ಜಾಗತೀಕರಣ ಯುಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು ಕುರಿತು ವಿಚಾರ ಸಂಕಿರಣ

ಲೋಕದರ್ಶನ ವರದಿ

ಬೆಳಗಾವಿ 11:  ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕ ಹಾಗೂ ಸಸ್ಯಶಾಸ್ತ್ರ ಸಂಘದ ಸಹಯೋಗದಲ್ಲಿ "ಜಾಗತೀಕರಣ ಯುಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು" (ಆಯ್.ಪಿ.ಆರ್.) ವಿಷಯದ ಕುರಿತು ವಿಚಾರಸಂಕಿರಣವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಬೆಲ್ಲದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಪರಬ್ ಪ್ರಸ್ತುತ ಸನ್ನಿವೇಶದಲ್ಲಿ ಆಯ್.ಪಿ.ಆರ್. ನ ನಿಯಮದ ಪ್ರಾಮುಖ್ಯತೆ ಮತ್ತು ಅದರ ಪ್ರಕಾರಗಳನ್ನು ತಿಳಿಸುವುದರೊಂದಿಗೆ ಆಯ್.ಪಿ.ಆರ್.ನ ನಿಯಮಗಳಲ್ಲಿ ಶೈಕ್ಷಣಿಕ ಸಂಶೋಧನೆಯ ಉಲ್ಲೇಖವಿರುವುದನ್ನು ವಿವರಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾಯರ್ೆ ಡಾ. ಜೆ.ಎಸ್. ಕವಳೇಕರ ಅವರು ಸರ್ವರನ್ನು ಸ್ವಾಗತಿಸಿದರು. ಕಾಮಾಕ್ಷಿ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಸೌಮ್ಯಾ ಮತ್ತು ಸಂಗಡಿಗರು ಪ್ರಾರ್ಥನೆಯನ್ನು ಹಾಡಿದರು. ಮಂಜುನಾಥ ಪಾಟೀಲ ವಂದಿಸಿದರು. ಪೃಥ್ವಿರಾಜ ಚವ್ಹಾಣ ಮತ್ತು ಸ್ನೇಹಲ ರಾಯ್ಕರ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಆಯ್.ಕ್ಯೂಎ.ಸಿ. ಸಂಯೋಜಕರಾದ ಪ್ರೊ. ಆರ್.ಆರ್. ವಡಗಾವಿ, ಸಸ್ಯಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ. ಪಿ.ಎಸ್. ಮೆಳವಂಕಿ ಹಾಗೂ ಎಲ್ಲ ವಿಭಾಗಗಳ ಬೋಧಕ ಬೋಧಕೇತರ ಸಿಬ್ಬಂದಿಯವರು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.