ಚಿನ್ನದ ಹುಡುಗಿ ಸಿಂಧು ಅವರನ್ನು ಶ್ಲಾಘಿಸಿದ ಸುಶೀಲ್ ಕುಮಾರ್

ನವದೆಹಲಿ, ಆ 26     ಬ್ಯಾಡ್ಮಿಂಟನ್ ಬಿಡಬ್ಲುಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರನ್ನು ಭಾರತದ ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ಸೋಮವಾರ ಶ್ಲಾಘಿಸಿದ್ದಾರೆ. 

ಸ್ವಿಜರ್ಲೆಂಡ್ ಬಸೆಲ್ನಲ್ಲಿ ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ  ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸಿಂಧು ಅವರು ಜಪಾನ್ನ ನಜೋಮಿ ಒಕುಹಾರ ವಿರುದ್ಧ 21-7, 21-7 ಅಂತರದಲ್ಲಿ ನೇರ ಸೆಟ್ಗಳಿಂದ ಜಯ ಸಾಧಿಸಿದ್ದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆದ್ದ ಭಾರತ ಮೊದಲ ಆಟಗಾರ್ತಿ ಎಂದ ನೂತನ ಮೈಲಿಗಲ್ಲನ್ನು ಮುತ್ತಿನ ನಗರಿಯ ಬೆಡಗಿ ಮಾಡಿದ್ದಾರೆ. 

"ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ವರ್ಣ ಪದಕ ಗೆದ್ದು ಪಿ.ವಿ ಸಿಂಧು ಅವರು ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಅವರಿಗೆ ಶುಭಾಶಯಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ. ಕಳೆದ ರಾತ್ರಿ ಸಿಂಧು ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ಅವರು ತುಂಬಾ ಖುಷಿಯಾಗಿದ್ದಾರೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ. ಚಿನ್ನದ ಹುಡುಗಿ ಕೋಚ್ ಗೋಪಿ ಚಂದ್ ಅವರಿಗೂ ಶುಭಾಶಯ ಕೋರಲು ಇಚ್ಚಿಸುತ್ತೇನೆ ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ. 

" ಮುಂದಿನ ವರ್ಷ ಜಪಾನ್ ಟೋಕಿಯೊ ಒಲಿಂಪಿಕ್ಸ್ ಸಮೀಪಿಸುತ್ತಿದ್ದು ಎಲ್ಲ ಆಟಗಾರರು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರಬೇಕು.  ಪಿ.ವಿ ಸಿಂಧು ವಿಶ್ವಮಟ್ಟದಲ್ಲಿ ಸಂಚಲನ ಮೂಡಿಸಿರುವುದು ದೇಶದ ಇನ್ನುಳಿದ ಕ್ರೀಡಾಪಟುಗಳಿಗೂ ಅವರು ಸ್ಪೂರ್ತಿಯಾಗಲಿದ್ದಾರೆ. ಆ ಮೂಲಕ ಜಾಗತಿಕ ಕ್ರೀಡೆಯಲ್ಲಿ ಭಾರತ ಪ್ರಜ್ವಲಿಸಲಿದೆ ಎಂದು ಸುಶೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.