿದ್ದು, ಎಲ್ಲ ಆಟಗಾರ್ತಿಯರು ಧನಾತ್ಮಕ ಮನೋಭಾವ ಹೊಂದಿದ್ದಾರೆ. 2017 ರ ಪ್ರದರ್ಶನ ಮತ್ತೊಮ್ಮೆ ಮೂಡಿಬಂದರೆ ನನಗೆ ಆಶ್ಚರ್ಯ ಉಂಟಾಗಲಿದೆ. ಒಂದು ವೇಳೆ ನಾವು ಗೆದ್ದರೆ ಇದು ನಮ್ಮ ಪಾಲಿಗೆ ಅತ್ಯಂತ ದೊಡ್ಡದು,'' ಎಂದು ಹೇಳಿದ್ದಾರೆ.''ನನಗೆ ನಮ್ಮ ಪೋಷಕರು ಏನೂ ಹೇಳಿಲ್ಲ. ಅವರು ನಮ್ಮ ಮೇಲೆ ಒತ್ತಡ ಹಾಕಲು ಇಷ್ಟವಿಲ್ಲ. ಒಂದು ವೇಳೆ ನಾವು ಚಾಂಪಿಯನ್ ಆದರೆ, ಅದು ನಮ್ಮ ಪಾಲಿಗೆ ದೊಡ್ಡದು. ಈ ಹಾದಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಾಗುತ್ತದೆ,'' ಎಂದು ತಿಳಿಸಿದ್ದಾರೆ.