ಪ್ರಶಸ್ತಿ ವಿಜೇತ ಕೃಷಿ ಅಧಿಕಾರಿ ಕುಂಬಾರರಿಗೆ ನಾಗರಿಕರಿಂದ ಸನ್ಮಾನ
Citizens felicitate award-winning Agriculture Officer Kumbar
ಲೋಕದರ್ಶನ ವರದಿ
ಬೈಲಹೊಂಗಲ 24 : ತಾಲೂಕಿನ ನೇಸರಗಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಬಸವ ನಗರದ ನಿವಾಸಿ ರುದ್ರ್ಪ ಕುಂಬಾರ ಇವರಿಗೆ ಇಲಾಖೆಯು ಉತ್ತಮ ಸೇವಕ ಎಂದು 2025-26 ನೇ ಸಾಲಿನ ಪ್ರಶಂಸನಾ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಸ್ಮರಿಸಿ ಬಡಾವಣೆಯ ನಿವಾಸಿಗಳು ರವಿವಾರ ಯೋಗ ಧ್ಯಾನ ಮಂದಿರದಲ್ಲಿ ಸತ್ಕರಿಸಿದರು.
ರುದ್ರ್ಪ ಕುಂಬಾರ ಅವರು ಸತ್ಕಾರ ಸ್ವೀಕರಿಸಿ ಮಾತನಾಡಿ, ಭಗವಂತ ರೈತರ ಸೇವೆ ಮಾಡುವ ಸದಾವಕಾಶ ಕೊಟ್ಟಾಗ ಬದ್ದತೆಯಿಂದ ಸಾರ್ವಜನಿಕ ವಲಯದಲ್ಲಿ ನಿರ್ವಹಿಸಿ ಜನರ, ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಬೇಕು. ಬಡ ರೈತರಿಗಾಗಿ ಅನುಷ್ಠಾನಗೊಂಡ ಯೋಜನೆಗಳನ್ನು ನಿಯಮಿತವಾಗಿ ತಲುಪಿಸಿದಾಗ ಕರ್ತವ್ಯಕ್ಕೆ ಮೆರಗು ಬರುತ್ತದೆ ಎಂದರು.
ಉದ್ಯಮಿ ನಾಗರಾಜ ಗುಂಡ್ಲೂರ ಮಾತನಾಡಿ, ಅನೇಕ ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಂಬಾರ ಅವರು ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರ ಪ್ರಯುಕ್ತ ಪ್ರಶಸ್ತಿಗೆ ಭಾಜನರಾಗಿರುವದು ಹೆಮ್ಮೆಯಾಗಿದೆ ಎಂದರು.
ಅಶೋಕ ಮಳೆಪ್ಪನವರ, ಮತ್ತಪ್ಪ ಗಾಣಿಗೇರ, ಆರ್.ಬಿ.ಹಂಚಿನಮನಿ, ವ್ಹಿ.ಎ.ಕಡಕೊಳ, ಚಂದರಶೇಖರ ಹುದ್ದಾರ, ಪೂರ್ಣಿಮಾ ಯಲಿಗಾರ, ವೀರಣ್ಣ ಕಡಕೋಳ, ಅಕ್ಕಮಹಾದೇವಿ ಕುಂಬಾರ, ಅನ್ನಪೂರ್ಣ ಕುಂಬಾರ, ಕಾವ್ಯಾ ಗುಂಡ್ಲೂರ, ರೂಪಾ ಕುಂಬಾರ, ಮಹಾಂತೇಶ ರಾಜಗೋಳಿ ಉಪಸ್ಥಿತರಿದ್ದರು. ಕಾವ್ಯಾ ಗುಂಡ್ಲೂರ ಸ್ವಾಗತಿಸಿ, ನಿರೂಪಿಸಿದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 