ಜಮ್ಮು ಕಾಶ್ಮೀರ ದಲ್ಲಿ ಇಂಟರ್ ನೆಟ್ ಸ್ಥಗಿತ ಮರು ವಾರದೊಳಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ,  ಜ  ೧೦,  ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್ ಮೇಲೆ ವಿಧಿಸಿರುವ  ನಿಷೇಧ  ಹಾಗೂ ಭದ್ರತಾ ನಿರ್ಬಂಧಗಳನ್ನು ವಾರದೊಳಗೆ  ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ  ಶುಕ್ರವಾರ  ಆದೇಶಿಸಿದೆ. ಇಂಟರ್ನೆಟ್ ಸ್ಥಗಿತಗೊಳಿಸುವುದು  ಸಂವಿಧಾನ  ವಿರುದ್ದವಾದದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಂವಿಧಾನದ   ೧೯ ಕಲಂನಡಿ ಇಂಟರ್ ನೆಟ್  ಸೇವೆಯೂ ಒಂದು ಭಾಗವಾಗಿದೆ  ಎಂದು  ಹೇಳಿರುವ  ನ್ಯಾಯಾಲಯ  ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ  ಅಸಮಧಾನ ವ್ಯಕ್ತಪಡಿಸಿದೆ. . ಎಲ್ಲಾ ತುರ್ತು ಸೇವೆಗಳಿಗೆ   ಇಂಟರ್ ನೆಟ್  ಸೇವೆಗಳನ್ನು ಪುನರ್ ಆರಂಭಿಸಬೇಕೆಂದು  ಅದು ಆದೇಶಿಸಿದೆ. ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ನ್ಯಾಯಮೂರ್ತಿಗಳ  ನ್ಯಾಯಪೀಠ ಅಂತರ್ಜಾಲ ನಿಷೇಧವನ್ನು ಒಂದು ವಾರದೊಳಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ      ಜೀವಿಸುವ  ಹಕ್ಕು  ಹಾಗೂ ಸ್ವಾತಂತ್ರ್ಯದ ನಡುವೆ ಸಮತೋಲನದ ಅವಶ್ಯಕತೆಯಿದೆ ಎಂದು ಹೇಳಿದೆ.  ಸರ್ಕಾರಿ ವೆಬ್ಸೈಟ್ಗಳು, ಬ್ಯಾಂಕಿಂಗ್ ಮತ್ತು ಅಗತ್ಯ ಸೇವೆಗಳಿಗೆ  ಅಂತರ್ಜಾಲ ಲಭ್ಯವಾಗಿಸಬೇಕು. ಅತ್ಯಂತ  ಕಠಿಣ ಪರಿಸ್ಥಿತಿಗಳಲ್ಲಿ ಮಾತ್ರ      ಇಂಟರ್ ನೆಟ್  ಸೇವೆಯ ಮೇಲೆ ನಿಷೇಧ ವಿಧಿಸಬಹುದಾಗಿದೆ ಎಂದು  ತಿಳಿಸಿದೆ.