ನಾಳೆಯಿಂದ ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ, ಸೈನಾ, ಶ್ರೀ ಮೇಲೆ ಚಿತ್ತ

saina

ಲಖನೌ, ನ.25- ಇಲ್ಲಿನ ಬಾಬು ಬನಾರಸಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ(ನ.26) ದಿಂದ ಡಿಸೆಂಬರ್ ಒಂದರ ವರೆಗೆ ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಆರಂಭವಾಗಲಿದ್ದು, ಎಲ್ಲರ ಚಿತ್ತ ಭಾರತೀಯ ಆಟಗಾರರ ಮೇಲೆ ನೆಟ್ಟಿದೆ. 

ಇತ್ತೀಚಿನ ದಿನಗಳಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡುತ್ತಿರುವ ಸೈನಾ ನೆಹವಾಲ್ ತವರಿನಲ್ಲಿ ಅಬ್ಬರಿಸೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ ನ ಚೊಲೆ ಬಿರ್ಚ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಉಳಿದಂತೆ ಮಧು ಅಗ್ರೆ ಸಹ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಪುರುಷರ ಸಿಂಗಲ್ಸ್ ನಲ್ಲಿ ಎಚ್.ಎಸ್ ಪ್ರಣಯ್, ಕಿಡಂಬಿ ಶ್ರೀಕಾಂತ್, ಪರುಪಳ್ಳಿ ಕಶ್ಯಪ್, ಲಕ್ಷ್ಯ ಸೇನ್, ಸೌರಭ್ ವರ್ಮಾ, ಸಾಯಿ ಪ್ರಣೀತ್ ಉತ್ತಮ ಪ್ರದರ್ಶನ ನೀಡಿ ಗೆಲುವು ದಾಖಲಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.