ನವದೆಹಲಿ, ಜೂನ್ 12ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಈ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವಕಪ್ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಆದರೆ, ಆಸ್ಟ್ರೇಲಿಯಾದ ಆರೋಗ್ಯ ಸಚಿವ ರಿಚರ್ಡ್ ಕೋಲ್ಬೆಕ್ ದೇಶದಲ್ಲಿ ವಿಶ್ವಕಪ್ ಆಯೋಜನೆಯ ಭರವಸೆ ಮೂಡಿಸಿದ್ದಾರೆ. ಕೊರೊನಾ ವೈರಸ್ ಭೀತಿಯನ್ನು ಗಮನಿಸಿದರೆ, ಟಿ-20 ವಿಶ್ವಕಪ್ ಅಪಾಯದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ಈ ಸಂಬಂಧ ನಿರ್ಧಾರವನ್ನು ಜುಲೈ ವರೆಗೆ ಮುಂದೂಡಲು ನಿರ್ಧರಿಸಿತ್ತು.ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಆಸ್ಟ್ರೇಲಿಯಾ ಸರ್ಕಾರ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಟಿ-20 ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಿಸುತ್ತಿದೆ ಎಂದು ಕೋಲ್ಬೆಕ್ ಹೇಳಿದ್ದಾರೆ. ಆಟಗಾರರು ಮಾತ್ರವಲ್ಲದೆ ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.ಟಿ 20 ವಿಶ್ವಕಪ್ ದೇಶದಲ್ಲಿ, ನಡೆಸಲು ಬೇಕಾದ ಸುರಕ್ಷತೆಗಳನ್ನು ಕೈಗೊಳ್ಳಲು ಸರ್ಕಾರಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಕೈ ಜೋಡಿಸ ಬೇಕು ಎಂದು ತಿಳಿಸಿದ್ದಾರೆ.