13ರಂದು ಸ್ವಾಮಿಗಳ ಜಯಂತ್ಯೋತ್ಸವ ಹಾಗು ಕೊಟ್ಟೂರೇಶ್ವರ ರಥೋತ್ಸವ
Swami Jayanti and Kottureshwara Chariot Festival on the 13th
13ರಂದು ಸ್ವಾಮಿಗಳ ಜಯಂತ್ಯೋತ್ಸವ ಹಾಗು ಕೊಟ್ಟೂರೇಶ್ವರ ರಥೋತ್ಸವ
ಬಳ್ಳಾರಿ 10 : ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಹಾನಗಲ್ಲಕುಮಾರ ಮಹಾಶಿವಯೋಗಿಗಳ 158ನೆಯ ಹಾಗೂ ಜಗದ್ಗುರುಡಾ. ಸಂಗನಬಸವ ಮಹಾಸ್ವಾಮಿಗಳವರ 87ನೇ ಜಯಂತ್ಯೋತ್ಸವು ಸೆಪ್ಟಂಬರ್ 13 ಮತ್ತು 14 ರಂದು ನಡೆಯಲಿವೆ. ಸೆಪ್ಟಂಬರ್ 13ರ ಶನಿವಾರ ಸಂಜೆ 4 ಗಂಟೆಗೆ ಸೋಮಸಮುದ್ರಗ್ರಾಮದಲ್ಲಿ ಪ್ರಾರಂಭವಾಗುವ ಪಾದಯಾತ್ರೆಯು ಶ್ರೀಧರಗಡ್ಡೆ ಗ್ರಾಮವನ್ನುತಲುಪಿ, ಶ್ರೀಕನಕ ದುರ್ಗಮ್ಮಗುಡಿಯ ಮೂಲಕ ಬ್ರೂಸ್‌ಪೇಟೆ ಪೊಲೀಸ್‌ಠಾಣೆಯ ಮೂಲಕ ಶ್ರೀಮಠದಲ್ಲಿ ಸಮಾರೋಪಗೊಳ್ಳಲಿದೆ. ಅಲ್ಲದೇ, ಸಂಜೆ 7 ಗಂಟೆಗೆ ಕೊಟ್ಟೂರೇಶ್ವರರ ರಥೋತ್ಸವವು ನೆರವೇರುವುದು. ಸಂಜೆ 7 ಗಂಟೆಗೆ ಹಾನಗಲ್ಲಕುಮಾರ ಮಹಾಶಿವಯೋಗಿಗಳ ‘ಜೀವನದರ್ಶನ’ ಪ್ರವಚನ ಮಂಗಲೋತ್ಸವ. ಬಾಗಲಕೋಟೆಯ ಗೌ.ಮ.ಉಮಾಪತಿ ಶಾಸ್ತ್ರಿಗಳು ರಚಿಸಿರುವ ‘ಹಂಪೆ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರುಕೊಟ್ಟೂರಸ್ವಾಮಿ ಗುರುಪರಂಪರೆ’ ಗ್ರಂಥ ಲೋಕಾರೆ್ಣ ನಡೆಯಲಿದೆ.ಸೆಪ್ಟಂಬರ್ 14ರ ಭಾನುವಾರ ಬೆಳಗ್ಗೆ 10 ಗಂಟೆಗೆ 1111 ಮುತ್ತೈದೆಯರಿಗೆ ಉಡಿ ತುಂಬುವಿಕೆ ಹಾಗೂ ಪೂಜ್ಯದ್ವಯರ ಭಾವಚಿತ್ರದ ಮಹೋತ್ಸವ ನೆರವೇರಲಿದೆ.ಎರೆಡು ದಿನಗಳ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.ಎರೆಡು ದಿನಗಳ ಕಾರ್ಯಕ್ರಮಗಳಲ್ಲಿ ಬಳ್ಳಾರಿ, ಶ್ರೀಧರಗಡ್ಡೆ, ಶಿರಿವಾರ, ಸೋಮಸಮುದ್ರ, ಮದಿರೆ, ಕುರುಗೋಡು, ದರೂರು, ಸಿರಿಗೇರಿ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ಗುರುಹಿಹಿರಿಯರು, ಭಕ್ತಾಧಿಗಳುಪಾಲ್ಗೊಳ್ಳಲಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 