ಲಖನೌ, ನ 7: ಅಯೋಧ್ಯೆ ವಿಷಯ ಕುರಿತ ಸುಪ್ರೀಂ ಕೋರ್ಟ್ನ್ ತೀರ್ಪನ್ನು ಗೌರವಿಸಲೇ ಬೇಕು ಜನರಿಗೆ ಮನವಿ ಮಾಡಿರುವ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ, ತೀರ್ಪುನ ನಂತರ ಎಲ್ಲರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಗುರುವಾರ ಒತ್ತಾಯಿಸಿದ್ದಾರೆ. 'ಅಯೋಧ್ಯೆ ತೀಪು ಒಂದೆರಡು ದಿನಗಳಲ್ಲಿ ಹೊರಬೀಳಲಿದೆ. ಸ್ವಾಭಾವಿಕವಾಗಿ, ಜನರು ತುಂಬಾ ಆತಂಕದಲ್ಲಿದ್ದಾರೆ. ನ್ಯಾಯಾಲಯದ ತೀರ್ಪನ್ನು ಏನೇ ಆದರೂ ದೇಶದ ಹಿತಾಸಕ್ತಿ ದೃಷ್ಠಿಯಿಂದ ಗೌರವಿಸಬೇಕು ಎಂಬುದು ತಮ್ಮ ಮನವಿಯಾಗಿದೆ.' ಮಾಯಾವತಿ ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ. 'ಜನರ ಜೀವ ಮತ್ತು ಆಸ್ತಿ-ಪಾಸ್ತಿಯನ್ನು ರಕ್ಷಿಸುವುದು ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಜನರ ದೈನಂದಿನ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಖಾತರಿ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.