ತಿರುಮಲ,ನ 21: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋಟರ್್ ನೀಡಿರುವ ತೀಪರ್ಿನ ಬಗ್ಗೆ ಪುರಿಯ ಗೋವರ್ಧನ ಪೀಠಾಧಿಪತಿ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ್ ಅತೃಪ್ತಿ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಆದೇಶ ಆಶಾಜನಕವಾಗಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ರಾಮ ಮಂದಿರಕ್ಕೆ ಭೂಮಿ ಹಂಚಿಕೆಯೇನೋ ಸರಿ, ಆದರೆ, ಇತರ ಧರ್ಮದವರಿಗೆ ಭೂಮಿ ಹಂಚಿಕೆ ಮಾಡುವ ಅಧಿಕಾರ ಸುಪ್ರೀಂ ಕೋಟರ್್ಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ವಿವಾದಿತ ಸ್ಥಳ ಯಾರಿಗೆ ಸೇರಿದ್ದು ನ್ಯಾಯಾಲಯ ಹೇಳ ಬೇಕಾಗಿತ್ತೇ ವಿನಃ, ಇನ್ನೊಂದು ಧರ್ಮದವರಿಗೆ ಭೂಮಿ ಹಂಚಿಕೆ ಮಾಡುವಂತೆ ಹೇಗೆ ಹೇಳಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಮಥುರಾ ಮತ್ತು ಕಾಶಿ ವಿಷಯಗಳಲ್ಲೂ ಕೂಡಾ ಇದೇ ರೀತಿ ತೀಪು ನೀಡಿ ಆ ಪ್ರದೇಶಗಳನ್ನು ಮಿನಿ-ಪಾಕಿಸ್ತಾನವನ್ನಾಗಿ ಪರಿವತರ್ಿಸುತ್ತಿರಾ ಎಂದು ಸ್ವಾಮೀಜಿ ಕೇಳಿದ್ದಾರೆ.
ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅಧಿಕಾರಾವಧಿಯಲ್ಲಿ ಆಯೋಧ್ಯೆಯ ವಿವಾದಿತ 2.77 ಎಕರೆ ಭೂಮಿಯನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂಬ ಪ್ರಸ್ತಾವನೆ ಬಂದಿತ್ತು... ಎಲ್ಲರೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದರೂ, ತಾವು ಮಾತ್ರ ಒಪ್ಪಿಗೆ ನೀಡಿರಲಿಲ್ಲ, ಕಾರಣ ಪ್ರಸ್ತಾಪ ಅಂಗೀಕರವಾಗಲಿಲ್ಲ ಎಂದು ಹೇಳಿದರು.