ಸತೀಶ ಶುಗರ್ಸ್ ಲಿ.ಕಾರ್ಖಾನೆ ಸದಾ ರೈತರ ಹಿತಾಸಕ್ತಿಗೆ ಬದ್ಧವಾಗಿದೆ: ಪ್ರದೀಪ ಕುಮಾರ ಇಂಡಿ
Satish Sugars Ltd. factory is always committed to the interests of farmers: Pradeep Kumar Indi
ಬೆಳಗಾವಿ 24 : ಸತೀಶ್ ಶುಗರ್ಸ್ ಲಿ.ಕಾರ್ಖಾನೆಯು ಸದಾ ರೈತರ ಹಿತಾಸಕ್ತಿಗೆ ಬದ್ಧವಾಗಿದ್ದು, ರೈತರ ಸಮೃದ್ಧಿಯೇ ನಮ್ಮ ಸಂಸ್ಥೆಯ ಬೆಳವಣಿಗೆಯ ಆಧಾರವಾಗಿದೆ ಎಂದು ಸತೀಶ ಶುಗರ್ಸ್ ಲಿ.ಕಾರ್ಖಾನೆ ಚೇರಮನ್ ಮತ್ತುಸಿ.ಎಫ್.ಓ ಪ್ರದೀಪಕುಮಾರ ಇಂಡಿ ಹೇಳಿದರು.ಸತೀಶ್ ಶುಗರ್ಸ ಲಿ. ಹುಣಶ್ಯಾಳ ಪಿ.ಜಿ.ಕಾರ್ಖಾನೆಯಲ್ಲಿ ನೂತನವಾಗಿ ಕಬ್ಬು ಅಭಿವೃದ್ದಿ, ಸಂಶೋಧನೆ ಮತ್ತು ಮಣ್ಣು ಪರೀಕ್ಷಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಕೃಷಿ ಪದ್ದತಿಯಲ್ಲಿ ವೈಜ್ಞಾನಿಕ ಮಾಹಿತಿ ಕೊರತೆ ಹಾಗೂ ಮಣ್ಣಿನ ಗುಣಧರ್ಮದ ಬಗ್ಗೆ ತಿಳಿಯದೇ ಅತಿಯಾದ ರಸಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಮತ್ತುಅಗತ್ಯ ಪೋಷಕಾಂಶಗಳು ಕಡಿಮೆಯಾಗುತ್ತಿವೆ. ಇದರಿಂದ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕುಂಟಿತಗೊಂಡು ಭೂಮಿಯ ಫಲವತ್ತತೆ ಇಳಿಮುಖವಾಗುತ್ತಿದೆ, ಇದರ ಪರಿಣಾಮವಾಗಿ ರೈತರು ಕಷ್ಟಪಟ್ಟು ಬೆಳೆಯುವ ಕಬ್ಬು ಮತ್ತು ಇತರೆ ಬೆಳೆಗಳ ಇಳುವರಿಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ರೈತ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದರು.
ಸತೀಶ ಶುಗರ್ಸ್ ಲಿ.ಕಾರ್ಖಾನೆಯು ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದು, ಇದು ರೈತರಿಗೆ ಕೃಷಿ ಕೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಿಗೆ ಕಬ್ಬಿನ ತಳಿಗಳ ಆಯ್ಕೆ, ಕೀಟ ಮತ್ತುರೋಗ ನಿರ್ವಹಣೆ, ನೀರಿನ ಸಮರ್ಕ ಬಳಕೆ, ಮಣ್ಣಿನ ಆರೋಗ್ಯಸಂರಕ್ಷಣೆ ಹಾಗೂ ಕೃಷಿ ಸಂಬಂಧಿತಇತರ ವಿಷಯಗಳ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಗುವುದು ಎಂದರು. ಬೆಳಗಾವಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ. ಹೆಚ್. ಡಿ. ಕೋಳೆಕರ, ಮಾತನಾಡಿ, ಮಣ್ಣಿನ ಸಂರಕ್ಷಣೆಯ ದೃಷ್ಟಿಯಿಂದ ಕೃಷಿ ಇಲಾಖೆಯ ವತಿಯಿಂದ“ ಖೆತ್ ಬಚಾವೋ ಆಂದೋಲನ” ಹಮ್ಮಿಕೊಳ್ಳಲಾಗುತ್ತಿದ್ದು, ಭೂತಾಯಿಯಿಂದ ಪಡೆಯುವದನ್ನು ಮಾತ್ರ ತಿಳಿದಿರುವ ನಾವು ಭೂತಾಯಿಯ ಆರೈಕೆ ಕಾರ್ಯವನ್ನು ಮರೆತಿದ್ದೇವೆ. ಭೂಮಿಯು ಭೌತಿಕ, ರಸಾಯನಿಕ ಮತ್ತುಜೈವಿಕ ಅಂಶಗಳನ್ನು ಹೊಂದಿದ್ದು, ಈ ಎಲ್ಲ ಅಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಕಾಯ್ದುಕೊಳ್ಳಬೇಕು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 